ಶಿಕ್ಷಕರ ಕ್ರಿಕೆಟ್ : ಪುಲಿಕೇಶಿ ವಾರಿಯರ್ಸ್ ತಂಡ ಚಾಂಪಿಯನ್

(ಸಂಜೆವಾಣಿ ವಾರ್ತೆ)
ಬಾದಾಮಿ,ಸೆ 11: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗಾಗಿ ಏರ್ಪಡಿಸಿದ ಕ್ರಿಕೆಟ್ ಪಂದ್ಯಾವಳಿಯಲ್ಲಿ 5 ವಲಯದಿಂದ 10 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಬಾದಾಮಿ ವಲಯದ ಪುಲಿಕೇಶಿ ವಾರಿಯರ್ಸ ತಂಡವು ಪ್ರಥಮ ಸ್ಥಾನ ಹಾಗೂ ಕೆರೂರ ಸೆಂಟ್ರಲ್ ಟೀಮ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಪುಲಿಕೇಶಿ ವಾರಿಯರ್ಸನ ಸಂಗು ಜವಳಿ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು. ಇವರಿಗೆ ತಂಡದ ನಾಯಕ ಬಿ.ಎಲ್. ಹೂಲಿ, ಉಪನಾಯಕ ಭೀಮೇಶ ಕುಂಬಾರ ತಾಲೂಕಾ ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಕೆ.ವಾಯ್.ಪಾಟೀಲ ಹಾಗೂ ತಾಲೂಕಿನ ನೌಕರರ ಸಂಘದ ಎಲ್ಲ ಪದಾಧಿಕಾರಿಗಳು ತಂಡದ ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.