ಶಿಕ್ಷಕರ ದಿನಾಚರಣೆ: ಶ್ರೇಷ್ಠ ಗುರು ಪ್ರಶಸ್ತಿ

(ಸಂಜೆವಾಣಿ ವಾರ್ತೆ)
ಮುನವಳ್ಳಿ,ಸೆ7: ಪಟ್ಟಣದ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯ ಸಾನಿಧ್ಯ ವಹಿಸಿದ ಶ್ರೀ ಮುರುಘೇಂದ್ರ ಶ್ರೀಗಳು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಮಕ್ಕಳಿಗೆ ವಿದ್ಯೆ ಬುದ್ದಿ ಹೇಳುವುದರ ಜೊತೆಗ ಕ್ರಿಯಾಶೀಲ ಶಿಕ್ಷಕರು ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಾರೆ. ಮಕ್ಕಳ ಶ್ರೇಯೋಭಿವೃದ್ದಿ ಜೊತೆಗೆ ಸಮಾಜದ ಶ್ರೇಯೋಭಿವೃದ್ದಿಯನ್ನು ಬಯಸುತ್ತಾರೆ ಮಕ್ಕಳು ದುಶ್ಚಟಗಳಿಗೆ ಬಲಿಯಾಗದೆ ತಂದೆ ತಾಯಿಯೆ ಮೊದಲ ಶಿಕ್ಷಕರು ಮನೆಯ ಮೊದಲ ಪಾಠಶಾಲೆಯನ್ನುವಹಾಗೆ ಮಕ್ಕಳು ಶಿಕ್ಷಕರಿಗೆ ಗೌರವ ಕೊಟ್ಟು ಒಳ್ಳೆಯ ಶಿಕ್ಷಣವನ್ನು ಪಡೆದು ಶಿಕ್ಷಕರ ಹಾಗೂ ಕಲಿತೆ ಸಂಸ್ಥೆಯ ಹೆಸರನ್ನು ತರಬೇಕೆಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಉಪನ್ಯಾಸಕ ಜಿ.ಜಿ.ಲಮಾಣಿ, ಮಂಜುಳಾ ಭಾಂಡೇಕರ, ದೈಹಿಕ ಶಿಕ್ಷಕ ಶ್ರೀಶೈಲ ಗೋಪಶೆಟ್ಟಿ, ಶಿಕ್ಷಕಿ ಶೋಭಾ ಆಲಗುಂಡಿ, ದೈಹಿಕ ಶಿಕ್ಷಕ ಸದಾನಂದ ತುಡುವೇಕರ, ಮಲ್ಲಿಕಾರ್ಜುನಯ್ಯ ಚುಳಕಿಮಠ, ಇವರುಗಳಿಗೆ ಶ್ರೇಷ್ಠ ಗುರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಭವಾನಿ ಖೊಂದುನಾಯ್ಕ ಹಾಗೂ ಸಾದನೆಗೈದ ಶಿಕ್ಷಕರನ್ನು, ಪತ್ರಕರ್ತರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಿದರು, ಸನ್ಮಾನ ಸ್ವೀಕರಿಸಿ ಶಿಕ್ಷಕ ಶ್ರೀಶೈಲ ಗೋಪಶೆಟ್ಟಿ ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ನಿರ್ದೇಶಕರುಗಳಾದ ಎಂ.ಎನ್.ಜಮಖಂಡಿ, ಈರಣ್ಣ ಸಂಕಣ್ಣವರ, ಗಂಗಾಧರ ಗೊರಾಬಾಳ, ಶಂಕರ ಗಯ್ಯಾಳಿ, ಪ್ರಾಚಾರ್ಯರಾದ ಎಂ.ಎಚ್.ಪಾಟೀಲ, ಕೆ.ಬಿ.ನಲವಡೆ, ಶಂಕರ ಅಪ್ಪೋಜಿ, ಮೋಹನ ಕಾಮಣ್ಣವರ ಹಾಗೂ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು. ಶಿಕ್ಷಕ ಐ.ಕೆ.ಮಠಪತಿ ಸ್ವಾಗತಿಸಿದರು, ಶಿಕ್ಷಕ ಬಿ.ಬಿ.ಹೂಲಿಗೊಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.