ಕಲಬುರಗಿ:ಸೆ.23: 2023ರ ಫೆಬ್ರವರಿ 1ರನ್ವಯ 371(ಜೆ) ಸುತ್ತೋಲೆಯ ಆದೇಶದಂತೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ನಡೆದ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕದ ಸುತ್ತೋಲೆಯಂತೆಯೇ ನೇಮಕಾತಿ ಪ್ರಕ್ರಿಯೆ ನಡೆಯಬೇಕೆಂದು ಸರ್ವೋಚ್ಛ ನ್ಯಾಯಾಲಯವು ತೀರ್ಪು ನೀಡಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ತೀರ್ಪು ಸ್ವಾಗತಾರ್ಹವಾಗಿದೆ ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ತಿಳಿಸಿದ್ದಾರೆ.
ಈ ಹಿಂದೆ ಕೆಪಿಟಿಸಿಎಲ್‍ನಲ್ಲಿಯೂ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಮಾಡಲಾಗಿತ್ತು. ಅಲ್ಲಿಯೂ ಸಹ 2023ರ ಫೆಬ್ರವರಿ 1ರ ಸುತ್ತೋಲೆಯ ಆದೇಶವನ್ನು ಪಾಲಿಸಲುನ್ಯಾಯಾಲಯ ಆದೇಶಿಸಿದೆ ಎಂದು ಅವರು ಹೇಳಿಕೆಯಲ್ಲಿ ಸ್ಮರಿಸಿದ್ದಾರೆ.
2013ರ ಜನವರಿ 1ರಂದು ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ಅನುಚ್ಛೇದ 371 (ಜೆ) ಜಾರಿಗೆ ಬಂದರೂ ಸಹ ಅದರ ಅನುಷ್ಠಾನ ಮಾತ್ರ ಸಮರ್ಪಕವಾಗಿರಲಿಲ್ಲ. ಇದರಿಂದಾಗಿ ಈ ಭಾಗದ ಅಭ್ಯರ್ಥಿಗಳಿಗೆ ಸರಿಯಾದ ನ್ಯಾಯ ದೊರತಿರಲಿಲ್ಲ. ನಾನು ಈ ವಿಷಯದ ಕುರಿತು ಕಳೆದ 2022ರ ಡಿಸೆಂಬರ್ 14ರಂದು ದಿನಾಂಕ:14-12-2022 ರಂದು ಈ ಹಿಂದಿನ ಸಚಿವರು ಹಾಗೂ ಕಲ್ಯಾಣ ಕರ್ನಾಟಕ ಭಾಗದ 371(ಜೆ) ಅನುಷ್ಠಾನ ಸಮಿತಿಯ ಅಧ್ಯಕ್ಷ ಶ್ರೀರಾಮಲು ಅವರಿಗೆ ಖುದ್ದಾಗಿ ಭೇಟಿಯಾಗಿ 371(ಜೆ) ಮೀಸಲಾತಿಯಲ್ಲಿ ಅಗುತ್ತಿರುವ ಅನ್ಯಾದ ಬಗ್ಗೆ ಸವಿಸ್ತಾರವಾಗಿ ವಿವರಿಸಿದ್ದೆ, ನನ್ನ ಮನವಿಗೆ ಅವರು ಸ್ಪಂದಿಸಿ 2022ರ ಡಿಸೆಂಬರ್ 29ರಂದು ಬೆಳಾಗಾವಿಯಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಂಡು ಈ ಹಿಂದಿನ ಮಿಸಲಾತಿಯನ್ನು ಸರಿಪಡಿಸಿ ಅದನ್ನು ಸರ್ಕಾರಿ ಆದೇಶ ರೂಪದಲ್ಲಿ ಜಾರಿಗೆ ತರಲು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ,ಗೆ ಕಳುಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಅದರಂತೆ ಸರ್ಕಾರವು 2023ರ ಫೆಬ್ರವರಿ 1ರಂದು 371 (ಜೆ) ಮೀಸಲಾತಿಗೆ ಸಂಬಂಧಿಸಿದಂತೆ ಹೊಸ ಸುತ್ತೋಲೆಯನ್ನು ಹೊರಡಿಸಿ 2020ರ ಜೂನ್ 6ರ ಗೆಜೆಟೆಡ್ ಪ್ರೊಬೇಷನರಿ ಹೊರತುಪಡಿಸಿ ಬೇರೆ ಎಲ್ಲ ನೇಮಕಾತಿಗಳಿಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಹಿಂಪಡೆಯಲಾಗಿದೆ. ಈಗ 2023ರ ಫೆಬ್ರವರಿ 1ರ ಆದೇಶದಂತೆಯೆ ಈ ಭಾಗದಲ್ಲಿ ನೇಮಕಾತಿಯಾಗುತ್ತಿರುವುದು ಸರಿಯಾದ ಕ್ರಮವೆಂದು ನ್ಯಾಯಾಲಯ ಆದೇಶಿಸಿರುವುದು ನಮ್ಮ ಭಾಗದ ಅಭ್ಯರ್ಥಿಗಳಿಗೆ ಸಂದ ಜಯ ಹಾಗೂ ಹೆಚ್ಚಿನ ಆಯ್ಕೆಯಾಗಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
2023ರ ಫೆಬ್ರವರಿ 1ರ ಆದೇಶದಂತೆಯೇ ಕಲ್ಯಾಣ ಕರ್ನಾಟಕ ಮೀಸಲಾತಿ ಅನ್ವಂiÀದಂತೆ ಪ್ರೌಢ ಶಾಲಾ ಮುಖ್ಯಗುರುಗಳ ಮುಂಬಡ್ತಿಯು ನಡೆಯಬೇಕೆಂದು, ಈಗಾಗಲೇ ನಾನು ಸಚಿವರಿಗೆ ಹಾಗೂ 371(ಜೆ) ಅನುಷ್ಠಾನ ಉಪ ಸಮಿತಿಯ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರಿಗೆ ಪತ್ರದ ಮೂಲಕ ಮನವಿಯನ್ನು ಮಾಡಿರುವೆ. ಅದಕ್ಕೆ ಅವರು ಸ್ಪಂದಿಸಿ ನಮ್ಮ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ನಮೋಶಿ ಅವರು ತಿಳಿಸಿದ್ದಾರೆ.