ಶಿಕ್ಷಕರ ಕ್ಷೇತ್ರ : ನಮೋಶಿ ಆಯ್ಕೆ

ರಾಯಚೂರು.ನ.11- ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ನಮೋಶಿ ಅವರು 10,212 ಮತ ಪಡೆದು, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರ ವಿರುದ್ಧ ಜಯಗಳಿಸಿದ್ದಾರೆ.
ಪ್ರಾಶಸ್ತ್ಯ ಮತ ಎಣಿಕೆಯಲ್ಲಿ ಶಶಿಲ್ ನಮೋಶಿ ಅವರು ಆಯ್ಕೆಯಾಗಿದ್ದಾರೆ. ಎರಡನೇ ಪ್ರಾಶಸ್ತ್ಯ ಮತ ಎಣಿಕೆ ಮುಕ್ತಾಯಗೊಂಡಾಗ 2299 ಮತಗಳು ಎರಡನೇ ಪ್ರಾಶಸ್ತ್ಯಗೆ ಅರ್ಹತೆ ಕಳೆದುಕೊಂಡಿದ್ದವು. ಉಳಿದ ಮತ ಎಣಿಕೆಯಲ್ಲಿ ಗೆಲ್ಲುವ ಅಭ್ಯರ್ಥಿ 9797 ಮತ ಪಡೆಯಬೇಕಾಗಿತ್ತು. ನಮೋಶಿ ಅವರಿಗೆ ಗೆಲುವಿನ ನಿಗದಿ ಮತ ಬಾರದಿರುವುದು ಎರಡನೇ ಮತ್ತು ಮೂರನೇ ಪ್ರಾಶಸ್ತ್ಯ ಮತ ಎಣಿಕೆ ಮಾಡಿದಾಗ ನಮೋಶಿ ಅವರು ಜಯಗಳಿಸಿದರು.
ಕಳೆದ ಅವಧಿಯಲ್ಲಿ ಶರಣಪ್ಪ ಮಟ್ಟೂರು ಅವರು ಈ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಸುಧೀರ್ಘ ಅವಧಿಗೆ ಬಿಜೆಪಿ ತನ್ನ ಅಧಿಕಾರ ಈ ಕ್ಷೇತ್ರದಲ್ಲಿ ನಿರ್ವಹಿಸಿತು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಈ ಕ್ಷೇತ್ರವನ್ನು ಕಸಿದುಕೊಳ್ಳಲಾಯಿತು. ಈಗ ಮತ್ತೇ ಬಿಜೆಪಿ ಪಕ್ಷ ಈ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಗೆಲುವಿನ ನಂತರ ಬಿಜೆಪಿಯೂ ವಿಜಯೋತ್ಸವದ ಸಂಭ್ರಮ ಆಚರಿಸಿತು.