ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.03: ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಯಿತು.
ಪಟ್ಟಣದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗಚ್ಚಿನ ಮಠ ಕೊಟ್ಟೂರು ವತಿಯಿಂದ  ಈ ಶಾಲೆಯ ಆವರಣದಲ್ಲಿ 2022-23 ನೇ ಸಾಲಿನ ಶಿಕ್ಷಕರ ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಲಾಯಿತು.
ಈ ಕ್ರೀಡಾಕೂಟದಲ್ಲಿ ಶಿಕ್ಷಕರಿಗಾಗಿ ವಾಲಿಬಾಲ್, ಶಟಲ್ ಕಾಕ್, ಗುಂಡು ಎಸೆತ, ತಟ್ಟೆ ಎಸೆತ, ಕ್ರೀಡೆಗಳನ್ನು ಹಮ್ಮಿಕೊಂಡರೆ, ಶಿಕ್ಷಕಿಯರಿಗಾಗಿ ಮ್ಯೂಸಿಕಲ್ ಚೇರ್, ಲೆಮನ್ ಸ್ಪೂನ್, ಥ್ರೋ ಬಾಲ್,  ಗುಂಡು ಎಸೆತ, ತಟ್ಟೆ ಎಸೆತ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ನೌಕರ ಸಂಘದ ತಾಲೂಕು ಉಪಾಧ್ಯಕ್ಷರಾದ ಇಶಾಕ್ ಬಾಗಳಿ ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕು ಕಾರ್ಯದರ್ಶಿಯಾದ ಜಿ. ಸಿದ್ದಪ್ಪ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ವಿ. ಮಂಜುನಾಥ,  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಸಹಕಾರ್ಯದರ್ಶಿಯಾದ ಗಂಗಮ್ಮ, ಹಾಗೂ ದೈಹಿಕ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು

Attachments area