ಶಿಕ್ಷಕರು ಕಣ್ಣಿಗೆ ಕಾಣುವ ದೇವರಿದ್ದಂತೆ: ರಾಜಾರಾಮ್

ಮೈಸೂರು: ಸೆ.07:- ಮುಗ್ಧ ಮನಸ್ಸುಗಳಲ್ಲಿ ಅಕ್ಷರದ ಬೀಜ ಬಿತ್ತಿ, ಮಕ್ಕಳ ವ್ಯಕ್ತಿತ್ವವನ್ನು ನಿಷ್ಕಲ್ಮಶವಾಗಿ ರೂಪಿಸುವ ಶಿಕ್ಷಕರು ಕಣ್ಣಿಗೆ ಕಾಣುವ ದೇವರಿದ್ದಂತೆ' ಎಂದು ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಂ ಸುಂದರಮೂರ್ತಿ ಹೇಳಿದರು. ಸುಜೀವ್ ಫೌಂಡೇಶನ್ ವತಿಯಿಂದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನಬಳಗ ಶಾಲೆಯಲ್ಲಿ ಹಮ್ಮಿಕೊಂಡ ರಾಧಾಕೃಷ್ಣನ್ ಜಯಂತಿ ಮತ್ತು ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವಿಧ ಕ್ಷೇತ್ರದ ಶಿಕ್ಷಕ ಕ್ಷೇತ್ರದಲ್ಲಿ ಶಿಕ್ಷಕ ಸಾಧಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಅವರು ಮಾತನಾಡಿದರು. ಶಿಕ್ಷಕ ಸೇವಾರತ್ನ ಪ್ರಶಸ್ತಿ ಸ್ವೀಕರಿಸಿದ ವಿದುಷಿ ವಿಜಯ ಸುದರ್ಶನ್ (ಸಂಗೀತ ಶಿಕ್ಷಕಿ) ವಿದೂಷಿ ಅನುಸೂಯಾ ಸುದರ್ಶನ್ (ಸಂಗೀತ ಶಿಕ್ಷಕಿ) ವಿದೂಷಿ ನಾಗಲಕ್ಷ್ಮಿ ನಾಗರಾಜನ್ (ನೃತ್ಯ ಶಿಕ್ಷಕಿ) ಮಿತ್ರ ನವೀನ್ (ನೃತ್ಯ ಶಿಕ್ಷಕಿ) ಅನಂತರಾಮು ಕೆ.ಎಲ್ (ಕ್ರೀಡಾ ಶಿಕ್ಷಕರು) ಡಾ.ಶಶಿಕುಮಾರ್ (ಕ್ರೀಡಾ ಶಿಕ್ಷಕರು) ರೋಷನ್ ಅರೆಹೊಳೆ (ಯೋಗ ಶಿಕ್ಷಕರು) ಡಾ.ಬಿ ಶ್ರೀನಾಥ (ಯೋಗ ಶಿಕ್ಷಕರು) ವಿದ್ವಾನ್ ಕೆ.ಎಸ್ ವೆಂಕಟೇಶ್ ಮೂರ್ತಿ (ಆಗಮಿಕ ಶಿಕ್ಷಕರು) ವಿದ್ವಾನ್ ಕೃಷ್ಣಮೂರ್ತಿ (ಆಗಮಿಕ ಶಿಕ್ಷಕ) ಎಂ. ಜಿ.ಸುಗುಣಾವತಿ (ಶಿಕ್ಷಣ ಕ್ಷೇತ್ರ) ಟಿ.ಎಸ್.ಪ್ರಭುಸ್ವಾಮಿ (ಶಿಕ್ಷಣ ಕ್ಷೇತ್ರ) ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಮ್ಮನ್ನು ಅಗಲಿದ ರಾಜ್ಯದ ಅರಣ್ಯ ,ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ ಕತ್ತಿ ರವರಿಗೆ ಮೌನಾಚರಣೆ ಮೂಲಕ ಸಂತಾಪ ಸಲ್ಲಿಸಿ ಆನಂತರ ಸಭಾ ಕಾರ್ಯಕ್ರಮ ಮುಂದುವರಿಸಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಂತ್ರಜ್ಞಾನ ಶಿಕ್ಷಕನಿಗೆ ಪೂರಕವೇ ಹೊರತು ಪರ್ಯಾಯವಲ್ಲ' ಸಹನೆ, ಸಮಯ ಪಾಲನೆ, ಭಾಷೆ, ವಿಷಯದ ಮೇಲೆ ಹಿಡಿತ ಇರುವವರು ಪರಿಪೂರ್ಣ ಶಿಕ್ಷಕನಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಹೇಳಿದರು.ನಿರಂತರ ಅಧ್ಯಯನ ವೃತ್ತಿ ನಿರತ ಶಿಕ್ಷಕರಿಗೆ ಅತ್ಯಗತ್ಯ. ತಂತ್ರಜ್ಞಾನ ಶಿಕ್ಷಕನಿಗೆ ಪೂರಕವೇ ಹೊರತು ಪರ್ಯಾಯವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ ರಾಜಣ್ಣ ಮಾತನಾಡಿ ಪ್ರತಿ ವ್ಯಕ್ತಿಯೂ ತಮ್ಮ ಬದುಕಿನಲ್ಲಿ ವ್ಯಕ್ತಿತ್ವ ಸನ್ನಡೆತೆ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಣದ ಅರ್ಥವನ್ನು ಗ್ರಹಿಸಿ ವಿಧ್ಯಾರ್ಥಿಗಳ ಬದುಕನ್ನು ರೂಪಿಸುವ ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಶಿಲ್ಪಿಗಳು. ಹಾಗಾಗಿ ಶಿಕ್ಷಕರನ್ನು ಗುರುವಾಗಿ ಆರಾಧಿಸುವ ಮೂಲಕ ಇಡೀ ವಿಶ್ವ ಅವರನ್ನು ಅಗ್ರಸ್ಥಾನ ದಲ್ಲಿಟ್ಟು ಗೌರವಿಸುತ್ತದೆ ಅಭಿಪ್ರಾಯ ಪಟ್ಟರು. ಸಂಸ್ಕೃತ ದಲ್ಲಿ ಗುರು ಎಂದರೆ ಕತ್ತಲನ್ನು ಹೋಗಲಾಡಿಸುವ ವನು ಎಂದು ಅರ್ಥವಿದೆ. ಶಿಕ್ಷಣದ ಪಾಠದ ಜತೆ ಜತೆಗೆ ಸಂಸ್ಕಾರಯುಕ್ತ ಹಾಗೂ ನೈತಿಕ ಶಿಕ್ಷಣವನ್ನು ನೀಡುವ ಶಿಕ್ಷಕರು ಸಮಾಜದ ನಿಜವಾದ ಬೆಳಕು ದು ಅವರು ಅರ್ಥೈಸಿದರು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷರಾದ ಡಾ ಆರ್ ಎಚ್ ಪವಿತ್ರ ಮಾತನಾಡಿ ಶಿಕ್ಷಕರಿಗೆ ಜ್ಞಾನದ ಜೊತೆ ಕಾರುಣ್ಯವಿರಲಿ ಜ್ಞಾನದ ಜೊತೆಗೆ ಕಾರುಣ್ಯದ ಮನೋಭಾವ ಹೊಂದಿದ್ದವರು ಮಾತ್ರ ಶ್ರೇಷ್ಠ ಶಿಕ್ಷಕರಾಗಲು ಸಾಧ್ಯ ಜ್ಞಾನ ಹೊಂದಿದ ಎಲ್ಲರೂ ಅದನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ದಾಟಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಜ್ಞಾನದ ಜೊತೆಗೆ ಕಾರುಣ್ಯ ಇದ್ದವರಿಗೆ ತಮ್ಮಲ್ಲಿರುವ ಜ್ಞಾನವನ್ನು ಮತ್ತೊಬ್ಬರಿಗೆ ದಾಟಿಸಬೇಕು ಎಂಬ ತುಡಿತ ಇರುತ್ತದೆ. ಅಂತಹ ತುಡಿತವನ್ನು ಪ್ರತಿಯೊಬ್ಬ ಶಿಕ್ಷಕರಲ್ಲೂ ಕಾಣುವಂತಾಗಬೇಕು' ಎಂದು ಆಶಿಸಿದರು. ಗಾಯಕಿ ಶ್ವೇತಾ ಮಡಪ್ಪಾಡಿ ಮಾತನಾಡಿಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬ ಶಿಕ್ಷಕರನ್ನು ಸಮಾಜ ಗುರುತಿಸಿ ಗೌರವಿಸಬೇಕು. ಆಗ ಮಾತ್ರ ಜವಾಬ್ದಾರಿಯಿಂದ ಕೆಲಸ ಮಾಡುವ ಶಿಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ. ಪಠ್ಯದ ಜೊತೆಗೆ ಜೀವನದ ಪಾಠವನ್ನು ಕೂಡ ಮಕ್ಕಳಿಗೆ ಕಲಿಸುವುದು ಮುಖ್ಯ ಸಂಗತಿಯಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ ,ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ ಗಂಗೋತ್ರಿ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಅಧ್ಯಕ್ಷರಾದ ಡಾ.ಆರ್. ಎಚ್.ಪವಿತ್ರ , ಮಾಜಿ ಅಧ್ಯಕ್ಷರಾದ ವೈ ಡಿ ರಾಜಣ್ಣ, ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜಾರಾಮ್ ಸುಂದರ್ ಮೂರ್ತಿ ,ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಗಾಯಕಿ ಶ್ವೇತಾ ಮಡಪ್ಪಾಡಿ, ಪ್ರತಿಭಾ ಗುರುರಾಜ್ ,ಹಿಮಾಲಯ ಫೌಂಡೇಶನ್ ಅಧ್ಯಕ್ಷರಾದ ಅನಂತ್ ,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ ,ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ,ವಿನಯ್ ಕಣಗಾಲ್, ಎಸ್ ಎನ್ ರಾಜೇಶ್ ,ಶ್ರೀನಿವಾಸ್ ,ವಿದ್ಯಾ ಹಾಗೂ ಇನ್ನಿತರರು ಹಾಜರಿದ್ದರು.