ಶಿಕ್ಷಕರ ದಿನಾಚರಣೆ ಸರಳ ಆಚರಣೆಗೆ ನಿರ್ಧಾರ

ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ:ಸೆ.02 ಕೋವಿಡ್ ಮೂರನೆ ಅಲೆಯ ಹಿನ್ನೆಲೆಯಲ್ಲಿ ಈ ವರ್ಷ ಜರುಗುವ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲು ತಾಲೂಕು ಆಡಳಿತ ನಿರ್ಧಾರ ತೆಗೆದುಕೊಳ್ಳಲಾಯಿತು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಬುಧವಾರ ಜರುಗಿದ ಸರ್ವಪಲ್ಲೆ ರಾಧಕೃಷ್ಣನ್‍ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಕುರಿತು, ಶಿಕ್ಷಕರ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ, ಶಿಕ್ಷಕರ ದಿನಾಚರಣೆಯ ಸಮಿತಿ ಕಾರ್ಯದರ್ಶಿ ಬಿಇಒ ಶೇಖರಪ್ಪ ಹೊರಪೇಟೆಯವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗತೆದುಕೊಳ್ಳಲಾಯಿತು. ಬಿಇಒ ಶೇಖರಪ್ಪ ಹೊರಪೇಟೆ ಮಾತನಾಡಿ, ಸರ್ಕಾರದ ಆದೇಶದಂತೆ ಮತ್ತು ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಹತ್ತಾರು ಜನ ಅತಿಥಿಗಳು ಮೀರದಂತೆ, ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚುಜನ ಸೇರದಂತೆ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕಾಗಿದೆ ಎಂದರು.
ಪ್ರತಿವರ್ಷ ಸರ್ವಪಲ್ಲೆ ರಾಧಕೃಷ್ಣನ್‍ರವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಹಾಗೂ ಪತ್ರಕರ್ತರ ಸಂಘದಿಂದ ಶಿಕ್ಷಕರಿಗಾಗಿ ಕ್ರೀಡಾ ಸ್ಪರ್ಧೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಏರ್ಪಡಿಸಲಾಗುತಿತ್ತು. ಕಳೆದ ವರ್ಷ ಕೋವಿಡ್-19 ಹಾವಳಿಯ ಪರಿಣಾಮ ಸರಳವಾಗಿ ಆಚರಿಸಿದಂತೆ, ಬೇರೆಲ್ಲಾ ಕಾರ್ಯಕ್ರಮಗಳನ್ನು ರದ್ಧುಮಾಡಿ, ಈ ವರ್ಷವೂ ಗುರುಭವನದಲ್ಲಿ ಸೆ.5ರಂದು ಸರಳವಾಗಿ ಆಚರಣೆಗೊಳ್ಳಲಿದೆ ಎಂದರು.
ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ ಮಾತನಾಡಿದರು. ಬಿಸಿಯೂಟ ತಾಲೂಕು ಅಧಿಕಾರಿ ರವಿನಾಯ್ಕ್, ಪ್ರೌಢಶಾಲೆಯ ಓಬಯ್ಯ, ದೈಹಿಕ ಶಿಕ್ಷಕರ ತಾಲೂಕು ಪರಿವೀಕ್ಷಕ ಕೊಟ್ರೇಶ್, ಗುರುಭವನ ಸಮಿತಿ ಉಸ್ತುವಾರಿ ಕಾರ್ಯದರ್ಶಿ ಪ್ರಹ್ಲಾದ್, ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಾಳದ ವೀರನಗೌಡ, ಟಿ.ಸೋಮಶೇಖರ, ಗೋಣಿಬಸಪ್ಪ, ಶಾಂತಮೂರ್ತಿ, ರಾಜಶೇಖರಪ್ಪ, ಉಜ್ಜನಗೌಡ, ನಾಗರಾಜ್, ಇಟ್ಟಿಗಿ ಮಂಜುನಾಥ, ಎಸ್.ಎಂ.ಸಾವಿತ್ರಿ, ಶಾಂತಕುಮಾರಿ, ದಾದಿಬೀ, ಮಹಾಂತೇಶ್ ನಾಯ್ಕ್, ಹಿರ್ಯಾನಾಯ್ಕ್, ಬಸವನಗೌಡ್ರು, ಜಜ್ಜುರಿ ಉಮೇಶ್ ಮತ್ತಿತರು ಇದ್ದರು.
ಶಿಕ್ಷಕರ ಸಂಘದ ಕಾರ್ಯದರ್ಶಿ ಎನ್.ಡಿ.ಕೆರೆ ಕೊಟ್ರೇಶ್, ಶಿಕ್ಷಣ ಸಂಯೋಜಕರಾದ ಮುಸ್ತಾಕ್ ಮತ್ತು ಶಿವಲಿಂಗಸ್ವಾಮಿ ನಿರ್ವಹಿಸಿದರು.