ಶಿಕ್ಷಕರು ಆದರ್ಶವಾದಾಗ, ಮಕ್ಕಳು ಆದರ್ಶವಾಗಲು ಸಾಧ್ಯ

ಸಿಂಧನೂರು.ಅ.೩- ಪ್ರತಿಯೊಬ್ಬ ಶಿಕ್ಷಕರು ಆದರ್ಶ ವಾದಾಗ, ಪ್ರತಿ ಮಗು ಆದರ್ಶ ಆಗುತ್ತದೆ ಪ್ರತಿಯೊಬ್ಬ ಶಿಕ್ಷಕರು ಆದರ್ಶ ಶಿಕ್ಷಕರಾಗಿ ಅದಕ್ಕೆ ಬೇಕಾದ ರೀತಿಯಲ್ಲಿ ಗುಣಮಟ್ಟದ ಶಿಕ್ಷಣ ವನ್ನು ಮಕ್ಕಳಿಗೆ ಕೊಡಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಸತ್ಯ ಗಾರ್ಡನ್‌ನಲ್ಲಿ ನಡೆದ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆದರ್ಶ ಶಿಕ್ಷಕರ ಪ್ರಶಸ್ತಿ ಪ್ರದಾನ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ
ರಾಯಚೂರು ಕೊಪ್ಪಳ ಜಿಲ್ಲೆಗಳಲ್ಲಿ ಗವಿ ಸಿದ್ದೇಶ್ವರ ಹಾಗೂ ಬಳಗಾನೂರಿನ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿದರೆ ಆಗ ಖಾಸಗಿ ಶಿಕ್ಷಣ ಸಂಸ್ಥೆಗಳಿರಲಿಲ್ಲ. ಅಂತಹ ಕಾಲಗಟ್ಟವನ್ನು ನೋಡಿದ ನಾವುಗಳು ಇಂದು ನಾವು ಅತಿ ಹೆಚ್ಚು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವಂತಹದು ಸಂತೋಷದ ವಿಷಯ.ಶ್ರೀಮಂತ ವರ್ಗದವರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಬೇರೆ ಕಡೆ ಕಳಿಸಿಕೊಡುತ್ತಿದ್ದಾರೆ ಆದರೆ ಕಲಿಯುವ ಮಕ್ಕಳಲ್ಲಿ ಆ ಅಭಿರುಚಿ ಇರಬೇಕು. ಇದರಿಂದ ಸ್ಥಳ ಮುಖ್ಯವಲ್ಲ ಇಚ್ಛಾಶಕ್ತಿ ಮುಖ್ಯ ಎಂದರು. ಉತ್ತಮ ಶಿಕ್ಷಕರು ವರ್ಗಾವಣೆ ಆದಾಗ ಗೋಳಾಡಿ ಅತ್ತಿದ್ದು ನೋಡಿದ್ದವೆ ಶಿಕ್ಷಕರು ತುಂಬಾ ಜವಬ್ದಾರಿ ಯಿಂದ ಶಿಕ್ಷಣ ನೀಡಿದರೆ ಈ ದೇಶದ ಭವಿಷ್ಯ ಉಜ್ವಲವಾಗಲಿದೆ ಅಂತಹ ಪ್ರಾಮಾಣಿಕ ಪ್ರಯತ್ನ ಎಲ್ಲಾ ಗುರುಗಳಿಂದ ನಾವೆಲ್ಲ ನಿರೀಕ್ಷೆ ಮಾಡುತ್ತೆವೆಂದು ಹೇಳಿದರು.ಆದರ್ಶ ಪ್ರಶಸ್ತಿ ಗಿಂತ ಮಕ್ಕಳ ಪ್ರೀತಿಗೆ ಪಾತ್ರರಾಗುವದು ಅತಿ ದೊಡ್ಡ ಪ್ರಶಸ್ತಿ ಎಂದರು.
ಮಾಜಿ ಮಂತ್ರಿಗಳಾದ ವೆಂಕಟರಾವ್ ಮಾತನಾಡಿ ಲಾಲ್ ಬಹಾದ್ದೂರ್ ಶಾಸ್ತ್ರಿ ರಾಜಕಾರಣಿಗಳಿಗೆ ದೊಡ್ಡ ಮಾದರಿ .ಸ್ವಾತಂತ್ರ್ಯ ಪೂರ್ವ ಬಡವರಿಗೆ ಶಿಕ್ಷಣ ಇದ್ದಿಲ್ಲ, ಸ್ವಾತಂತ್ರ್ಯ ನಂತರದ ಶಿಕ್ಷಣ ಮಕ್ಕಳನ್ನು ಶಾಲೆಗೆ ಕಳಿಸುವಂತೆ ನಾವೆಲ್ಲಾ ಮನೆ ಮನೆಗೆ ಓಡಾಡಿದ್ದೆವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ದಿಂದ ಶಿಕ್ಷಣ, ಆರೋಗ್ಯಕ್ಕೆ ಅನುದಾನ ಬರುತ್ತದೆ ಆದರೆ ಕೃಷಿ ಯನ್ನು ಸೇರಿಸಿಲ್ಲ.ಕಡ್ಡಾಯ ಶಿಕ್ಷಣದ ಬದಲಾಗಿ ಗುಣಮಟ್ಟದ ಶಿಕ್ಷಣ ಈಗಿನ ಆದ್ಯತೆಯಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು ಶಿಕ್ಷಣ ಪಡೆದಿದ್ದಾರೆ .ಕೂಲಿ ಮಾಡುವವರ ಮಕ್ಕಳು ಇಂದು ವೈದ್ಯ, ಇಂಜಿನಿಯರ್, ಡಿ.ಸಿ, ಎಸಿ ಆಗಿದ್ದಾರೆ. ನಾನು ಕಲಿತಿಲ್ಲ ನಮ್ಮ ಮಕ್ಕಳಾದರೂ ಕಲಿಯಲಿ ಎಂಬ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿದೆ.ಸಂಸ್ಕಾರದ ಶಿಕ್ಷಣ ಕೊಡದಿದ್ದಲ್ಲಿ ಆ ಮಕ್ಕಳು ತಮ್ಮ ಬದುಕನ್ನು ಕಟ್ಟಿಕೊಳ್ಳಲಾಗದು.
ಬಿಇಒ ಸೋಮಶೇಖರಗೌಡ ಮಾತನಾಡಿ ಪಾಲಕರು ಯಾವ ನಿರೀಕ್ಷೆ ಗಳನ್ನು ಇಟ್ಟುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಾ ಆ ಭರವಸೆ ಉಳಿಸಿಕೊಂಡು ಮಾದರಿ ಸಮಾಜಕ್ಕೆ ನಾಂದಿ ಹಾಡುವಂತೆ ಶಿಕ್ಷಣ ವನ್ನು ನೀಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈ.ನರೇಂದ್ರನಾಥ ವಹಿಸಿದ್ದು, ಮಲ್ಲನಗೌಡ ಕಾನಿಹಾಳ, ಅನೀಲಕುಮಾರ, ವಿರೇಶ ಅಗ್ನಿ, ಟಿ.ಬಸವರಾಜ, ಕೇಶವರಡ್ಡಿ, ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.