ಶಿಕ್ಷಕರ ದಿನಾಚರಣೆ, ಸಾಧಕ ಶಿಕ್ಷಕರಿಗೆ ಸನ್ಮಾನ

??????

ಗುರುಮಠಕಲ್ : ಮಗುವನ್ನು ಯಾವ ರೀತಿ ಬೆಳೆಸಬೇಕೆಂದು ಹೆತ್ತವರು ಯೋಚಿಸಿದರೆ ಮಗುವಿನ ಜನನದ ಬಳಿಕ ಎಲ್ಲಾ ಹಂತದಲ್ಲೂ ಶೈಕ್ಷಣಿಕ ಮತ್ತು ಇತರ ಎಲ್ಲಾ ರೀತಿಯಲ್ಲೂ ಮಾರ್ಗದರ್ಶನ ನೀಡಿ, ತಪ್ಪುಗಳನ್ನು ತಿಳಿಸಿ ತಿದ್ದುವ ಮೂಲಕ ಸತ್ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತರೆಡ್ಡಿ ಗುನ್ನಿ ಅಭಿಪ್ರಾಯಪಟ್ಟರು.

ಪಟ್ಟಣದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಬಂಧುಗಳು ಗುರುಮಠಕಲ್ ತಾಲೂಕ 2020-21ನೇ ಸಾಲಿನ ಶಿಕ್ಷಣ ದಿನಾಚರಣೆಯ ಸನ್ಮಾನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜಕ್ಕೆ ಜ್ಞಾನದ ಬೆಳಕು ನೀಡುವ ಶಿಕ್ಷಕರಿಗೆ ಎಷ್ಟು ಗೌರವ ಸಲ್ಲಿಸಿದರೂ ಸಾಲದು. ಸೈನಿಕರು, ಕೃಷಿಕರು ಮತ್ತು ಶಿಕ್ಷಕರು, ಹೀಗೆ ಮೂರು ವರ್ಗದ ಸೇವೆಯಿಂದಾಗಿ ದೇಶ ಅಭಿವೃದ್ಧಿ ಹಾಗೂ ಸುರಕ್ಷಿತವಾಗಿದೆ ಎಂದರು.

ನಿರಂತರ ಕ್ರಿಯಾಶೀಲತೆಯ ಮೂಲಕ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಆ ಮೂಲಕ ದೇಹ ಮತ್ತು ಮನಸ್ಸನ್ನು ಆರೋಗ್ಯದಿಂದ ಇರಿಸಲು ಸಾಧ್ಯವಿದೆ. ಅಂತಹ ಕ್ರಿಯಾಶೀಲತೆಯನ್ನು ಶಿಕ್ಷಕರು ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾದಿರಿಯಾಗಬೇಕು ಎಂದು ಹೇಳಿದರು.

ರಾಜ್ಯಪರಿಷತ್ ನೌಕರರ ಸಂಘದ ಸದಸ್ಯ ಸಂತೋಷ ಕುಮಾರ ನೀರೆಟಿ ಪ್ರಸ್ತಾವಿಕ ಮಾತನಾಡಿದರು, ಮಕ್ಕಳಲ್ಲಿ ಶಿಕ್ಷಕರಾಗುವ ಮನೋಭಾವ ಮೂಡಿಸಲು ಶ್ರಮಿಸಬೇಕು ಎಂದರು.

ಪೂಜ್ಯಾ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಜಿ ದಿವ್ಯ ಸಾನಿದ್ಯವಹಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಧಕ ಶಿಕ್ಷಕರು ಹಾಗೂ ಹೆಚ್ಚು ಅಂಕಗಳು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ, ಶಿಕ್ಷಣ ಸಂಯೋಜಕ ಶಿವರಾಜ ಸಾಕ, ಕಿಷ್ಟಾರೆಡ್ಡಿ, ಲಕ್ಷ್ಮಿಕಾಂತರೆಡ್ಡಿ, ಪಿಆರ್‍ಪಿ ಶಶಿಕಾಂತ, ಸಿಆರ್‍ಪಿ ನಾರಾಯಣರೆಡ್ಡಿ, ವಿನೋದ ಕುಮಾರ ಪಂಚಾಲ್, ಭೀಮಪ್ಪ, ಮಲ್ಲಯ್ಯ, ಮಲ್ಲಿಕಾರ್ಜುನ ಹೊಸಮನಿ ಉಪಸ್ಥಿತರಿದ್ದರು.