ಶಿಕ್ಷಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು

ಮುಳಬಾಗಿಲು,ಸೆ.೭- ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಲ್ಲೇ ಮುಳಬಾಗಿಲು ಶೈಕ್ಷಣಿಕ ವಲಯದಲ್ಲಿ ಗಮನರ್ಹ ಸಾಧನೆ ಮಾಡಲು ಶಿಕ್ಷಕರು ಪಣತೊಡಬೇಕು ಶೈಕ್ಷಣಿಕ ಕಾಶಿ ಮಾಡಲು ನಾನು ತಯಾರು ಇದ್ದೇನೆ ಎಂದು ಶಾಸಕ ಸಮೃದ್ದಿ ವಿ.ಮಂಜುನಾಥ್ ಹೇಳಿದರು.
ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ ಮತ್ತು ಶಿಕ್ಷಣ ಇಲಾಖೆ ವತಿಯಿಂದ ಭಾರತರತ್ನ ಸರ್ವೇಪಲ್ಲಿ ಡಾ.ಎಸ್.ರಾಧಕೃಷ್ಣನ್ ರವರ ಜನ್ಮ ದಿನೋತ್ಸವ ಅಂಗವಾಗಿ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ನಗರದ ಹೊರವಲಯದ ಶ್ರೀಪೂಲ್‌ಚಂದ್ ಜೈನ್ ಕಲ್ಯಾಣ ಮಂಟಪದಲ್ಲಿ ಉದ್ಘಾಟಿಸಿ ಮಾತನಾಡಿ ಶಿಕ್ಷಕರಲ್ಲಿ ಗುಂಪುಗಾರಿಕೆ ಇರಬಾದು ಆ ಸಂಘ ಈ ಸಂಘ ಎಂಬ ಬೇದಭಾವ ಇಲ್ಲದೆ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಪ್ರಾಥಮಿಕ ಶಾಲಾ ಶಿಕ್ಷಣ ಎಂಬುದು ವಿದ್ಯಾರ್ಥಿಯ ಭದ್ರಬುನಾದಿಯಾಗಿದ್ದು ಶಿಕ್ಷಕರು ಸಮಾಜ ಕಟ್ಟುವ ಕಾಯಕದಲ್ಲಿ ತೊಡಬೇಕು ಎಂದರು.
ನಾನು ನೇರವಾಗಿ ಮಾತನಾಡುವನು ಶಿಕ್ಷಕರು ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದ ಮಕ್ಕಳಿಗೆ ಪಾಠಪ್ರವಚನ ಮಾಡುವ ಮೂಲಕ ಉತ್ತಮ ಭವಿಷ್ಯದ ಭವ್ಯಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನು ತಯಾರು ಮಾಡಬೇಕು ನಾನು ಕಂಡ ಕನಸು ಈಡೇರಿದ್ದು ಕಳೆದ ವರ್ಷ ಶಿಕ್ಷಕ ದಿನಾಚರಣೆಯಂದೇ ಮಾದರಿಯಾಗಿ ಮಾಡಲು ಸಂಕಲ್ಪಿಸಿದೆ ನನ್ನ ದೇನಿದ್ದರೂ ತೆರೆದ ಪುಸ್ತಕ ಇಲ್ಲಿಯೇ ಡ್ರಾ ಇಲ್ಲಿಯೇ ಬಹುಮಾನ ಎಂಬಂತೆ ಅಡಳಿತ ನೀಡುತ್ತೇನೆ ಈ ಬಾರಿ ಶಾಸಕನಾಗಿ ನಿಮ್ಮ ಮುಂದೆ ನಿಂತು ನಿಮ್ಮಲ್ಲಿದ್ದ ಬೇದಭಾವ ಗುಂಪುಗಾರಿಕೆಗಳನ್ನು ಹೋಗಲಾಡಿಸಿ ಒಗ್ಗಟ್ಟು ಮೂಡಿಸಲಾಗಿದೆ ಮುಂಬರುವ ಶಿಕ್ಷಕರ ಸಂಘದ ಚುನಾವಣೆಗಳು ಯಾವುದೇ ಕಾರಣಕ್ಕೂ ನಡೆಯಬಾರದು ಅವಿರೋಧ ಆಯ್ಕೆ ಮಾಡಿಕೊಳ್ಳುವ ಮೂಲಕ ಮಾದರಿಯಾಗಬೇಕು ಎಂದು ಸೂಚನೆ ನೀಡಿದರು.