ಶಿಕ್ಷಕರು ಮಕ್ಕಳ ಪರದೈವ ಸ್ವರೂಪ

ಕಲಬುರಗಿ,ಸೆ.5: ಶಿಕ್ಷಕರು ಮಕ್ಕಳ ಜೀವನ ಬದಲಾಯಿಸುವ ದೈವಿ ಸ್ವರೂಪಗಳಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಾಗಿದರೆ ವಿದ್ಯಾರ್ಥಿಗಳ ಜೀವನ ಉಜ್ವಲವಾಗುತ್ತದೆ ಎಂದು ಅಪ್ಪಾಜಿ ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಭಾಗಮ್ಮ ಉದನೂರ ಹೇಳಿದರು.
ನಗರದ ಉದನೂರದಲ್ಲಿನ ಅಪ್ಪಾಜಿ ಗುರುಕುಲದಲ್ಲಿ ಸೋಮವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಕ್ಷಕ ಮತ್ತು ವಿದ್ಯಾರ್ಥಿಗಳ ಸಂಬಂಧ ಅವಿನಾಭಾವವಾಗಿರುವಂಥಾದ್ದು. ಅತ್ಯುತ್ತಮ ಶಿಕ್ಷಕನಿಂದ ವಿದ್ಯಾರ್ಥಿಗಳ ಜೀವನ ಬೆಳಗುತ್ತದೆ ಎಂದು ಹೇಳಿದರು.
ಗುರುಸಾಲಿಮಠ ಮಾತನಾಡಿ, ಶಿಕ್ಷಕರು ಶ್ರದ್ಧೆಯಿಂದ ಕೆಲಸ ಮಾಡಿ, ಮಕ್ಕಳ ಬಾಳು ಬೆಳಗಬೇಕು. ಗುರುವಿನಿಂದ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನ ನೀಡಲಾಯಿತು. ವಿಶೇಷವಾಗಿ ವಿದ್ಯಾರ್ಥಿಗಳೇ ಶಿಕ್ಷಕರಿಗೆ ವಿವಿಧ ವಿಷಯಗಳ ಕುರಿತು ಪಾಠ ಬೋಧನೆ ಮಾಡಿದ್ದು, ಗಮನ ಸೆಳೆಯಿತು.