ಶಿಕ್ಷಕರು ತಮ್ಮ ವೃತ್ತಿ ಗೌರವ ಕಾಪಾಡಿಕೊಂಡು ಗುರುತ್ವಕ್ಕೆ ಅಣಿಯಾಗಬೇಕುಃ ಗೋವಿಂದ ರೆಡ್ಡಿ

ಆಲಮಟ್ಟಿ, ನ.14-ಶಿಕ್ಷಕರು ತಮ್ಮ ವೃತ್ತಿ ಗೌರವ ಕಾಪಾಡಿಕೊಂಡು ಗುರುತ್ವಕ್ಕೆ ಅಣಿಯಾಗಬೇಕು. ಅಂದಾಗ ಮಾತ್ರ ಸರಕಾರದಿಂದ ನಿಯೋಜಿತ ಉದ್ದೇಶಗಳಿಗೆ ಶಿಕ್ಷಕರಾಗಿದ್ದು ಸಾರ್ಥಕವಾದಂತೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರೆಡ್ಡಿ ಅಭಿಪ್ರಾಯಿಸಿದರು.
ಸ್ಥಳೀಯ ಆರ್.ಬಿ.ಪಿ.ಜಿ. ಹಳಕಟ್ಟಿ ಹಾಗು ಎಂ.ಎಚ್.ಎಂ.ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ಬಸವನ ಬಾಗೇವಾಡಿ ತಾಲ್ಲೂಕಿನ ಪ್ರೌಢಶಾಲೆಗಳ ಗಣಿತ ಹಾಗು ವಿಜ್ಞಾನ ವಿಷಯ ವೇದಿಕೆ ಒಂದು ದಿನದ ಕಾಯಾ9ಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವರ್ಗಕೊಣೆಯಲ್ಲಿ ಬರೀ ಪಾಠ ಮಾಡಿದರೆ ಸಾಲದು. ಆಧ್ಯಾತ್ಮಿಕವಾಗಿ ಮಕ್ಕಳಿಗೆ ಬೋಧನೆ, ಪ್ರೋತ್ಸಾಹ, ಪ್ರೇರಣೆ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸವಾ9ಂಗೀಣ ಬದುಕು ಹಸನವಾಗುವಂತೆ ನೋಡಿಕೊಳ್ಳಬೇಕು.ಅವರ ಗೊತ್ತು ಗುರಿಗಳನ್ನು ಈಡೇರಿಸುಲ್ಲಿ ಶ್ರಮಿಸಬೇಕು.ಒಟ್ಟಾರೆ ಮಕ್ಕಳು ಶಕ್ತಿಶಾಲಿ ವ್ಯಕ್ತಿತ್ವ ನಿಮಾ9ಣಕ್ಕೆ ಕಾರಣರಾಗಬೇಕು. ಇದು ಶಿಕ್ಷಕರ ಅದ್ಯ ಕರ್ತವ್ಯ. ಈ ಕಾಯಕದಲ್ಲಿ ನಿರತರಾಗುವರೇ ಗುರು ಪದಕ್ಕೆ ಹೆಚ್ಚಿನ ಮೌಲ್ಯ ತರಬಲ್ಲರು ಎಂದರು.
ವೇದಾಂತ ಸಮಯದಿಂದಲೂ ವಿಜ್ಞಾನ, ಗಣಿತ ವಿಷಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇವೆರಡು ವಿಷಯಗಳನ್ನು ಸರಳೀಕೃತವಾಗಿ ಕಲಿಸುವ ವಿಧಾನದ ಕೌಶಲ್ಯ ನಮ್ಮ ಶಿಕ್ಷಕರಲ್ಲಿದೆ. ಹೀಗಾಗಿ ನಮ್ಮ ದೇಶದ ಮಕ್ಕಳು ಬಹು ಬೇಗನೆ ಸಾಪ್ಟ್ ವೇರ್ ಇಂಜಿನಿಯರ್ ಆಗಿ ಮಿಂಚುತ್ತಲ್ಲಿದ್ದಾರೆ. ವಿದೇಶಿ ಪ್ರತಿಷ್ಠಿತ ಕಂಪನಿಗಳು ಭಾರತೀಯ ಇಂಜಿನಿಯರ್ ಅವರುಗಳನ್ನೆ ನೆಚ್ಚಿಕೊಂಡು ಮೆಚ್ಚಿಕೊಂಡಿವೆ. ಅಮೇರಿಕಾದಂಥ ಬಲಾಢ್ಯ ದೇಶಗಳಲ್ಲಿ ನಮ್ಮ ದೇಶಿಯ ಯುವಪಡೆಗಳೆ ತಂತ್ರಜ್ಞಾನದ ಕೌಶಲ್ಯ ಪ್ರದಶಿ9ಸಿ ಮೆರೆಯುತ್ತಿದ್ದಾರೆ. ಲೈಫ್ ಯಶಸ್ವಿಗೆ ವಿಜ್ಞಾನ, ಗಣಿತ ಬೇಸಿಕ್ ವಿಷಯಗಳಾಗಿವೆ. ಪ್ರೌಢ ಹಂತದ ಶಿಕ್ಷಣ ಚೆನ್ನಾಗಿದ್ದರೆ ಮಾತ್ರ ಲೈಫ್ ಸೆಕ್ಸಸ್. ಚೆನ್ನಾಗಿ ಓದಿದರೆ ಎಲ್ಲ ರಂಗದಲ್ಲಿ ಪ್ರತಿ ಮಗು ಹೊಳೆಯಬಹುದು. ಲೈಫ್ ಫೌಂಡೇಷನ್ ಪ್ರೌಢ ಶಿಕ್ಷಣ ಯಾವ ಕಾರಣಕ್ಕೂ ನಿರ್ಲಕ್ಷಿಸಬಾರದು. ಅದರಲ್ಲಿ ಸೈನ್ಸ್, ಮ್ಯಾಥ್ಸ್ ಮೊಸ್ಟ್ ಇಂಪಾರಟೆಂಟ್ ಪೆರೇಡ್ ಅಗಿದೆ. ಆ ಕಾರಣ ಸರಿಯಾಗಿ ಪಾಠ ಪ್ರವಚನ ಬೋಧಿಸದಿದ್ದರೆ ಮಕ್ಕಳ ಮನದಿಂದ ದೂರ ಉಳಿಯುತ್ತಿರಿ. ಮಕ್ಕಳು ಶಿಕ್ಷಕರನ್ನು ಇಷ್ಟ ಪಡಬೇಕು. ಶಿಕ್ಷಕರು ಮಕ್ಕಳಿಗೆ ಲೈಕ್ ಅದರೆ ಪಾಠ ಮಕ್ಕಳ ತಲೆಯಲ್ಲಿ ಸರಾಗವಾಗಿ ನುಸುಳಬಲ್ಲದು. ಶಿಕ್ಷಕರು ಮೊದಲು ಮಕ್ಕಳ ಮನಸ್ಸು ಅರಿತು ಪಾಠಕ್ಕಿಳಿಯಬೇಕು. ಅಲಿಸುವ ಅಭಿರುಚಿ ಸೃಜನಶೀಲವಾಗಿ ಸೃಷ್ಟಿಸಬೇಕು. ಮಕ್ಕಳು ಶಿಕ್ಷಕರನ್ನು ಇಷ್ಟಪಟ್ಟರೆ ಮಾತ್ರ ಶಿಕ್ಷಕರು ಹೇಳುವಂಥ ಪಾಠದ ಅಂಶಗಳು ಮಸ್ತಕದಲ್ಲಿ ಇಳಿಯಲು ಸಾಧ್ಯ. ಪವಿತ್ರ ಶಿಕ್ಷಕ ವೃತ್ತಿಗೆ ನ್ಯಾಯ ಗುರುಗಳೇ ಒದಗಿಸಿಕೊಡಲು ಪರಿತಪ್ಪಿಸಬೇಕು ಎಂದು ಗೋವಿಂದ ರೆಡ್ಡಿ ಹೇಳಿದರು.
ಹೈಸ್ಕೂಲ್ ಶಿಕ್ಷಣ ಮಕ್ಕಳ ಪಾಲಿಗೆ ಬದ್ರಬುನಾದಿ. ಇಲ್ಲಿ ಮೊಗ್ಗಿನ ಮನಸ್ಸುಗಳ ಭವ್ಯ ಭವಿಷ್ಯ ಅಡಗಿದೆ. ಗಣಿತ,ವಿಜ್ಞಾನ ವಿಷಯಗಳು ಕಠಿಣವಲ್ಲ. ಶಿಕ್ಷಕರು ಹೇಳುವ ವಿಧಾನದ ಮೇಲೆ ವಿಷಯ ಕ್ಲಿಷ್ಟಕತೆ ಮತ್ತು ಸರಾಗಕತೆ ಅವಲಂಭಿಸಿದೆ. ಕೇವಲ ಬೋರ್ಡ್ ಮೇಲೆ ಡೈಗ್ರಾಮ್ ಹಾಕಿದರೆ ಅಗದು. ಪೀಠೋಪಕರಣ ಬಳಸಿ ಚಿತ್ರಾವಳಿ ನೋಟದ ಚಟುವಟಿಕೆಗಳಲ್ಲಿ ತೋಡಗಬೇಕು. ಮಕ್ಕಳ ಕಣ್ಮುಂದೆ ಪಿಕ್ಚರ್ ನಿಚ್ಚಳವಾಗಿ ರಾರಾಜಿಸಬೇಕು. ಕಣ್ಮುಚ್ಚಿದ ಕೂಡಲೇ ಭೌತಶಾಸ್ತ್ರ ರಸಾಯನಶಾಸ್ತ್ರ, ಜೀವಶಾಸ್ತ್ರದ ವಿಜ್ಞಾನ ಚಿತ್ರಗಳು ಮೂಡುತ್ತಿರಬೇಕು.ಸ್ಪಷ್ಟವಾಗಿ ಇಮ್ಯಾನಿಜೇಶನ ಬರಬೇಕು. ಹೊಸ ಹೊಸ ವಿಷಯ, ವಿಚಾರ,ವಿನಿಮಯ ಮೂಡಿಸಬೇಕು. ಲವಲವಿಕೆಯ ನಗು ಮುಖದೊಂದಿಗೆ ಬೋಧನೆ ಸಾಗಬೇಕು. ಟೀಚಿಂಗ್ ಬೋರಿಂಗ್ ಸಲ್ಲದು. ಆಕ್ಟಿವ್ ಅಗಿರಬೇಕು ಅಂದಾಗ ಮಕ್ಕಳ ಮೇಲೆ ಪರಿಣಾಮ ಬೀರಲು ಸಾದ್ಯ. ನಿಗದಿತ ವೇಳೆಯಲ್ಲೇ 8 ರಿಂದ 10 ನೇ ತರಗತಿಯ ರೂಟಿಂಗ್ ಎಲ್ಲ ಸೆಲೆ ಬಸ್ ಮುಗಿಸಲೇಬೇಕು. ಇದುವೇ ಶಿಕ್ಷಕರು ಮಕ್ಕಳಿಗೆ ಕೊಡುವ ದೊಡ್ಡ ಗಿಫ್ಟ್ ಅಗಿದೆ ಎಂದರು. ಕೇವಲ 10 ನೇ ತರಗತಿಗೆ ಒತ್ತು ನೀಡಿ ಇನ್ನುಳಿದ ತರಗತಿಗಳ ಸೆಲೆ ಬಸ್ ಅರ್ಧಮರ್ಧ ಅಪೂರ್ಣಗೊಳಿಸಬೇಡಿ. ಪೂರ್ಣಗೊಳಿಸುವುದರ ಮೇಲೆಯೇ ಎಸ್ಸೆಸ್ಸೆಲ್ಸಿ ಯಶಸ್ವಿ ಇದೆ. ಈಗಿಂದಲೇ ಬದಲಾವಣೆ ಕಂಡು ಆ ದಿಸೆಯಲ್ಲಿ ಶಿಕ್ಷಕರಿಗೆ ಕಾಯಾ9ಗಾರದ ಸ್ಪೂರ್ತಿ, ಪ್ರೇರಣೆ ಲಭಿಸುವಂತಾಗಲಿ,ಮಕ್ಕಳಿಗೆ ಸದುಪಯೋಗವಾಗಲಿ. ಶಿಕ್ಷಕರ ಮೇಲೆಯೇ ಮಕ್ಕಳ ಹಾಗು ದೇಶದ ಉಜ್ವಲ ಭವಿಷ್ಯ ಅಡಗಿದೆ ಎಂದು ಗೋವಿಂದ ರೆಡ್ಡಿ ನುಡಿದರು.
ಬಿಇಓ ಬಸವರಾಜ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಮನೋಸ್ಥಿತಿ ಅರಿತು ಪಾಠ ಗೈಯಬೇಕು. ಧನಾತ್ಮಕ ಬೆಳಕಿನೆಡೆಗೆ ಮಕ್ಕಳನ್ನು ಕರೆ ತರುವ ಅಗತ್ಯತೆ ಇದೆ. ಗಣಿತದ ಬಗ್ಗೆ ಭಯಭೀತಿ ಮಕ್ಕಳಲ್ಲಿ ಬರದಂತೆ ಶಿಕ್ಷಕರು ಮುತುವರ್ಜಿಯಿಂದ ನೋಡಿಕೊಳ್ಳಬೇಕಾಗಿದೆ. ಸರಳೀಕರಣದ ರೀತಿಯಲ್ಲಿ ಗಣಿತ ಫೋಕಸ್ ಮಕ್ಕಳಲ್ಲಿ ಅರಳಿಸಿ ಉತ್ತೇಜಿಸಬೇಕಾಗಿದೆ.ಕನಿಷ್ಠ ಕಲಿಕಾ ಮಟ್ಟದ ಕಲಿಕೆ ಮಕ್ಕಳಿಗೆ ತಿಳಿಸಿಕೊಡಬೇಕು. ಭವಿಷ್ಯದ ದಾರಿ ಹುಡುಕಲು ಗಣಿತ,ವಿಜ್ಞಾನ ಮಕ್ಕಳಿಗೆ ಅಡಿಪಾಯವಾಗಿದೆ. ಮಕ್ಕಳ ಕನಸಿನ ಬೀಜ ಬಿತ್ತುವ ಕಾಯಕ ಪ್ರಾಮುಖ್ಯತೆಯಿಂದ ನಡೆಯಬೇಕು ಎಂದರು.
ಸಿ.ಎಸ್.ಓ. ಗೋವಿಂದ ರೆಡ್ಡಿ ಹಾಗು ಬಿ.ಇ.ಒ. ಬಸವರಾಜ ತಳವಾರ ಅವರಿಗೆ ಉಭಯ ಶಾಲೆಯ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.