ಶಿಕ್ಷಕರ ಕ್ಷೇತ್ರದ ಬಿ.ಟಿ.ಶ್ರೀನಿವಾಸ್‌ಗೆ ಕೆ.ಪಿ.ಸಿ.ಸಿ. ಶಿಕ್ಷಕರ ಘಟಕ ಬೆಂಬಲ

ಕೋಲಾರ,ಮೇ,೨೫- ರಾಜ್ಯದಲ್ಲಿ ವಿಧಾನ ಪರಿಷತ್ ೬ ಸ್ಥಾನಗಳಿಗೆ ಜೂನ್ ೩ ರಂದು ಚುನಾವಣೆ ನಡೆಯಲಿದೆ. ಈ ಪೈಕಿ ೩ ಶಿಕ್ಷಕರ ಕ್ಷೇತ್ರ ಮತ್ತು ೩ ಪದವೀದರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಗಿದೆ. ಅಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಬಿ.ಟಿ.ಶ್ರೀನಿವಾಸ್ ಅವರನ್ನು ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಚುನಾವಣಾ ಕಣಕ್ಕೆ ಇಳಿಸಲಾಗಿದೆ. ಚುನಾವಣೆಯಲ್ಲಿ ೬ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಬಹುಮತದಿಂದ ಗೆಲ್ಲುವ ವಿಶ್ವಾಸವನ್ನು ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿ ಶಿಕ್ಷಕರ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ವ್ಯಕ್ತ ಪಡೆಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ರಾಜ್ಯದ ಪದವೀದರರು ಮತ್ತು ಶಿಕ್ಷಕರು ಉತ್ತಮ ಸಾಧನೆ ಮಾಡಿರುವವರನ್ನು ಗುರುತಿಸಿ ಕಳೆದ ೬ ತಿಂಗಳ ಮೊದಲೇ ಅಭ್ಯರ್ಥಿಗಳನ್ನು ಘೋಷಿಸಿ ಕಾಂಗ್ರೇಸ್ ಪಕ್ಷದಿಂದ ಬೆಂಬಲವು ಘೋಷಿಸಿದೆ. ಕಾಂಗ್ರೇಸ್ ಪಕ್ಷವು ನುಡಿದಂತೆ ನಡೆವ ಪಕ್ಷವಾಗಿದೆ ಈ ಹಿಂದ ನೀಡಿದ್ದ ೧೬೫ ಭರವಸೆಗಳು ಹಾಗೂ ಪಂಚ ಗ್ಯಾರೆಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೊಡಲೆ ಜಾರಿ ಮಾಡಿರುವ ಸರ್ಕಾರವಾಗಿದೆ. ಅದರಲ್ಲೂ ಯುವನಿಧಿ ಯೋಜನೆಯು ಪಧವೀದರರ ಆಶಾಕಿರಣವಾಗಿದೆ. ದೇಶದಲ್ಲಿಯೇ ನುಡಿದಂತೆ ನಡೆವ ಕಾಂಗ್ರೇಸ್ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಶ್ಲಾಘಿಸಿದರು,
ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಸರ್ಕಾರಿ ಶಾಲೆಗಳಿಗೆ ೧೧,೪೯೪ ಶಿಕ್ಷಕರ ನೇಮಕಾತಿ, ೩೫ ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ. ೨,೧೬೨ ಸರಕಾರಿ ಶಾಲೆಗಳ ೭೩೪೨ ಕೊಠಡಿಗಳ ದುರಸ್ತಿಗೆ ೭೦ ಕೋಟಿ ಅನುದಾನ ನೀಡಲಾಗಿದೆ. ೫೮ ಲಕ್ಷ ವಿದ್ಯಾರ್ಥಿಗಳಿಗೆ ೨೮೦ ಕೋಟಿ ವೆಚ್ಚದಲ್ಲಿ ಪೌಷ್ಠಿಕ ಆಹಾರ ವಿತರಣೆ ಮಾಡಲಾಗಿದೆ. ಸರ್ಕಾರಿ ಶಾಲೆಯ ೪೫ ಲಕ್ಷ ಮಕ್ಕಳಿಗೆ ೧೪೩ ಕೋಟಿ ವೆಚ್ಚದಲ್ಲಿ ಎರಡು ಜೂತೆ ಸಮವಸ್ತ್ರವನ್ನು ನೀಡಲಾಗಿದೆ ಎಂದರು,
ಅತ್ಯತ್ತಮ ಸಾಧನೆ ಮಾಡಿದ ವಿಶ್ವವಿದ್ಯಾಲಯಗಳಿಗೆ ತಲಾ ೫೦ ಲಕ್ಷದಂತೆ ಒಟ್ಟು ೩೫೦ ಕೋಟಿ ಅನುದಾನ ನೀಡಲಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ಕನಿಷ್ಠ ೫ ಸಾವಿರದಿಂದ ಗರಿಷ್ಟ ೮ ಸಾವಿರದವರೆ ವೇತನವನ್ನು ಹೆಚ್ಚಳ ಮಾಡಲಾಗಿದೆ. ಅತಿಥಿ ಉಪನ್ಯಾಸಕರುಗಳಿಗೆ ರಜೆಯ ಸೌಲಭ್ಯ ನೀಡಲಾಗಿದೆ. ೫ ಲಕ್ಷ ರೂ ವೈದ್ಯಕೀಯ ಸೌಲಭ್ಯ ಹಾಗೂ ೬೦ ವರ್ಷದ ನಿವೃತ್ತಿಯಾಗುವ ಸಂದರ್ಭದಲ್ಲಿ ಬರಿಗೈಯಲ್ಲಿ ಕಳುಹಿಸದೆ ೫ ಲಕ್ಷ ರೂ ಇಡಿ ಗಂಟು ನೀಡಲಾಗುವುದು ಎಂದು ತಿಳಿಸಿದರು,
ಪತ್ರಿಕಾ ಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕ ತಿಮ್ಮಯ್ಯ ಪುರ್ಲೆ. ಕೋಲಾರ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್.ಕೆ.ಹೆಚ್ ಹಾಗೂ ಊರ್ದು ಶಿಕ್ಷಕರ ಸಂಘದ ಫಯಾಜ್ ಉದ್ದಿನ್ ಶೇಖ್ ಉಪಸ್ಥಿತರಿದ್ದರು,