ಶಿಕ್ಷಕರ ದಿನಾಚರಣೆ :ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ


ನವಲಗುಂದ,ಸೆ.6: ಸಮಾಜದಲ್ಲಿ ವ್ಯಕ್ತಿ ಹೇಗೆ ಬದಕುಬೇಕೆಂಬದನ್ನು ಕಲಿಸಿಕೊಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡಾಗಿದೆ ಶಿಕ್ಷಕರ ಸೇವೆಯಷ್ಟು ಬೇರೊಂದು ಸೇವೆ ಯಾವುದು ಇಲ್ಲಾ ಎಂದು ವಿಧಾನಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಹೇಳಿದರು.

ಅವರು ತಾಲೂಕ ಪ್ರಾಥಮಿಕ ಶಿಕ್ಷಕರ/ಶಿಕ್ಷಕಿಯ ಸಹಕಾರಿ ಪತ್ತಿನ ಸಂಘದ ನೂತನ ಕಲ್ಯಾಣ ಕೇಂದ್ರದಲ್ಲಿ “ಡಾ.ಸರ್ವಪಲ್ಲಿ ರಾಧಾಕೃಷ್ಣನ್” ಅವರ ಜನ್ಮ ದಿನಾಚರಣೆ ಅಂಗವಾಗಿ ನವಲಗುಂದ ತಾಲೂಕಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ಹಳೇ ವಿದ್ಯಾರ್ಥಿಯೊಬ್ಬ ನಿಮ್ಮನ್ನ ನೆನೆಪು ಇಟ್ಟುಕೊಂಡು ನಿಮ್ಮನ್ನ ಮಾತನಾಡಿಸಿದ್ದಾರೆ ಎಂದರೆ ನಿಮ್ಮ ಪಾಠದ ಪರಿಣಾಮ ಹಾಗೂ ಅವರು ನಿಮಗೆ ನೀಡುವ ಗೌರವವಾಗಿದೆ ಎಂದರು.

ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ ಶಿಕ್ಷಕರಲ್ಲಿ ಕಲಿಸ ಬೇಕೆನ್ನುವು ಹಂಬಲವಿದ್ದಾಗಲೇ ಕಲಿಕೆಯಲ್ಲಿ ಸುಧಾರಣಿ ಸಾಧ್ಯ, ಸರ್ಕಾರ ಎಲ್ಲ ಸೌಲಭ್ಯ ನೀಡಿದರೂ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಸಂಖ್ಯೆಕಡಿಮೆ ಆಗುತ್ತಿದ್ದು ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ, ಉತ್ತಮ ಶಿಕ್ಷಕರಿಗೆ ಹಾಗೂ ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶಿವಾನಂದ ಮಲ್ಲಾಡ, ತಾ ಪಂ ಇಓ ಭಾಗ್ಯಶ್ರೀ ಜಾಗಿರಧಾರ್, ರೇಣುಕಾ ಮೂರಣಾಳ,ಎ ಬಿ ಕೊಪ್ಪದ ಆರ್.ವಿ.ಕುರವತ್ತಿಮಠ, ಎಸ್ ಕೆ ಕುರಹಟ್ಟಿ, ಸಂಜೀವ ಹಿರೇಗೌಡ್ರ ಪುರಸಭೆ ಸದಸ್ಯರಾದ ಮಂಜು ಜಾಧವ, ಜೀವನ್ ಪವಾರ, ಮೋಧಿನ್ ಶಿರೂರ, ಹಾಗೂ ಇನ್ನೂ ಮುಂತಾದ ಗ್ರಾಮ ಪಂಚಾಯತಿಯ ಸದಸ್ಯರು, ಶಿಕ್ಷಕರು ಮುಂತಾದ ಉಪಸ್ಥಿತರಿದ್ದರು.