ಶಿಕ್ಷಕರು ಮಕ್ಕಳ ಧ್ವನಿಯಾಗಿ ಕೆಲಸ ಮಾಡಿ:ಸಕ್ರೇಪ್ಪಗೌಡ ಬಿರಾದಾರ

ಚಿತ್ತಾಪುರ:ಡಿ.23: ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಇದೆ, ಮಕ್ಕಳು ಇರುವುದರಿಂದಲೇ ಎಲ್ಲ ಸ್ಥಾನಮಾನ ಹಾಗೂ ಅವಕಾಶಗಳು ಸಿಕ್ಕಿವೆ, ಹೀಗಾಗಿ ಶಿಕ್ಷಕರು ಮಕ್ಕಳ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಕ್ರೇಪ್ಪಗೌಡ ಬಿರಾದಾರ ಹೇಳಿದರು.

ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಅಶೋಕ ಲೇಲ್ಯಾಂಡ್, ಲನಿರ್ಂಗ್ ಲಿಂಕ್ಸ್ ಫೌಂಡೇಷನ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರೋಡ್ ಟೂ ಸ್ಕೂಲ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಕ್ಕಳ ಧ್ವನಿಯಾಗಿ ತಂದೆ ತಾಯಿ ಇರುವುದಕ್ಕೆ ಆಗುತ್ತಿಲ್ಲ ಕಾರಣ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ಶ್ರಮಿಸುತ್ತಿರುತ್ತಾರೆ ಹಾಗಾಗಿ ಶಿಕ್ಷಕರೇ ಮಕ್ಕಳ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂಬ ಉತ್ಸಾಹದಿಂದ ಶಿಕ್ಷಕ ಹುದ್ದೆಗೆ ನೇಮಕರಾದವರಲ್ಲಿ ತುಡಿತ, ಬದ್ಧತೆ, ಕಾವು, ಚೇತನ ಎಷ್ಟು ದಿವಸ ಇತ್ತು, ಬರು ಬರುತ್ತಾ ಆ ಉತ್ಸಾಹವೇಕೆ ಕಡಿಮೆ ಆಯ್ತು, ನಾವೇಕೆ ಮೈಮರೆತ್ತಿದ್ದೇವೆ, ನಾವೇಕೆ ವಿಮುಖರಾಗಿದ್ದೇವೆ ಎಂಬುದು ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ್ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ಶಿಕ್ಷಕರು ಆಲೋಚನೆ ಮಾಡಬೇಕಿದೆ, ಸರಕಾರಿ ಶಾಲೆಗೆ ದುರ್ಬಲ ವರ್ಗದ ಮಕ್ಕಳು ಬರುತ್ತಾರೆ ಹಾಗಾಗಿ ಆ ಮಕ್ಕಳ ಧ್ವನಿಯಾಗಿ ಕೆಲಸ ಮಾಡಬೇಕು ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ದೃಷ್ಠಿಕೋನವನ್ನು ಬದಲಾಯಿಸಿಕೊಂಡು ಚಿತ್ತಾಪುರ ಮಾದರಿ ತಾಲೂಕು ಮಾಡುವ ಪ್ರಯತ್ನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಲನಿರ್ಂಗ್ ಲಿಂಕ್ಸ್ ಫೌಂಡೇಶನ್ ಕಾರ್ಯಕ್ರಮ ಅಧಿಕಾರಿ ಗಿರೀಶ್ ಮಾತನಾಡಿ, ಭಾರತ ದೇಶದಲ್ಲಿ ಕಳೆದ 22 ವರ್ಷಗಳಿಂದ ಶೈಕ್ಷಣಿಕ ಸೇವೆಯಲ್ಲಿ ತೊಡಗಿದ ಲನಿರ್ಂಗ್ ಲಿಂಕ್ಸ್ ಫೌಂಡೇಶನ್ 22 ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿದೆ ಪ್ರಸ್ತುತ ಚಿತ್ತಾಪುರ ತಾಲೂಕಿನ 242 ಶಾಲೆಗಳಲ್ಲಿ 6 ರಿಂದ 14 ವರ್ಷದ ಮಕ್ಕಳ ಸವಾರ್ಂಗೀಣ ಅಭಿವೃದ್ದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಅಶೋಕ ಲೇಲ್ಯಾಂಡ್ ಡಿಜಿಎಂ ಕೃಷ್ಣಾ ಶಂಕರ, ಎಸ್‍ಡಿಎಂಸಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿದರು. ಬಿಆರ್‍ಸಿ ಮಲ್ಲಿಕಾರ್ಜುನ ಸೇಡಂ, ಅಕ್ಷರ ದಾಸೋಹ ಅಧಿಕಾರಿ ಪ್ರಕಾಶ ನಾಯ್ಕೋಡಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ಗೋವಿಂದ ರಾಠೋಡ, ವೆಂಕೇಟರೆಡ್ಡಿ, ವಿನೋದ ಗೌಳಿ, ಉಮೇಶ ನೀಲೂರ್, ಅನೀಲ ಕೊಡಂಬಲ್, ಬಸಪ್ಪ ಯಂಬತ್ನಾಳ್, ದೇವಪ್ಪ ನಂದೂರಕರ್, ಸುರೇಶ ಸರಾಫ್ ಸೇರಿದಂತೆ 90 ಶಾಲೆಯ ಮುಖ್ಯಶಿಕ್ಷಕರು ಇದ್ದರು. ಸಂತೋಷ ಶಿರನಾಳ ಸ್ವಾಗತಿಸಿದರು, ಲನಿರ್ಂಗ್ ಲಿಂಕ್ಸ್ ಫೌಂಡೇಶನ್ ಜಿಲ್ಲಾ ವ್ಯವಸ್ಥಾಪಕ ಸಂತೋಷ ನಿರೂಪಿಸಿದರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಾನಂದ ನಾಲವಾರ ವಂದಿಸಿದರು.