
ಹುಬ್ಬಳ್ಳಿ, ಸೆ10: ಶಕುಂತಲಾ ನರ್ಸಿಂಗ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಪ್ರೋಪೆಸರ್ ರಚಲ್ ಪ್ರ ರೇಚಲ್ ಪ್ರಕಾಶ ಮಾತನಾಡಿ, ಗುರುಗಳಿಗೆ ಇರಬೇಕಾದ ವಿಶಿಷ್ಟ ಗುಣಗಳಾದ ಶ್ರದ್ದೆ, ಜ್ಞಾನ, ಸಮಯ ಪ್ರಜ್ಞೆಯನ್ನು ಹೊಂದಿದವರಾಗಿ ಯಾವತ್ತು ವಿದ್ಯಾರ್ಥಿಗಳ ಭವಿಷ್ಯದ ಶ್ರೇಯೋಭಿವೃದ್ಧಿಯನ್ನು ಬಯಸುವಂತವರಾಗಿರಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪ್ರೊ. ದೀಪಾರಾಣಿ, ಮೇರಿರಾಣಿ, ದಿವ್ಯಾ, ಪ್ರೊ. ಸುನೀಲ್ ಮುಗಳಿ, ಸುಳ್ಳದ, ಪ್ರೊ. ಶ್ರೀದೇವಿ ಆರ್., ಪ್ರೊ. ಭೀರಾಹರ ಹಾಗೂ ಕಾಲೇಜಿನ ಆಡಳಿತ ಅಧಿಕಾರಿ ಹನುಮರಡ್ಡಿ ತೆಗ್ಗಿನಮನಿ ಇನ್ನೂ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶರಾನ ನಡೆಸಿಕೊಟ್ಟರೆ, ವಿದ್ಯಾರ್ಥಿಗಳಾದ ಶ್ರದ್ದಾ ಸ್ವಾಗತಿಸಿದರು. ಸುಜಾತಾ ವಂದಿಸಿದರು.