ಶಿಕ್ಷಕರು, ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸಲು ಕರೆ

ಸಂಜೆವಾಣಿ ವಾರ್ತೆಹಗರಿಬೊಮ್ಮನಹಳ್ಳಿ.. ಆ.21 ಮಕ್ಕಳ ಕಲಿಕೆ ಮತ್ತು ಆಸಕ್ತಿಯ ಮೇಲೆ ಶಿಕ್ಷಕರು, ಪೋಷಕರು ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಹೇಳಿದರುಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ತಾಲೂಕ್ ಘಟಕದ ವತಿಯಿಂದ ನಡೆದ ಗುರು ಶ್ರೇಷ್ಠ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಲಾಗುವುದು. ಇಂತಹ ಪ್ರತಿಭಾ ಪುರಸ್ಕಾರಗಳು ಮಕ್ಕಳಲ್ಲಿ ಮತ್ತಷ್ಟು ಕಲಿಕೆಯ ಉತ್ತೇಜನ  ನೀಡುತ್ತವೆ ಎಂದರು.ಈ ವೇಳೆ  ಪ್ರಾಥಮಿಕ ಶಾಲಾ ಪ್ರೌಢಶಾಲಾ ಪದವಿ ಪೂರ್ವ ಕಾಲೇಜು ಸೇರಿ 31 ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ  ಗುರು ಶ್ರೇಷ್ಠ ಪ್ರಶಸ್ತಿ ಪ್ರಧಾನವನ್ನು ಮಾಡಲಾಯಿತುಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ 15 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಪಡೆದ 16 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು.ಈ ವರ್ಷದ ವರ್ಗಾವಣೆಯಲ್ಲಿ  ಬೇರೆ ತಾಲೂಕು ಜಿಲ್ಲೆಯಿಂದ ತಾಲೂಕಿಗೆ ಆಗಮಿಸಿರುವ ಶಿಕ್ಷಕರಿಗೆ  ಸನ್ಮಾನಿಸಿ ಸ್ವಾಗತ ಕೋರಲಾಯಿತು. ಪರಿಷತ್ತಿನ ಗೌರವಾಧ್ಯಕ್ಷರಾದ ಎಂ.ಎಸ್ ಪ್ರಭಾಕರ್ ಸರ್ ಅವರು ಪ್ರಾಸ್ತಾವಿಕ ಮಾತನಾಡಿದರು .ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡ ಚರಂತಯ್ಯ ಸ್ವಾಮೀಜಿಯವರು ಹಾಗೂ ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮೀಜಿಗಳು ಆಶೀರ್ವಚನವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನ ಎ. ಸೋಮವಾರ ಗೌಡ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಲ್. ರವಿಚಂದ್ರನಾಯ್ಕ ,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಎಲ್ .ಡಿ. ರವಿ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಶ್ರೀನಿಂಗಪ್ಪ, ರಾಜಶೇಖರಪ್ಪ .ಕೆ, ಶಾಂತವೀರನಗೌಡ ,ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ವೀರನಗೌಡ, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಬಿ .ಚಂದ್ರಪ್ಪ , ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ ಕೆ ಹುಸೇನ್ ಸಾಹೇಬ್, ದಯಾನಂದ ,ಶಂಬಣ್ಣ, ಸಿ ರವಿ ಪ್ರಲ್ಲಾದ್,  ಶ್ರೀನಾಥ್ ಆಚಾರ್, ಬಿ .ಪ್ರಕಾಶ್, ಬಿಬಿಜಿ ಗೌತಮ್ ,ತಂಬ್ರಹಳ್ಳಿ ನಾಗರಾಜ ಜೆಜ್ಜೂರಿ ಉಮೇಶ, ಮೈನಳ್ಳಿ ಮಂಜುನಾಥ ,ವಿಶ್ವನಾಥ ,ಎಚ್. ಕೊಟ್ರಪ್ಪ, ಗೋಪಿನಾಯ್ಕ, ಎಸ್.ಆಂಜನೇಯ  ಗೀತಾ, ಭಾಗ್ಯಲಕ್ಷ್ಮಿ ಇತರರಿದ್ದರು.ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಟಿ.ಸೋಮಶೇಖರ ಸ್ವಾಗತಿಸಿದರು. ಶಕುಂತಲಾ ಹೂಗಾರ್, ನವೀನ್  ಶಿಕ್ಷಕರು  ನಿರೂಪಣೆ ಮಾಡಿದರು. ಎಮ್. ರಾಜು ವಂದನೆಗಳನ್ನು ಸಲ್ಲಿಸಿದರು.