ಶಿಕ್ಷಕರು, ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಕೊರೊನಾ ಆತಂಕ

ಕೋಲಾರ,ಜ.೬: ಶಾಲೆಗಳು ಆರಂಭವಾಗಿ ಇನ್ನು ಕೇವಲ ಐದು ದಿನಗಳು ಕಳೆದಿವೆ ಈ ನಡುವೆಯೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಮೂಲಕ ಆತಂಕ ಮೂಡಿಸಿದೆ, ಸದ್ಯ ಕೋಲಾರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಮುಂದೇನು ಅನ್ನೋ ಆತಂಕ ಶುರುವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳು ಆರಂಭವಾಗುತ್ತಿದ್ದಂತೆ ಮಹಾಮಾರಿ ಕೊರೊನಾ ವಿದ್ಯಾರ್ಥಿಗಳು ಸೇರಿದಂತೆ ವಿದ್ಯೆ ಕಲಿಸುವ ಗುರುಗಳ ಬೆನ್ನುಹತ್ತಿದೆ. ಶಾಲೆ ಕಾಲೇಜುಗಳು ಆರಂಭವಾಗಿ ೫ ದಿನಗಳಾಗುತ್ತಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಈಗಷ್ಟೆ ಪಾಠ ಪ್ರವಚನಗಳಲ್ಲಿ ತೊಡಗಿದ್ದಾರೆ. ತರಗತಿಗಳು ಆರಂಭವಾಗಿ ೫ ದಿನಗಳು ಕಳೆಯುವ ಮುನ್ನವೆ ಜಿಲ್ಲೆಯಲ್ಲಿ ೧೦,೪೦೦ ವಿದ್ಯಾರ್ಥಿಗಳು ಹಾಗೂ ೩೮೦೦ ಶಿಕ್ಷಕರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ ೯ ಜನ ಶಿಕ್ಷಕರು, ಉಪನ್ಯಾಸಕರು ಹಾಗು ೮ ಜನ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು ಶಿಕ್ಷಣ ಇಲಾಖೆಯಲ್ಲಿ ಆತಂಕವನ್ನುಂಟು ಮಾಡಿದೆ. ಕೋಲಾರ ತಾಲ್ಲೂಕಿನಲ್ಲಿ ಮಾತ್ರವೆ ೪ ಶಿಕ್ಷಕರು ಹಾಗೂ ೫ ಜನ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬಂಗಾರಪೇಟೆ ತಾಲ್ಲೂಕಲ್ಲಿ ಓರ್ವ ಶಿಕ್ಷಕರಲ್ಲಿ ಹಾಗೂ ೩ ಜನ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಶ್ರೀನಿವಾಸಪುರದಲ್ಲಿ ಇಬ್ಬರು ಶಿಕ್ಷಕರಲ್ಲಿ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ಓರ್ವ ಶಿಕ್ಷಕ ಹಾಗೂ ಒಬ್ಬ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
ಸದ್ಯ ಕೋಲಾರ ಜಿಲ್ಲೆಯಲ್ಲಿ ಶಾಲೆಗಳಲ್ಲಿ ಕೊರೊನಾ ಸೋಂಕಿನ ಕರಿನೆರಳು ಬಿದ್ದಿದ್ದೇ ಶಿಕ್ಷಣ ಇಲಾಖೆ ಸ್ವಲ್ಪ ಆತಂಕಕ್ಕೆ ಒಳಗಾಗಿದೆ, ಪಾಸಿಟೀವ್ ಬಂದಿರುವವರ ಗುರು ಪತ್ತೆಹಚ್ಚುವ ಕಾರ್ಯ ಶುರುಮಾಡಿಕೊಂಡಿದೆ ಅಷ್ಟೇ ಅಲ್ಲಾ ಸೋಂಕಿತ ಪ್ರಾಥಮಿಕ ಸಂಪರ್ಕಹೊಂದಿದ್ದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಆತಂಕ ಹೆಚ್ಚಾಗದಂತೆ ನೋಡಿಕೊಳ್ಳಲು ಪ್ಲಾನ್? ಮಾಡಿಕೊಂಡಿದೆ. ಸದ್ಯಕ್ಕೆ ಪಾಸಿಟೀವ್ ಬಂದಿರುವವರೆಲ್ಲಾ ಡಿಸೆಂಬರ್?-೨೩ ರಿಂದ ಜನವರಿ-೧ ರ ದಿನಾಂಕದಲ್ಲಿ ಗಂಟಲು ದ್ರವದ ಮಾದರಿ ನೀಡಿದ್ದವರು ಅನ್ನೋದು ನೆಮ್ಮದಿಯ ವಿಚಾರ ಹಾಗಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಇನ್ನೂ ಎಲ್ಲಾ ಮಾಹಿತಿಯನ್ನ ಪಡೆದಿರುವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಸ್ವಾಬ್ ನೀಡಿದ ಬಳಿಕ ಶಿಕ್ಷಕರಾಗಲಿ, ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಮಕ್ಕಳು ಶಾಲೆಗೆ ಬಂದಿದ್ದಾರೆ ರೋಗ ಲಕ್ಷಣ ಇರುವವರು ಶಾಲೆಗೆ ಬಂದಿರಲಿಲ್ಲ, ಬದಲಾಗಿ ಎಸ್‌ಓಪಿ ನಿಯಮದಂತೆ ಹೀಗಾಗಲೆ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾಗೃತಿ ವಹಿಸಲಾಗುತ್ತಿದೆ. ಹಾಗೇನಾದ್ರು ಶಾಲೆಗೆ ಬಂದಿದ್ರೆ ಅವಶ್ಯಕತೆ ಬಿದ್ದಿದ್ದೆ ಆದಲ್ಲಿ ಶಾಲೆಯನ್ನ ಹಾಗೂ ಪ್ರಾಥಮಿಕ ಸಂಪಕೀತರನ್ನು ಗುರುತಿಸಿ ಐಸೋಲೇಷನ್? ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ, ಅಗತ್ಯ ಬಿದ್ದರೆ ಶಾಲೆಗೆ ಸ್ಯಾನಿಟೈಸೇಷನ್? ಮಾಡಲಾಗುತ್ತದೆ
ಆದ್ರೆ ಶಾಲೆಗಳನ್ನು ಮುಚ್ಚುವುದಿಲ್ಲ ಎಂದಿದ್ದಾರೆ.ಒಟ್ಟಾರೆ ಆತಂಕದಲ್ಲೇ ಭಯದಲ್ಲೇ ಶಾಲೆಯನ್ನು ಆರಂಭ ಮಾಡಲಾಗಿದೆ ಈ ಬೆನ್ನಲ್ಲೇ ಶಾಲೆಗೆ ಬಂದ ಮಕ್ಕಳಲ್ಲಿ ಹಾಗೂ ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿರುವುದು ಸದ್ಯ ಆತಂಕ ಮೂಡಿಸಿದರೂ ಮುಂಜಾಗೃತಾ ಕ್ರಮಗಳನ್ನುಕೈಗೊಂಡು ಶಾಲೆಗಳನ್ನು ನಡೆಸುವುದಾಗಿ ಇಲಾಖೆ ಸಿದ್ದವಾಗಿದ್ದು ಮುಂದಿನ ದಿನಗಳಲ್ಲಿ ಏನೆಲ್ಲಾ ಪರಿಸ್ಥಿತಿ ನಿರ್ಮಾಣವಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.