ಶಿಕ್ಷಕರು, ವಿಜ್ಞಾನಿಗಳಿಗೆ ರಾಷ್ಟ್ರ ಉನ್ನತ ಸ್ಥಾನ ನೀಡಿದೆ: ಶಾಸಕ ಯಶವಂತರಾಯಗೌಡ

ಇಂಡಿ: ಸೆ.6: ಭಾರತ ದೇಶದಲ್ಲಿ ಶಿಕ್ಷಕರನ್ನು ,ವಿಜ್ಞಾನಿಗಳನ್ನು ದೇಶದ ಉನ್ನತ ಸ್ಥಾನ ಮಾನ ನೀಡಿ ಗೌರವಿಸಿರುವುದು ರಾಷ್ಟ್ರ ನಿರ್ಮಾಣದಲ್ಲಿ ಅತ್ಯೆಂತ ದೊಡ್ಡ ಕೊಡುಗೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಗುರುಭವನದಲ್ಲಿ ಭಾರತ ರತ್ನ ಡಾ. ರಾಧಾಕೃಷ್ಣನ್ ರವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಪ್ರಾಚೀನ ಕಾಲದಿಂದಲೂ ಶಿಕ್ಷಕರಿಗೆ ಇರುವಷ್ಟು ಗೌರವ ಸ್ಥಾನಮಾನ ಮತ್ಯಾರಿಗೂ ಇಲ್ಲ . ರಾಷ್ಟ್ರ ನಿರ್ಮಾಣದ ಶಿಲ್ಪಿ. ಹಿಂದೆ ವೇದ ಉಪನಿಷ್ಯತ್ತು ಹಾಗೂ ರಾಜಮಹಾರಾಜರ ಕಾಲದಲ್ಲಿ ಗುರುವಿಗೆ ಆಶ್ರಯ ನೀಡುತ್ತಿದ್ದು ದೇವರಂತೆ ಪೂಜ್ಯನಿಯವಾಗಿ ಗೌರವಿಸುತ್ತಿದ್ದರು.

ಆಯಾ ಕಾಲಘಟದಲ್ಲಿ ಶಿಕ್ಷಣದಲ್ಲಿ ಅಮೂಲಾಗ್ರಹ ಬದಲಾವಣೆಗಳು ಕಂಡು ಬಂದಿವೆ. ಶೈಕ್ಷಣಿಕ ಪ್ರಗತಿಯಿಂದ ಎನ್ನೇಲ್ಲಾ ಮಾಡಲು ಸಾಧ್ಯೆ ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳು ,ಸಂಸ್ಕಾರಗಳು ಅವಶ್ಯಕ.

 ರಾಜ್ಯದ ಗಡಿ ಭಾಗದಲ್ಲಿ ಶಾಂತಿ, ಪ್ರೀತಿ ಸಹಬಾಳ್ವೆ ಸಾಮರಸ್ಯದಿಂದ ಬದುಕಲು ಶಿಕ್ಷಕರು ಪ್ರಾಂಜ್ವಲ ಮನಸ್ಸಿನಿಂದ ಗುಣಾತ್ಮಕ ಶಿಕ್ಷಣ ನೀಡಿ .ಈ ದೇಶದ ಲಾಲ್‍ಬಹದ್ದೂರ ಶಾಸ್ತ್ರೀಯವರು ಸತ್ಯ ,ಪ್ರಮಾಣಿಕತೆ ಜೀವನದ ಉಸಿರಾಗಿಸಿಕೊಂಡಿದ್ದಾರೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯಿಂದ ಸೈನಿಕ ರೈತ ದೇಶದ ಭದ್ರಬುನಾದಿ ಎಂದಿದ್ದಾರೆ ಆದರೆ ಇಂದಿನ ದಿನಮಾಗಳಲ್ಲಿ ಪ್ರಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ ಶಿಕ್ಷಕರಿಂದ ನಿರ್ಮಿಸಲ್ಪಟ್ಟ ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.

ಎ.ಸಿ ರಾಚಂದ್ರ ಗಡದೆ, ತಹಶೀಲ್ದಾರ ನಾಗಯ್ಯಾ ಹಿರೇಮಠ, ಬಿ.ಈ .ಓ ವಸಂತ ರಾಠೋಡ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್ ನಡಗಡ್ಡಿ, ಪುರಸಭೆ ಅಧ್ಯಕ್ಷೆ ಬನ್ನೇಮ್ಮಾ ಹದರಿ.ಎ.ಎಸ್ ಲಾಳಸೇರಿ, ನಿಜಣ್ಣಾ ಕಾಳೆ, ಎಸ್.ಟಿ ಪಾಟೀಲ, ಎಸ್.ವ್ಹಿ ಹರಳಯ್ಯಾ, ಎಸ್.ಡಿ ಪಾಟೀಲ, ಎಸ್.ಆರ್ ಪಾಟೀಲ, ಎಂ.ಬಿ ಡೇಂಬ್ರೆ, ಮಲ್ಲಿಕಾರ್ಜುನ ಯರಗುದ್ರಿ, ಎಮ್.ಎಚ್ ಬ್ಯಾಳಿ, ಎ.ಓ ಹೂಗಾರ, ಸುಭದ್ರಾ ಗಿರಣಿವಡ್ಡರ್, ಯು.ಎಚ್ ಚವ್ಹಾಣ ಸೇರಿದಂತೆ ತಾಲೂಕಿನ ಎಲ್ಲಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮುಖ್ಯಗುರುಗಳು ಶಿಕ್ಷಕ ವೃಂದ ಬಿ.ಆರ್.ಪಿ ,ಸಿ ಆರ್.ಪಿ ಸಿಬಂದ್ದಿ ಗಣ್ಯರು ಇದ್ದರು.

ಇದೇ ಸಂದರ್ಬದಲ್ಲಿ ನಿವೃತ್ತಿ ಯೋಧ ವಠಾರ ಇವರಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೇರವಣಿಗೆ ಮಾಡಿ ನಂತರ ಗುರುಭವನದಲ್ಲಿ ಎರ್ಪಡಿಸಿದ ಶಿಕ್ಷಕ ದಿನಾಚರಣೆ ಸಭೆಯಲ್ಲಿ ಸನ್ಮಾನಿಸಲಾಯಿತು.

ವಿಶ್ವದಲ್ಲಿಯೇ ಅತ್ಯಂತ ದೊಡ್ಡ ವ್ಯಕ್ತಿ ಶಿಕ್ಷಕ ,ಜೀವನದಲ್ಲಿ ಪ್ರತಿಯೋಬ್ಬ ವ್ಯಕ್ತಿ ಪರಿಪೂರ್ಣವಾಗಲು ತಾಯಿ, ಗುರು, ಅಧ್ಯಾತ್ಮಿಕ ಗುರು ಮೂರು ಶಕ್ತಿಗಳನ್ನು ಯಾವತ್ತೂ ಮರೆಯಕೂಡದು .ತಾಯಿಯನ್ನು ಮರೇತು ಬದಕಿದರೆ ಮನುಷ್ಯತ್ವವಲ್ಲ. ತಂದೆ ಸತ್ತಾಗ ತಬ್ಬಲಿ ಎನ್ನುವುದಿಲ್ಲ ತಾಯಿ ಸತ್ತಾಗ ಮಾತ್ರ ತಬ್ಬಲಿ ಎನ್ನುತ್ತಾರೆ . ಮಾತ್ರು ದೇವೋ ಭವ ಎನ್ನುವ ಅಧ್ಯಾತ್ಮಿಕ, ಧಾರ್ಮಿಕ ತವರೂರಿನಲ್ಲಿ 18 ಸಾವಿರ ವೃದ್ಧಾಶ್ರಮಗಳಿರುವುದು ವಿಷಾದನೀಯ ಸಂಗತಿ. ಪ್ರಾಥಮಿಕ ಹಂತದಲ್ಲಿ ಬಿಳಿ ಹಾಳೆಯಂತಿದ್ದ ಮಗುವಿಗೆ ಒಳ್ಳೆಯ ಸಂಸ್ಕಾರ ನೀಡಿದ ಗುರು ಎರಡನೆ ಸ್ಥಾನವಿದೆ ಇದಾದ ನಂತರ ಅಧ್ಯಾತ್ಮಿಕತೆಯಿಂದ ಜ್ಞಾನದ ಅರಿವು ಮೂಡಿಸಿದ ಈ ಮೂವರು ಮರೆಯಬಾರದು. 12ನೇ ಶತಮಾನದ ಕ್ರಾಂತಿಯೋಗಿ ಅಣ್ಣ ಬಸವಣ್ಣ ಅನುಭಾವ ಮಂಟಪದಲ್ಲಿ ಸಮಾನತೆಯ ಸಿರಿಯನ್ನು ಕೊಟ್ಟಿದ್ದಾರೆ, ಬೇರೆ ಬೇರೆ ರಾಜ್ಯದಿಂದ ಬಂದ ಶರಣರಿಗೆ ಕನ್ನಡ ಭಾಷೆಯ ಮೂಲಕ ವಚನ ಬರೆಯಿಸಿ ತಾಯ್ನಾಡನ್ನು ಶ್ರೀಮಂತರಗೋಳಿಸಿದ್ದಾರೆ. ಬೇರೆ ರಾಷ್ಟ್ರಗಳು ಧರ್ಮಾಧಾರಿತ ನಡೆಯುವುದಿಲ್ಲ , ಭಾರತ ದೇಶದಲ್ಲಿ ವಿವಿಧ ಧರ್ಮಗಳ ದೇಶ ಧರ್ಮ ಆಧಾರಿತವಾಗಿದೆ ಆದ್ದರಿಂದ ಎಲ್ಲಾ ಧರ್ಮಗಳನ್ನು ಪ್ರೀತಿಸಿ ಧರ್ಮ ಉಳಿಯಬೇಕು ಎಂದು ಅರ್ಶೀವಚನ ನೀಡಿದರು.

   ತೋಟದಾರ್ಯ ಶಾಖಾಮಠ ಮುಂಡರಗಿ

ಹಾಗೂ ನಿಷ್ಕಲ ಮಂಟಪ ಬೈಲೂರ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು.