ಶಿಕ್ಷಕರ ದಿನಾಚರಣೆ: ಭಾರತೀಯ ಜೈನ ಸಂಘದಿಂದ ವನಮಹೋತ್ಸವ

ಅಥಣಿ : ಸೆ.4:ನಮ್ಮೆಲ್ಲರಿಗೆ ಉಚಿತ ಆಮ್ಲಜನಕ ಬದಲಿಸುವ ಗಿಡಮರಗಳನ್ನು ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡುವುದು, ನೈಸರ್ಗಿಕ ಸಂಪತ್ತನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಭಾರತೀಯ ಜೈನ ಸಂಘಟನೆಯ ತಾಲೂಕಾ ಅಧ್ಯಕ್ಷ ಡಿ. ಡಿ ಮೇಕನಮರಡಿ ಹೇಳಿದರು.
ಅವರು ಸ್ಥಳೀಯ ಸ್ವಾಮಿ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಮತ್ತು ಶಿಕ್ಷಕರ ದಿನಾಚರಣೆಯ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರು ಗಿಡಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಜೊತೆಗೆ ನಮ್ಮೆಲ್ಲರಿಗೆ ಉಚಿತವಾಗಿ ಆಮ್ಲಜನಕ ಒದಗಿಸುವ ಮಹತ್ವದ ಕಾರ್ಯವನ್ನು ಮಾಡಬೇಕು. ಶಾಲೆಯ ಆವರಣದಲ್ಲಿನ ವಿದ್ಯಾರ್ಥಿಗಳು ದತ್ತು ಪಡೆದುಕೊಳ್ಳುವ ಮೂಲಕ ಅವುಗಳ ಪಾಲನೆ ಪೆÇೀಷಣೆ ಮಾಡಬೇಕು. ಉತ್ತಮ ರೀತಿಯಲ್ಲಿ ಗಿಡ ಬೆಳೆಸಿದವರಿಗೆ ಭಾರತೀಯ ಜೈನ ಸಂಘಟನೆ ವತಿಯಿಂದ ಯೋಗ್ಯ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿ ವಿಭಾಗದ ಭಾರತೀಯ ಜೈನ ಸಂಘಟನೆಯ ಸಂಯೋಜಕ ಅರುಣ ಯಲಗುದ್ರಿ, ರೋಟರಿ ಕ್ಲಬ್, ಅಥಣಿಯ ಅಧ್ಯಕ್ಷ ಸಂತೋಷ ಬೊಮ್ಮಣ್ಣವರ, ಟ್ರೀ ಫೌಂಡೇಶನ್ ಅಧ್ಯಕ್ಷ ಆರ್ ಪಿ ಹುಬ್ಬಳ್ಳಿ ಮಾತನಾಡಿದರು.
ಈ ವೇಳೆ ಅಭಿನವ ಪಡನಾಡ, ನಿತಿನ ಗೊಂಗಡಿ, ರಾಜು ಕರ್ಪೂರಶೆಟ್ಟಿ, ಸಂದೀಪ್ ತೀರ್ಥ, ಲಲಿತಾ ಮೇಕಲಮರಡಿ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.