ಶಿಕ್ಷಕರ ಬಡ್ತಿ ಪ್ರಕ್ರಿಯೆಯಿಂದ ತಾಲೂಕಿನ ಶಿಕ್ಷಕರಿಗೆ ಅನ್ಯಾಯ

????????????????????????????????????

ಸಿರುಗುಪ್ಪ, ಡಿ.28: ನಗರದ ಕ್ಷೇತ್ರ ಸಂಪನ್ಮೂಲ ಕಾರ್ಯಾಲಯದಲ್ಲಿ ಪ್ರಾಥಮಿಕ ಶಾಲಾ ಸಹ ಶಿಕ್ಷಕರಿಂದ ಬಡ್ತಿ ಮುಖ್ಯಗುರುಗಳ ಅಂತಿಮ ಪಟ್ಟಿಯಲ್ಲಿ ಪಿ.ಆರ್.ಸಿ. ಸೇರ್ಪಡೆ ಮಾಡುವಂತೆ ತಾಲೂಕಿನ ವಿವಿಧ ಶಿಕ್ಷಕರು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಕಾರ್ಯನಿರ್ವಾಹಣಾಧಿಕಾರಿಗೆ ಬಿ.ಇ.ಒ. ಪಿ.ಡಿ. ಭಜಂತ್ರಿಯವರ ಮೂಲಕ ಮನವಿಯನ್ನು ಸಲ್ಲಿಸಿದರು.
ನಂತರ ಶಿಕ್ಷಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪಿ.ದಿವಾಕರನಾರಾಯಣ ಮಾತನಾಡಿದ ಅವರು ಹರಪನಳ್ಳಿ ಬಳ್ಳಾರಿಗೆ ಸೇರಿದ ನಂತರ ಶಿಕ್ಷಣ ಇಲಾಖೆಯಲ್ಲಿ ನಡೆಯುವ ಬಡ್ತಿ ಪ್ರಕ್ರಿಯೆಯು ಅನೇಕ ಗೊಂದಲದ ಗೂಡಾಗಿದೆ. ಮೂಲತ ಹರಪನಳ್ಳಿ ತಾಲೂಕಿನ ಶಿಕ್ಷಕರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, 2013ರಲ್ಲಿ ರಾಜ್ಯ ವೃಂದಕ್ಕೆ ಅಭಿಮತವನ್ನು ಚಲಾಯಿಸುತ್ತಾರೆ, ರಾಜ್ಯ ವೃಂದದಲ್ಲಿ(ಪಿ.ಆರ್.ಸಿ) ಮುಂದುವರೆಯಲು ಬಯಸುತ್ತಾರೆ. 2019ರಲ್ಲಿ ಹರಪನಳ್ಳಿ ಬಳ್ಳಾರಿಗೆ ಜಿಲ್ಲೆಗೆ ಸೇರಿದ ನಂತರ ಸದರಿ ಶಿಕ್ಷಕರನ್ನು ಯಾವುದೇ ಅಭಿಮತವನ್ನು ಕೇಳಿ ಪಡೆಯದೆ ಮತ್ತು ಸ್ಥಳೀಯ ವೃಂದದವರು ಎಂದು ಪರಿಗಣಿಸಿ ಏಕ ರೂಪವಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಬಡ್ತಿ ನೀಡಲು ಮುಂದಾಗಿದ್ದಾರೆ. ಇದ್ದರಿಂದ ನಿರಂತರ ಸೇವೆ ಸಲ್ಲಿಸಿದ ಶಿಕ್ಷಕರು ಪಿ.ಆರ್.ಸಿಯಲ್ಲಿ ಮುಂದುವರೆಯಲು ಬಯಸಿದವರಿಗೆ ಅನ್ಯಾಯವಾಗುತ್ತದೆ ಇದನ್ನು ಸರಿಪಡಿಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿಗೆ ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಈ ಬಡ್ತಿ ಪ್ರಕ್ರಿಯೇಯು 1957ರ ಬಡ್ತಿ ನಿಯಮ 5ರ ಮೇರಿಟ್ ಮತ್ತು ರೋಸ್ಟರ್ ನಿಯಮ ಉಲ್ಲಂಗನೆ ಮಾಡಿ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಿಂದ ಮೇರಿಟ್ ಮೇಲೆ ನೇಮಾಕಾತಿ ಹೊಂದಿದ ಶಿಕ್ಷಕರಿಗೆ ಅನ್ಯಾಯವಾಗುತ್ತದೆ, ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ ಬಡ್ತಿ ನೀಡುವಾಗ ಅನಿಸರಿಸುವ ಒಂದು ನಿಯಮ ಅನ್ವಯ ಮತ್ತು ಪ್ರಾಥಮಿಕ ಶಾಲೆಯ ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವಾಗ ಅನುಸರಿಸುವ ನಿಯಮಗಳೇ ಬೇರೆರೀತಿಯವಾಗಿ ಅನ್ವಯಿಸುತ್ತಿರುವುದರಿಂದ ಶಿಕ್ಷಣ ಇಲಾಖೆಯ ನಿಯಮಗಳು ಅನುಮಾನಸ್ಪದಗಳಿಗೆ ದಾರಿ ಮಾಡಿಕೊಟ್ಟಿವೆ, ಈ ಬಡ್ತಿ ಪ್ರಕ್ರಿಯೆಯನ್ನು ಕುರಿತು ನ್ಯಾಯಕ್ಕಾಗಿ ನ್ಯಾಯಲಾಯ ಮತ್ತು ಇಲಾಖೆಯ ಮೇಲಾಧಿಕಗಳ ಮಟ್ಟಕ್ಕೆ ಹೋಗಿ ಹೊರಾಟ ನಡೆಸಲು ಶಿಕ್ಷಕರು ಸಿದ್ದವಾಗಿದೆ ಎಂದು ತಿಳಿಸಿದರು.
ಶಿಕ್ಷಕರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚೊಕ್ಕ ಹನುಮಂತಗೌಡ, ಸರ್ಕಾರಿ ನೌಕರರ ಒಕ್ಕೂಟ ಸಂಘದ ತಾಲೂಕು ಅಧ್ಯಕ್ಷ ಈರಣ್ಣ, ಶಿಕ್ಷಕರಾದ ನಾಗರಾಜ, ಮೇರಿಲೀಲಾ, ಚಂದ್ರಶೇಖರ, ಬಾಬು ರಾಜೇಂದ್ರ ಇದ್ದರು.