ಶಿಕ್ಷಕರ ದಿನಾಚರಣೆ: ಮಕ್ಕಳಿಂದ ಸಾಂಸ್ಕøತಿಕ ಉತ್ಸವ

ಚಿಂಚೋಳಿ,ಸೆ.6- ಪಟ್ಟಣದ ಭಾರತಿ ವಿದ್ಯಾನಿಕೇತನ ಇಂಟನ್ರ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಮತ್ತು ಶಿಕ್ಷಕರ ದಿನಾಚರಣೆ ಆಚರಿಸಲಾಯಿತು.
ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ಭಾಷಣವದ ಮೂಲಕ ಡಾ.ಸರ್ವೇಪಲ್ಲಿ ಅವರ ಸೇವೆಯನ್ನು ಸ್ಮರಿಸಲಾಯಿತು.
ಶಾಲೆಯ ಸಹನಾ 3 ನೇ ತರಗತಿಯ ವಿದ್ಯಾರ್ಥಿನಿ ಮಾತನಾಡಿ, ಈ ದಿನ ನಮ್ಮ ಮಕ್ಕಳ ಪಾಲಿಗೆ ತುಂಬಾ ದೊಡ್ಡ ದಿನ ಶಿಕ್ಷಕರು ನಮಗೆ ಜ್ಞಾನದ ಜತೆಗೆ ಮುಂದಿನ ಜೀವನ ಭವಿಷ್ಯವನ್ನು ರೂಪಿಸುವ ಶಿಕ್ಷಕರನ್ನು ನಾವು ನಮ್ಮ ಜೀವನದಲ್ಲಿ ಎಂದೇಂದು ಮರೆಯಲು ಸಾಧ್ಯವಿಲ್ಲ ಎಂದಳು.
ನಬಿ ರಸುಲ್ 3 ನೇ ತರಗತಿಯ ವಿದ್ಯಾರ್ಥಿ ಮಾತನಾಡಿ, ಶಿಕ್ಷಕರ ದಿನಾಚರಣೆ ಮಾಡಲು ಪ್ರಮುಖ ಕಾರಣ ನಮ್ಮ ದೇಶದ ರಾಷ್ಟ್ರಪತಿಗಳಾಗಿದ್ದ ಶಿಕ್ಷಣ ಪ್ರೇಮಿ ಶಿಕ್ಷಣ ತಜ್ಞರಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಹುಟ್ಟುಹಬ್ಬದಂದೇ ತಮ್ಮ ಹುಟ್ಟು ಹಬ್ಬ ಆಚರಿಸುವ ಬದಲು ಶಿಕ್ಷಕರ ದಿನಾಚರಣೆ ಮಾಡಿ ಎಂದು ಹೇಳಿದವರು ಅಂದಿನಿಂದ ಸೆಪ್ಟೆಂಬರ್ 5 ರಂದು ನಾವೆಲ್ಲ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ ಎಂದು ಹೇಳಿದರು.
ಶಾಲೆ ಟ್ರಸ್ಟಿಗಳಾದ ಶಂಕರ್ ರಾಥೋಡ್ ಚನ್ನಬಸಯ್ಯ ಸ್ವಾಮಿ ಶಾಲೆಯ ಆಡಳಿತ ಅಧಿಕಾರಿ ಮುಖ್ಯೋಪಾಧ್ಯಾಯದ ಮಮತಾ ಶೆಟ್ಟಿ ಶಿಕ್ಷಕಿ ಪ್ರೀತಿ ಕೂಡ ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಶಾಹಿನ್, ರೋಹಿಣಿ ರಾಜೇಂದ್ರ ಪ್ರಸಾದ್, ಜಗದೇವಿ ಶೆಟ್ಟಿ, ಅಶ್ವಿನಿ, ಸಿಬ್ಬಂದಿಗಳಾದ ಮಲ್ಲಮ್ಮ, ಮಂಜುಳಾ, ಪ್ರದೀಪ್ ಮಾಳಗಿ, ಮತ್ತು ಶಾಲೆಯ ಮುದ್ದು ಮಕ್ಕಳು, ಉಪಸ್ಥಿತರಿದ್ದರು