ಶಿಕ್ಷಕರ ದಿನಾಚರಣೆ ಹಾಗೂ ವೃತ್ತಿ ಮಾರ್ಗದರ್ಶನ ಕುರಿತು ಒಂದು ದಿನದ ಕಾರ್ಯಗಾರ

ಬೀದರ :ಸೆ.7: ನಗರದ ಹೈ.ಕ.ಶಿ. ಸಂಸ್ಥೆಯ ಬಿ.ವಿ. ಭೂಮರಡ್ಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ದಿನಾಂಕ: 05-09-2023ರಂದು ಶಿಕ್ಷಕರ ದಿನಾಚರಣೆ ಪ್ರಯುಕ್ತ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ದೇಶಪಾಂಡೆ ಫೌಂಡೇಷನ್ ಸಹಭಾಗಿತ್ವದಲ್ಲಿ ವೃತ್ತಿಮಾರ್ಗದರ್ಶನ ಹಾಗೂ ಉದ್ಯೋಗಾವಕಾಶಗಳ ಕುರಿತ ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿಯವರು ಬೀದರ ಜಿಲ್ಲೆಯ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ವಸತಿಯುಕ್ತ ತರಬೇತಿಯನ್ನು ನೀಡಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವ ಒಂದು ಉಪಯುಕ್ತ ಸಂಸ್ಥೆಯಾಗಿ ದೇಶಪಾಂಡೆ ಫೌಂಡೇಷನ್ ಕಾರ್ಯನಿರ್ವಹಿಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕೆಂದು ಕರೆ ಕೊಟ್ಟರು.

ದೇಶಪಾಂಡೆ ಫೌಂಡೇಷನ್ ಡಿವಿಜನ್ ಲೀಡ್ ಮಿಸ್ಟರ್ ರಾಮಕುಮಾರ, ಅಜೀತ ಕುಲಕರ್ಣಿ ಹಾಗೂ ಮಿಸ್ ಪವಿತ್ರಾ ಆರ್.ಕೆ. ವಿದ್ಯಾರ್ಥಿಗಳಿಗೆ ದೇಶಪಾಂಡೆ ಫೌಂಡೇಷನ್ ತರಬೇತಿ ಕಾರ್ಯ ಹಾಗೂ ಉದ್ಯೋಗವಕಾಶಗಳ ಕುರಿತು ಮಾರ್ಗದರ್ಶನ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕು: ಅಂಜಲಿ ಮತ್ತು ಕುಂಕುಮ್ ಪ್ರಾರ್ಥನೆಯನ್ನು ನೆರವೇರಿಸಿದರೆ, ಸ್ವಾಗತವನ್ನು ಡಾ. ಮಲ್ಲಿಕಾರ್ಜುನ ಕೋಟೆ ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಡಾ. ಹಣಮಂತಪ್ಪ ಬಿ. ಸೇಡಂಕರ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.