ಶಿಕ್ಷಕರಿಗೆ ಉನ್ನತ ಮಟ್ಟದ, ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳುವಳಿಕೆ ಅಗತ್ಯ: ಡಾ. ಲಹೇಕ್

ಕಲಬುರಗಿ,ನ.03: ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕಾಡೆಮಿಯು ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರಿಗೆ ಉನ್ನತ ಮಟ್ಟದ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನದ ತಿಳುವಳಿಕೆಯನ್ನು ನೀಡುವ ಗುರಿಯನ್ನಿಟ್ಟುಕೊಂಡು ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ನವದೆಹಲಿಯ ವಿಶ್ವ ಸಣ್ಣ ಮತ್ತು ಮಧ್ಯಮ ಶ್ರೇಣಿ ಕೈಗಾರಿಕೆ ಪ್ರಮುಖ ಕಾರ್ಯದರ್ಶಿ ಡಾ. ಸಂಜೀವ್ ಲೇಹ್ ಅವರು ಹೇಳಿದರು.
ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಕಾಲೇಜಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಇಂಜಿನಿಯರಿಂಗ್ ಕಾಲೇಜಿನ ಶಿಕ್ಷಕರಿಗಾಗಿ ಬ್ಲಾಕ್ ಚೈನ್ ಟೆಕ್ನಾಲಾಜಿ ಕುರಿತ ಐದು ದಿನಗಳ ಉಪನ್ಯಾಸ ಮಾಲಿಕೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಬ್ಲಾಕ್ ಚೈನ್ ಟೆಕ್ನಾಲಜಿಯನ್ನು ಬಳಸಿಕೊಂಡು ಪ್ರತಿಯೊಬ್ಬರು ಬ್ಯಾಂಕಿನ ಸೇವೆ ಉಪಯೋಗಿಸದೆಯೇ ತಮ್ಮ ಹಣವನ್ನು ಇನ್ನೊಬ್ಬರಿಗೆ ವರ್ಗಾಯಿಸಿಕೊಳ್ಳುವುದು ಹಾಗೂ ಜಮೆ ಮಾಡಿಕೊಳ್ಳುವಂತಹ ಕಾರ್ಯಗಳನ್ನು ಸುಲಲಿತವಾಗಿ ಇಂಟರನೆಟ್ ಮೂಲಕ ಮಾಡಬಹುದಾಗಿದೆ ಎಂದರು.
ಸದ್ಯ ಬ್ಲಾಕ್ ಚೆನ್ ಟೆಕ್ನಾಲಜಿ ತನ್ನ ಕಾರ್ಯ ಪ್ರಾರಂಭಿಸಿದ್ದು ಬಹುತೇಕ ಕ್ಷೇತ್ರದಲ್ಲಿ ಇದರ ಸದುಪಯೋಗ ಪಡೆದುಕೊಳ್ಳಲಾಗುತ್ತಿದೆ. ಇಂದಿನ ಶೈಕ್ಷಣಿಕ ಅಭ್ಯಾಸ ಕ್ರಮದಲ್ಲಿ ಈ ತಂತ್ರಜ್ಞಾನವನ್ನು ಅಳವಡಿಕೊಂಡು ವಿದ್ಯಾರ್ಥಿಗಳಿಗೆ ಪ್ರಸ್ತುತ ಜಗತ್ತಿನಲ್ಲಿ ಕಾರ್ಯನಿರ್ವಹಿಸುವ ಗುಣಮಟ್ಟ ಕೊಡಬೇಕಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ್ ಸಿ. ಬಿಲಗುಂದಿ ಅವರು ಮಾತನಾಡಿ, ಶಿಕ್ಷಣದ ಗುಣಮಟ್ಟ ಹೆಚ್ಚಿಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ತಮ್ಮ ಸಂಸ್ಥೆ ಶ್ರಮಹಿಸುವುದು ಹಾಗೂ ಅದಕ್ಕೆ ಬೇಕಾಗುವ ಎಲ್ಲಾ ರೀತಿಯ ಅನೂಕೂಲತೆಗಳನ್ನು ಕಲ್ಪಿಸಲಾಗುವದು ಎಂದರು.
ಉಪನ್ಯಾಸ ಮಾಲಿಕೆಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 120 ಶಿಕ್ಷಕರು ಭಾಗವಹಿಸಿದ್ದು ಉನ್ನತ ವಿಶ್ವವಿದ್ಯಾಲಯ, ಐಐಟಿ ಮತ್ತು ಎನ್‍ಐಟಿಯ 13 ಸಂಪನ್ಮೂಲ ವ್ಯಕ್ತಿಗಳು ಬ್ಲಾಕ ಚೈನ್ ಟೆಕ್ನಾಲಜಿ ಕುರಿತು ಉಪನ್ಯಾಸ ನೀಡುವರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ಎಸ್. ಎಸ್. ಹೆಬ್ಬಾಳ್ ಅವರು ಸ್ವಾಗತಿಸಿ ಮಾತನಾಡಿ, ಕಾಲೇಜಿನ ಇನ್ನೂ ಹಲವಾರು ವಿಭಾಗಗಳಿಗೆ ಇದೇ ರೀತಿಯ ಉಪನ್ಯಾಸ ಮಾಲಿಕೆಗೆ ಅನುಮತಿ ದೊರೆತಿದೆ. ಅಟಲ್ ರ್ಯಾಂಕಿಂಗ್ ನಲ್ಲಿ ಕಾಲೇಜು ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದನ್ನು ಎಂದು ಸ್ಮರಿಸಿಕೊಂಡರು.
ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಸಕ್ರೀಯವಾಗಿ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪ್ರಸ್ತುತ ಜಗತ್ತಿನ ತಂತ್ರಜ್ಞಾನ ನೀಡುತ್ತಿದೆ ಎಂದು ಅವರು ಹೇಳಿದರು.
ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥೆ ಮತ್ತು ಉಪನ್ಯಾನ ಮಾಲಿಕೆಯ ಸಂಯೋಜಕಿ ಡಾ. ಭಾರತಿ ಹರಸೂರ್ ಅವರು ಮಾತನಾಡಿ, ಎಐಸಿಟಿ ಅಟಲ್ ಪಠ್ಯ ಮತ್ತು ಕಲಿಕಾ ಅಕ್ಯಾಡೆಮಿಯ ಗುರಿಯನ್ನು ವಿವರಿಸಿ, ಮುಂಬರುವ ದಿನಗಳಲ್ಲಿ ಇನ್ನೂ ಸಾಕಷ್ಟು ಕಾರ್ಯಕ್ರಮವನ್ನು ನಡೆಯಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಸಂಚಾಲಕ ಅಶೋಕ್ ಪಾಟೀಲ್ ಅವರು ಬ್ಲಾಕ್ ಚೈನ ಟೆಕ್ನಾಲಜಿಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮತ್ತೋರ್ವ ಸಂಚಾಲಕ ಡಾ. ನಾಗೇಶ್ ಸಾಲಿಮಠ್ ಅವರು ವಂದಿಸಿದರು. ಪ್ರೊ. ರಶ್ಮೀ ತಳ್ಳಳ್ಳಿ ಮತ್ತು ಎಸ್. ಸುಮಾ ಅವರು ಕಾರ್ಯಕ್ರಮ ನಿರೂಪಿಸಿದರು.
ಉಪ-ಪ್ರಿನ್ಸಿಪಾಲ್ ಡಾ. ಎಸ್. ಎಸ್. ಕಲಶೆಟ್ಟಿ, ಡೀನ್ ಅಕ್ಯಾಡೆಮಿಕ ಡಾ. ಎಸ್. ಆರ್. ಪಾಟೀಲ್, ಟೆಕ್ವಿಪ್ ಸಂಚಾಲಯಕರಾದ ಪ್ರೊ. ಶರಣ್ ಪಡಶೆಟ್ಟಿ, ಹೆಚ್ಚುವರಿ ಡೀನ್ ಡಾ. ಎಸ್. ಆರ್. ಹೊಟ್ಟಿ, ವಿಭಾಗದ ಪ್ರಾಧ್ಯಪಕರು ಹಾಗೂ ಹೆಚ್ಚುವರಿ ಡೀನ್‍ರಾದ ಡಾ. ವಿಶ್ವನಾಥ್ ಬುರಕಪಳ್ಳಿ, ಪ್ರೊ, ಉದಯ್ ಬಳಗಾರ್ ಅವರು ಸಲಹೆಗಾರರಾಗಿ ತಮ್ಮ ಕಾರ್ಯನಿರ್ವಹಿಸಿದರು. ವಿಭಾಗದ ಚಂದ್ರಕಾಂತ್ ಬಿರಾದಾರ್, ನಿತಿನ್ ಕಟ್ಟಿಶೆಟ್ಟರ್, ಗೌರಿ ಪಾಟೀಲ್, ಶರಣು ಹುಲಿ, ಗುರಪ್ಪ ಕಲ್ಯಾಣಿ, ರಶ್ಮೀ ತಳ್ಳಳಿ, ಅರ್ಚನಾ ಪಾಟೀಲ್, ಸುಮಾ, ಮಲ್ಲಿಕಾರ್ಜುನ್ ರೆಡ್ಡಿ, ಅಂಬಾರಾಯ್, ಗಂಗಾಧರ್, ಗೀತಾ,ಕವಿತಾ ಮತ್ತು ಸುವರ್ಣಾ ಎಮ್.ಐ. ಅವರು ಕಾರ್ಯಾಗಾರದ ಸಂಘಟಕರಾಗಿ ಕಾರ್ಯನಿರ್ವಹಿಸಿದರು.