ಶಿಕ್ಷಕರ ಕೊಡುಗೆ ಅಪಾರ

ಹುಮನಾಬಾದ್ :ಸೆ.15:ಸಂಸ್ಕಾರ , ಸೌಹಾರ್ದ ವಾತಾವರಣ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದಾಗಿದೆ ಎಂದು ಬಸವತೀರ್ಥ ವಿದ್ಯಾಪೀಠ ಮಹಾದೇವಯ್ಯ ಕಾವಡಿ ಹೇಳಿದರು . ಹುಡಗಿ ಗ್ರಾಮದ ಬಸವತೀರ್ಥ ವಿದ್ಯಾಪೀಠ ಪ್ರೌಢ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಶಿಕ್ಷಕರ ದಿನ ಮತ್ತು ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿದ ಅವರು , ಶಿಕ್ಷಣ ತಜ್ಞರಾಗಿದ್ದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಭಾರತದ ತತ್ವಶಾಸ್ತ್ರವನ್ನು ವಿಶ್ವದ ಅನೇಕ ದೇಶಗಳಿಗೆ ಪರಿಚಯಿಸಿದ್ದರು . ನೇರ ನಡೆ – ನುಡಿಗೆ ಹೆಸರಾಗಿದ್ದ ಅವರು , ಶಿಕ್ಷಕರಿಗೆ ಅಪಾರ ಗೌರವ ಕೊಡುತ್ತಿದ್ದರು . ತಮ್ಮ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸಿಕೊಂಡರು ಎಂದರು . ಕಾವಡಿ ಅಭಿಮತ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಸ್ಥಳೀಯ ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಗೀತಾ ಮುಗಳಿ ಮಾತನಾಡಿ , ಹಳೇ ವಿದ್ಯಾರ್ಥಿ ಶಾಂತಕುಮಾರ ಸಿದ್ದೇಶ್ವರ ಕಾರ್ಯಕ್ರಮ ಆಯೋಜಿಸಿ ಎಲ್ಲ ಶಿಕ್ಷಕರನ್ನು ಸನ್ಮಾನಿಸಿದ್ದು ಶ್ಲಾಘನೀಯ ಎಂದು ಹೇಳಿದರು . ಡಾ.ಶಾಂತಕುಮಾರ ಸಿದ್ದೇಶ್ವರ ಪ್ರಾಸ್ತಾವಿಕ ಮಾತನಾಡಿದರು . ಶಾಲೆ ಆಡಳಿತ ಮಂಡಳಿ ಸದಸ್ಯ ಗೌರಿಶಂಕರ ಪ್ರತಾಪುರ , ಶಿಕ್ಷಕರಾದ ಉಮೇಶ ಪಾಟೀಲ್ , ಸವಿತಾ ಪಾಟೀಲ್ , ಕರುಣಾ ಮಠ , ದಶರಥ ಪಾರ್ಸನ್ , ಮಾರುತಿ ಕಾಳೆ , ಶರಣಪ್ರಕಾಶ ಮುಗಳಿ , ಜೈವಂತರಡ್ಡಿ , ಕುಪೇಂದ್ರ ಬ್ಯಾನರ್ಜಿ , ಬಸವರಾಜ ಮಠ ಇತರರಿದ್ದರು .