ಶಿಕ್ಷಕರ ನೇಮಕ ಸೇರಿ ನಾನಾ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ನ.21:-ಮಹಾರಾಜ ಕಾಲೇಜಿಗೆ ಅಗತ್ಯ ಶಿಕ್ಷಕರ ನೇಮಕಾತಿ, ತರಗತಿಗಳನ್ನು ಸರಿಯಾಗಿ ನಡೆಸಲು ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ಒತ್ತಾಯಿಸಿ, ಎಐಡಿಎಸ್‍ಒ ಸಂಘಟನೆ ನೇತೃತೃದಲ್ಲಿ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದ ಮುಂಭಾಗ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ, ಶಿಕ್ಷಕರ ನೇಮಕವಾಗದೇ ಸರಿಯಾಗಿ ಪಾಠಗಳೂ ನಡೆಯುತ್ತಿಲ್ಲ. ಹಾಗಾಗಿ ಅಗತ್ಯ ಶಿಕ್ಷರರನ್ನು ನೇಮಕಾತಿ ಸೇರಿದಂತೆ ಇನ್ನಿತರ ಬೇಡಿಕೆಗಳಾದ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳ ಪ್ರವೇಶ ನೀಡಬೇಕು, ಕಾಲೇಜಿನಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ತರಗತಿಗಳಲ್ಲಿ ಸ್ವಚ್ಛತೆ ಕಾಪಾಡಬೇಕು, ಗ್ರಂಥಾಲಯದಲ್ಲಿ ಓದಲು ದಿನ ಪತ್ರಿಕೆಗಳನ್ನು ಒದಗಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಕುಲಪತಿ ಪೆÇ್ರಘಿ.ಎನ್.ಕೆ.ಲೋಕನಾಥ್ ಅವರು, ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಒ ಜಿಲ್ಲಾಧ್ಯಕ್ಷರು ಸುಭಾಷ್, ಪದಾಧಿಕಾರಿಗಳಾದ ನಿತಿನ್ ,ಚಂದ್ರಿಕಾ, ಬೀರಪ್ಪ, ಅಭಿ ವಿದ್ಯಾರ್ಥಿಗಳಾದ ಪುನೀತ್, ರಕ್ಷಿತ, ಸಿದ್ದರಾಜು, ಸತೀಶ್, ರಹಿಲ್ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.