
ದೇವದುರ್ಗ,ಜು.೦೯-
ಸುಂಕೇಶ್ವರಹಾಳ ಕ್ಲಸ್ಟರ್ ವ್ಯಾಪ್ತಿಯ ನಾಗರಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರಂಗನಾಥ ಕಳೆದ ಎರಡ್ಮೂರು ದಿನದಿಂದ ಅನಧಿಕೃತ ಗೈರಾಗಿದ್ದಾರೆ. ಮುಖ್ಯಶಿಕ್ಷಕರು ರಜೆ ಹೋಗಲು ಎಸ್‌ಡಿಎಂಸಿ ಅಧ್ಯಕ್ಷರ ಅನುಮತಿ ಜತೆ ಸಿಆರ್‌ಪಿ ಗಮನಕ್ಕೆ ತರಲಾಗುತ್ತಿದೆ. ನಾಗರಾಳ ಶಾಲೆಯಲ್ಲಿ ಮುಖ್ಯಶಿಕ್ಷಕ ಒಬ್ಬರೇ ಕಾರ್‍ಯನಿರ್ವಹಿಸುತ್ತಿದ್ದಾರೆ. ಅನಧಿಕೃತ ಗೈರಾದ ಮುಖ್ಯಶಿಕ್ಷಕ, ನೇಮಕವಿಲ್ಲದೇ ವ್ಯಕ್ತಿಯೊಬ್ಬರು ಅತಿಥಿ ಶಿಕ್ಷಕ ಎಂದು ಹೇಳಿಕೊಂಡು ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ನಾಗರಾಳ ಶಾಲೆಯ ಸಮಸ್ಯೆ ಕುರಿತು ಸಿಆರ್‌ಪಿ ಅವರನ್ನು ಸಂಪರ್ಕಿಸಿದಾಗ ಅನಧಿಕೃತ ಗೈರು ಗಮನಕ್ಕಿಲ್ಲ, ಅತಿಥಿ ಶಿಕ್ಷಕ ನೇಮಕ ಮಾಡಿಕೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಶಿಕ್ಷಕರೊಬ್ಬರೆ ಇರುವಂತ ಶಾಲೆಯಲ್ಲಿ ಕೆಲಸ ಕಾರ್‍ಯಗಳ ನಿಮಿತ್ತ ರಜೆ ತೆರಳಲು ಸಿಆರ್‌ಪಿ ಗಮನಕ್ಕೆ ತಂದಲ್ಲಿ, ಬೇರೆ ಶಾಲೆಯಿಂದ ಎರವಲ ನೀಡಲಾಗುತ್ತಿದೆ. ನಾಗರಾಳ ಶಾಲೆಯಲ್ಲಿ ಅನಧಿಕೃತ ಗೈರಾದ ಶಿಕ್ಷಕನ ಬದಲಾಗಿ ಖಾಸಗಿ ವ್ಯಕ್ತಿಯೊಬ್ಬರು ಮಕ್ಕಳಿಗೆ ಬೋಧಿಸಲಾಗುತ್ತಿದೆ. ೧ರಿಂದ ೫ನೇ ತರಗತಿ ೩೦ ಮಕ್ಕಳು ದಾಖಲಾತಿ. ಗೋಪನ ದೇವರ ಹಳ್ಳಿ ಶಾಲಾ ಮುಖ್ಯಶಿಕ್ಷಕ ವಿಶ್ವನಾಥ ನಾಗರಾಳ ಶಾಲೆಗೆ ಬಂದಿದ್ದರು. ಎರವಲ ಬಂದಿದ್ದಿರ ಎಂದು ವಿಚಾರಿಸಿದಾಗ ಒಮ್ಮೆ ಬಿಸಿಊಟ ನೋಡಕ್ಕಂತಾನೇ, ಒಮ್ಮೆ ಶಾಲಾ ಕಟ್ಟಡ ನೋಡಕ ಬಂದಿನಿ ಅಂತಾನೆ. ಅನಧಿಕೃತ ಗೈರಾದ ಶಿಕ್ಷಕನ್ನ ರಕ್ಷಣೆಗೆ ಆಶಾಲೆಯಿಂದ ಈಶಾಲೆಗೆ ಘಳಿಗೊಮ್ಮೆ ಅಲೆದಾಡುತ್ತಿದ್ದರಿಂದ ಗ್ರಾಮಸ್ಥರನ್ನು ದಾರಿ ತಪ್ಪಿಸುವ ಕೆಲಸ ನಡೆದಿದೆ. ಗೋಪನದೇವರ ಹಳ್ಳಿ, ನಾಗರಾಳ ಶಾಲಾ ಶಿಕ್ಷಕರು ಕಣ್ಣಾಮುಚ್ಚಾಲೇ ಆಟಕ್ಕೆ ಶಿಕ್ಷಣ ಇಲಾಖೆ ಕಡಿವಾಣ ಹಾಕದಿರುವುದು ಸಂಶಯಕ್ಕೆ ಕಾರಣವಾಗಿದೆ.
ಪರಸ್ಪರ ವರ್ಗಾವಣೆ: ನಾಗರಾಳ ಶಾಲೆಯ ಮುಖ್ಯಶಿಕ್ಷಕ ಮೂಲತ ರಾಮನಗರ ಜಿಲ್ಲೆಯವರು. ಹಿರೇಬೂದೂರು ಶಾಲೆಯಲ್ಲಿ ಕಾರ್‍ಯನಿರ್ವಹಿಸುತ್ತಿರುವ ಶಿಕ್ಷಕಿ ವೈ.ಎಚ್.ರೇಖಾ ಸ್ವಂತ ಜಿಲ್ಲೆಗೆ ಹೋಗಲು ಪರಸ್ಪರ ವರ್ಗಾವಣೆ ಮೊರೆ ಹೋಗಿದ್ದರು. ರಾಮನಗರ ಜಿಲ್ಲೆಯಿಂದ ಹಿರೇಬೂದೂರು ಶಾಲೆಗೆ ಬರುವಿಕೆಗಾಗಿ ಪರಸ್ಪರ ವರ್ಗಾವಣೆಗೆ ಮುಖ್ಯಶಿಕ್ಷಕ ರಂಗನಾಥ ೧೨ ಲಕ್ಷ ರೂ. ಪಡೆದುಕೊಂಡು ಬಂದಿದ್ದಾನೆ. ಅದರಂತೆ ಗೋಪನದೇವರ ಹಳ್ಳಿ ಶಾಲಾ ಶಿಕ್ಷಕ ವಿಶ್ವನಾಥ ಮೂಲತ ಚಿತ್ರದುರ್ಗ ಜಿಲ್ಲೆಯವರು. ಹಿರೇಬೂದೂರು ಶಾಲಾ ಸಹಶಿಕ್ಷಕಿ ಆಶಾರಾಣಿ ಸ್ವಂತ ಜಿಲ್ಲೆಗೆ ವರ್ಗಾವಣೆ ಬಹಿಸಿದ ಹಿನ್ನೆಲೆ ಶಿಕ್ಷಕ ವಿಶ್ವನಾಥ ಪರಸ್ಪರ ವರ್ಗಾವಣೆಯಲ್ಲಿ ೧೨ ಲಕ್ಷ ರೂ. ಬೇಡಿಕೆಯಿಂದ ಇಲ್ಲಿನ ಹಿರೇಬೂದೂರು ಶಾಲೆಗೆ ಬಂದಿದ್ದಾರೆ. ಇಲ್ಲಿಂದ ನಾಗರಾಳ, ಗೋಪನದೇವರ ಹಳ್ಳಿ ಶಾಲೆಗೆ ಎರವಲ ಹೋಗಿದ್ದಾರೆ. ಆಡಿದ್ದೇ ಆಟ ಎಂಬಂತಿದೆ.
ಬಾಕ್ಸ್
ಇದ್ದೊಬ್ಬ ಮುಖ್ಯಶಿಕ್ಷಕ ಕಾರಣಗಳು ಇಲ್ಲದೇ ಪದೇ ಪದೇ ರಜೆ ಮೇಲೆ ತೆರಳುತ್ತಿದ್ದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಗಗನ ಕುಸುಮವಾಗಿದೆ. ಒಂದೇ ಕೊಠಡಿಯಲ್ಲಿ ಐದು ತರಗತಿಗಳು ನಡೆಸಲಾಗುತ್ತಿದೆ. ಕುಡಿಯುವ ನೀರು, ಆಟದ ಮೈದಾನ ವ್ಯವಸ್ಥೆ ಇಲ್ಲದೇ ಮಕ್ಕಳು ಪರಿತಾಪಿಸುವಂತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ೩೦ ಮಕ್ಕಳಿಗೆ ಒಂದೇ ಶೌಚಾಲಯ ನಿರ್ಮಿಸಲಾಗಿದೆ. ಹೊಸದೊಂದು ಕೋಣೆ ಮಂಜೂರು ಆಗಿದ್ದು ಕಟ್ಟಿಸಲು ಪೈಪೋಟಿ ಶುರುವಾಗಿದೆ.
ಬಾಕ್ಸ್
ನಾಗರಾಳ ಶಾಲೆಗೆ ಇಲ್ಲಿವರೆಗೆ ಅಧಿಕೃತ ಅತಿಥಿ ಶಿಕ್ಷಕ ನೇಮಕವಿಲ್ಲ. ಅನಧಿಕೃತ ಗೈರಾದ ಮುಖ್ಯಶಿಕ್ಷಕ ಈಬಾರಿ ನಿನ್ನೇ ನೇಮಕ ಮಾಡಿಕೊಳ್ಳುತ್ತೇನೆ ಎಂದು ಖಾಸಗಿ ವ್ಯಕ್ತಿಯೊಬ್ಬರನ್ನು ಮಕ್ಕಳಿಗೆ ಪಾಠ ಮಾಡಲು ಹೇಳಿ ತಾನ್ನು ಅನಧಿಕೃತ ಗೈರಾಗಿದ್ದಾನೆ. ಶಾಲೆಯಲ್ಲಿ ಒಂದೇ ಒಂದು ಅಧಿಕೃತ ದಾಖಲೆಗಳು ಇಲ್ಲವಾಗಿವೆ. ಶಿಕ್ಷಕರಿಂದ ನಿರಂತರ ದಾರಿ ತಪ್ಪಿಸುವ ಕೆಲಸವಾಗುತ್ತಿದ್ದರಿಂದ ಮಕ್ಕಳ ಕಲಿಕೆಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.
೯ಡಿವಿಡಿ೪
ದೇವದುರ್ಗ: ನಾಗರಾಳ ಸರಕಾರಿ ಶಾಲೆಯ ಹೊರನೋಟ
ಕೋಟ್
ನಾಗರಾಳ ಶಾಲಾ ಮುಖ್ಯಶಿಕ್ಷಕ ಅನಧಿಕೃತ ಗೈರು ಗಮನಕ್ಕಿಲ್ಲ. ಸಿಆರ್‌ಪಿಯಿಂದ ಮಾಹಿತಿ ಪಡೆದು ಕ್ರಮವಹಿಸುತ್ತೇನೆ. ಶಾಲೆಗೆ ಅತಿಥಿ ಶಿಕ್ಷಕ ನೇಮಕ ಮಾಡಿಲ್ಲ. ಖಾಸಗಿ ವ್ಯಕ್ತಿಯೊಬ್ಬರು ಹೇಗೆ ಪಾಠ ಮಾಡುತ್ತಿದ್ದಾರೆ. ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ.
ಎಚ್.ಸುಖದೇವ್ ಕ್ಷೇತ್ರ ಶಿಕ್ಷಣಾಧಿಕಾರಿ