ಶಿಕ್ಷಕರು ನಿರಂತರ ಅಧ್ಯಾಯನ ಶೀಲರಾಗಿರಲು ಕರೆ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ  ಸೆ 06 : ಶಿಕ್ಷಕರು ಎಂದಿಗೂ ಎಚ್ಚರದಿಂದಲೇ ಇರಬೇಕು. ಅವರು ನಿತ್ಯನಿರಂತರ ಗುಣಾತ್ಮಕ ಶಿಕ್ಷಣವನ್ನು ನೀಡವ ಜೋತೆಗೆ ಅಧ್ಯಾಯನಕೂಡ ಅವಶ್ಯವಾಗಿದೆ ಎಂದು ತಾ.ಪಂ. ಪ್ರಭಾರಿ ಇಒ ಯು.ಎಚ್.ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ರಾಮನಗರ ಗುರುಭವನದಲ್ಲಿ ಶಿಕ್ಷಕರ ದಿನಾಚರಣೆ ಸಮಿತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಾ.ಸರ್ವಪಲ್ಲಿ ರಾಧಕೃಷ್ಣನ್‍ರವರ ಜಯಂತಿ ಹಾಗೂ  ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಉತ್ತಮ ಸಮಾಜ ನಿರ್ಮಾಣಮಾಡುವಲ್ಲಿ, ಶಿಕ್ಷಕರ ಕೊಡುಗೆ ಅಪಾರವಾಗಿದ್ದು ಅವರ ಪಾತ್ರ ದೊಡ್ಡದಿದೆ ಎಂದರು. ಇಲ್ಲಿಯ    ತಹಸೀಲ್ದಾರ್ ಶರಣಮ್ಮ ಜ್ಯೋತಿ ಬೆಳಗಿಸಿ, ವಿದ್ಯಾರ್ಥಿ ಜೀವನವನ್ನು ದಾಟಿ ಗುರಿಮುಟ್ಟಬೇಕಾದರೆ, ಗುರುಬಲ ಬೇಕು, ಆ ಗುರು ಒಬ್ಬ ಶಿಕ್ಷಕನಾಗಿರುತ್ತಾನೆ. ಪ್ರತಿಯೊಬ್ಬರಿಗೂ ಗುರುಗಳ ಮಾರ್ಗದರ್ಶನವಿರದೆ ಗುರಿ ಮುಟ್ಟಲಾಗದು ಎಂದರು.   
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹಾಲಸಿದ್ದೇಶ್ವರ ಸ್ವಾಮೀಜಿ ಹಾಲಸ್ವಾಮಿ ಮಠ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ, ನಡೆನುಡಿಗಳ ಜೊತೆಗೆ, ಗುರಿಸಾಧಿಸುವಂತ ಶಿಕ್ಷಣವನ್ನು ನೀಡಿ ಪ್ರೋತ್ಸಹಿಸಬೇಕು. ಸಮಾಜದಲ್ಲಾಗುವಂತ ಸಮಾಜವಿರೋಧ ಚಟುವಟಿಕೆಗಳನ್ನು ಮೆಟ್ಟಿನಿಲ್ಲುವಂತ ಧೈರ್ಯ, ಆತ್ಮಸ್ಥೈರ್ಯವನ್ನು ಶಿಕ್ಷಕರು ತುಂಬಬೇಕು ಎಂದರು.    ಇದೇ ವೇದಿಕೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ನಿವೃತ್ತ ಶಿಕ್ಷಕರಿಗೂ, ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಪಡೆದಿರುವ ಕಿರಣ್‍ಕುಮಾರ್‍ನಾಯ್ಕ್‍ಗೆ ಸನ್ಮಾನ ಮಾಡಲಾಯಿತು. ಶಿಕ್ಷಣ ಇಲಾಖೆಯ ನೌಕರಿಯಲ್ಲಿರುವಾಗ ಮೃತರಾದ ಶಿಕ್ಷಕ ಮತ್ತು ನೌಕರರ ಕುಟುಂಬಕ್ಕೆ ಸಾಂತ್ವಾನವನ್ನು ನಂದಿಪುರದ ಶ್ರೀಗುರುದೊಡ್ಡಬಸವೇಶ್ವರ ಸ್ವಾಮೀಜಿಯವರಿಂದ ನೆರವೇರಿತು.
ಗದ್ದೆಕೆರೆ ಮಠದ ಚರಂತೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು, ಕ್ಷೇತ್ರ ಸಮನ್ವಯಾಧಿಕಾರಿ ಬೋರಯ್ಯ, ಬಿಸಿಯೂಟ ಅಧಿಕಾರಿ ರವಿನಾಯ್ಕ್, ಮುಖ್ಯಶಿಕ್ಷಕ ಓಬಯ್ಯ, ಪ್ರೌ.ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರವಿಚಂದ್ರನಾಯ್ಕ್, ಗೋಣೆಪ್ಪ, ನಾಗರಾಜ್, ಗುರುಭವನ ಸಮಿತಿ ಅಧ್ಯಕ್ಷ ಪ್ರಹ್ಲಾದ್, ಕೆ.ಎಂ.ನಿರ್ಮಲ, ದಾದಿಬೀ, ದೀಪಿಕಾ, ಮಹಾಂತೇಶ್‍ನಾಯ್ಕ್, ಇಟ್ಟಿಗಿ ಮಂಜುನಾಥ, ಇಟ್ಟಗಿ ಪ್ರಭಾಕರ, ವೀರನಗೌಡ ಸೇರಿದಂತೆ ಅನೇಕರು ಇದ್ದರು.
ವೇದಿಕೆಯಲ್ಲಿ ತಹಸೀಲ್ದಾರ್ ಶರಣಮ್ಮರಿಗೆ, ಶಿಕ್ಷಕರ ಸಂಘದ ಕಾರ್ಯದರ್ಶಿ ಬಿ.ಕೊಟ್ರಪ್ಪ ಶಿಕ್ಷಕರ ಸಮಸ್ಯೆಗಳು, ಅವರ ವರ್ಗಾವಣೆ ಹಾಗೂ ಎನ್.ಪಿ.ಎಸ್.ವಿರೋಧಿಸಿ ನಾನಾ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಇಒ ಶೇಖರಪ್ಪ ಹೊರಪೇಟೆ ಹೊರಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹ್ಯಾಟಿ ಲೋಕಪ್ಪ ಸ್ವಾಗತಿಸಿದರು. ಶಿಕ್ಷಕಿ ಶಾರದ ಹಾಗೂ ವಿರುಪಾಕ್ಷಪ್ಪ ಪ್ರಾರ್ಥಿಸಿದರು. ಶಿಕ್ಷಕರಾದ ಟಿ.ಸೋಮಶೇಖರ್, ಹರೀಶ್ ಹಾಗೂ ಯು.ಎಂ.ಶಾಂತಕುಮಾರಿ ನಿರ್ವಹಿಸಿದರು.