ಶಿಕ್ಷಕರ ನೇಮಕಾತಿ ಹಗರಣ ಅರ್ಪಿತಾ ಮನೆಯಲ್ಲಿ ೨೯ ಕೋಟಿ ರೂ. ಮತ್ತೆವಶ

ಕೊಲ್ಕತ್ತಾ ಜು.೨೮- ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಅರ್ಪಿತಾ ಮುಖರ್ಜಿ ಮೊತ್ತೊಂದು ಮನೆಯಲ್ಲಿ ೨೯ ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು ಇದುವರೆಗೂ ೫೦ ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಳ್ಳಲಾಗಿದೆ.

ತಮ್ಮಮನೆಯಲ್ಲಿ ಕೋಟಿ ಕೋಟಿ ರೂಪಾಯಿ ಇದ್ದರೂ ತಾವು ಇದ್ದ ಫ್ಲಾಟ್ ನಿರ್ವಹಣೆ ಶುಲ್ಕ ೧೧,೮೧೯ ರೂ ಪಾವತಿಸಿರಲಿಲ್ಲ ಎನ್ನುವ ಸಂಗತಿ ಬಯಲಾಗಿದೆ.

ಬಹುಕೋಟಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಸಚಿವರ ಆಪ್ತ ಸಹಾಯಕಿ, ಅರ್ಪಿತಾ ಅವರ ಬೆಲ್ಘಾರಿಯಾದಲ್ಲಿರುವ ಮತ್ತೊಂದು ಮನೆಯಿಂದ ೨೯ ಕೋಟಿಗೂ ಅಧಿಕ ನಗದನು ಹಾಗು ೫ ಕೆ.ಜಿ ಚಿನ್ನವನ್ನು ಜಾರಿ ನಿರ್ದೇಶನಾಲಯ ವಶಪಡಿಕೊಂಡಿದ್ದು ನೇಮಕಾತಿ ಹಗರಣ ಹೊಸ ತಿರುವು ಪಡೆದುಕೊಂಡಿದೆ.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್, ಪ್ರಕರಣ ಹಳೆಯದಾಗಿದ್ದು ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ ಆದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿವ “ಪಾರ್ಥ ಚಟರ್ಜಿ ದೀರ್ಘಕಾಲದವರೆಗೆ ಸಿಬಿಐ, ಇಡಿ ತನಿಖೆ ಎದುರಿಸುತ್ತಿದ್ದಾರೆ, ಅದು ಅವರನ್ನು ಭೇದಿಸಲು ಕಠಿಣವಾಗಿದೆ ಆದರೆ ಅರ್ಪಿತಾ ಮುಖರ್ಜಿ ಈಗಾಗಲೇ ಎಲ್ಲವನ್ನೂ ಹೇಳಲು ಪ್ರಾರಂಭಿಸಿದ್ದಾರೆ ಎಂದಿದ್ದಾರೆ.

ಮಿನಿ ಬ್ಯಾಂಕ್:

ಬಂಧನಕ್ಕೆ ಒಳಗಾಗಿರುವ ಸಚಿವ ಪಾರ್ಥ ಚಟರ್ಜಿ ಅವರು ಅರ್ಪಿತಾ ಫ್ಲಾಟ್ ಅನ್ನು “ಮಿನಿ ಬ್ಯಾಂಕ್” ಆಗಿ ಪರಿವರ್ತಿಸಿದ್ದರು ಎನ್ನಲಾಗಿದೆ.

ಅರ್ಪಿತಾ ಮುಖರ್ಜಿ ವಿಚಾರಣೆಯ ಉದ್ದಕ್ಕೂ ಸಹಕರಿಸಿದ್ದಾರೆ ಆದರೆ ಪಾರ್ಥ ಚಟರ್ಜಿ ಯಾವುದಕ್ಕೂ ಉತ್ತರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ

ಪಕ್ಷಕ್ಕೆ ಕಳಂಕ:

ಅರ್ಪಿತಾ ಮುಖರ್ಜಿ ಮನೆಯಿಂದ ಅಪಾರ ಪ್ರಮಾಣದ ನಗದು ಪತ್ತೆಯಾಗಿರುವುದು ಪಕ್ಷಕ್ಕೆ ಕಳಂಕ ತಂದಿದೆ ಎಂದು ತೃಣಮೂಲ ರಾಷ್ಟ್ರೀಯ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ. “

ಪಾರ್ಥ ಚಟರ್ಜಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಸಚಿವರ ಹೆಸರಿನಿಂದ ಕರೆಯುವುದನ್ನು ಪಕ್ಷ ನಿಲ್ಲಿಸಿದೆ ಎಂದಿದ್ದಾರೆ.