ಶಿಕ್ಷಕರಿಗೆ ಪುನ:ಶ್ಚೇತನ ತರಬೇತಿ ಅಗತ್ಯ;  ಬಿ ಇ ಓ ನಂಜರಾಜ್.

ಸಂಜೆವಾಣಿ ವಾರ್ತೆ

ದಾವಣಗೆರೆ. ಜು.೭; ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಲಾಡ್ಯರನ್ನಾಗಿಸಲು ಅವರಲ್ಲಿ ಶಿಸ್ತು, ದೇಶಭಕ್ತಿ, ಸೇವಾ ಮನೋಭಾವನೆಯನ್ನು ಮತ್ತು ಯೋಗ, ಕ್ರೀಡೆಯಂತಹ ವಿಶೇಷ ಚಟುವಟಿಕೆಗಳನ್ನು ನಡೆಸಲು ಶಿಕ್ಷಕರಿಗೆ ಪುನಶ್ಚೇತನ ತರಬೇತಿಯ ಅಗತ್ಯತೆ ಇದೆ ಎಂದು ಹೊನ್ನಾಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್. ನಂಜರಾಜ್ ಅಭಿಪ್ರಾಯಪಟ್ಟರು.  ಹೊನ್ನಾಳಿಯ ಗುರುಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಸೇವಾದಳ ತರಬೇತಿ ಪಡೆದ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.  ಶಾಲೆಗಳಲ್ಲಿ ಕಡ್ಡಾಯವಾಗಿ ಸೇವಾದಳ ಘಟಕಗಳನ್ನು ಆರಂಭಿಸಬೇಕು, ಮಕ್ಕಳಿಗೆ ಸೇವಾದಳ ಶಿಕ್ಷಣವನ್ನು ನೀಡಬೇಕು, ಶಿಕ್ಷಕರ ಜೊತೆಗೆ ಮಕ್ಕಳಿಗೆ ವಿಶೇಷವಾದ ಕಾರ್ಯಕ್ರಮಗಳನ್ನು ವಾರ್ಷಿಕ ಶಾಲಾ ಯೋಜನೆಯಂತೆ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.ತರಬೇತಿಯಲ್ಲಿ ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಸ್. ತಿಪ್ಪೇಸ್ವಾಮಿಯವರು, ದೈಹಿಕ ಶಿಕ್ಷಣ ಅಧಿಕಾರಿಗಳಾದ ಕೆ ಎಸ್ ಈಶ್ವರಪ್ಪನವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾರತ ಸೇವಾದಳದ ಹಿರಿಯಸೇನಾನಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಸೇವಾದಳ ಶಿಕ್ಷಣವನ್ನು ನೀಡಿದ ಮುನಿಸ್ವಾಮಿಯವರು ಬೆಂಗಳೂರಿನಲ್ಲಿ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಚರಣೆಯನ್ನು ಮಾಡಿ ಅವರ ಸೇವೆಯನ್ನು ಶ್ಲಾಘಿಸಲಾಯಿತು.ಜಿಲ್ಲಾ ಸಮಿತಿ ಸದಸ್ಯ ರುದ್ರಯ್ಯನವರು ಸ್ವಾಗತಿಸಿದರು, ವಲಯ ಸಂಘಟಕ ಅಣ್ಣಪ್ಪ ನವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಜಪ್ಪನವರು ವಂದಿಸಿದರು.