ಶಿಕ್ಷಕರು ರಾಷ್ಟ್ರದ ವಿದ್ಯಾವಂತ ಸಂಪತ್ತನ್ನು ರೂಪಿಸುವವರು

ಸೈದಾಪುರ:ಸೆ.7:ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ಜವಾಬ್ದಾರಿಯುತವಾಗಿ ನಡೆಸಲು ಸರಿಯಾದ ಜ್ಞಾನ ಮತ್ತು ಬುದ್ಧಿಯನ್ನು ನೀಡಿ ರಾಷ್ಟ್ರದ ವಿದ್ಯಾವಂತ ಸಂಪತ್ತನ್ನು ನಿರ್ಮಿಸುತ್ತಾರೆ ಎಂದು ಶ್ರೀ ಬಾಲಾಜಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಕಿಶನ್‍ರಾಠೋಡ್ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಬಾಲಾಜಿ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಜೀವನದಲ್ಲಿ ಶಿಕ್ಷಕರ ಮಹತ್ವವನ್ನು ಪ್ರತಿಬಿಂಬಿಸುವ ದಿನವಾಗಿದೆ. ಶಿಕ್ಷಕರು ನಮಗೆ ಕಲಿಯಲು ಮತ್ತು ಬೆಳೆಯಲು ಸಹಾಯ ಮಾಡುವವರು. ಇಂದಿನ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವನ್ನು ನೀಡುವುದನ್ನು ಕಲಿಯಬೇಕು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್, ವೀರಮ್ಮ, ಮಾರುತಿ, ಹೊನ್ನಪ್ಪ, ಶ್ವೇತಾ, ಬನ್ನಪ್ಪ ಹಾಗೂ ಕಾಲೇಜಿನ ಲಕ್ಷ್ಮಣ, ಮಮತಾ, ಸೌಭಾಗ್ಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು