ಶಿಕ್ಷಕರಿಗೆ ಆರ್ಥಿಕ ಸಹಾಯಧನ ನೀಡಲು ರಝಾಕ್ ಆಗ್ರಹ

????????????????????????????????????

ರಾಯಚೂರು, ಮೇ.೩೦-ದೇಶದಲ್ಲಿ ಕಳೆದ ಒಂದುವರೆ ವರ್ಷದಿಂದ ಕೋವಿಡ್ -೧೯ ರೋಗ ಹರಡುವ ಕಾರಣ ಲಾಕ್‌ಟೌನ್ ಜಾರಿಮಾಡಿರುವದರಿಂದ ದೇಶದ ಬಹುತೇಕ ನಾಗರೀಕರು ದಿನನಿತ್ಯದ ಬದುಕಿಗೆ ಪರದಾಡುವಂತಹ ಪರಿಸ್ಥಿತಿ ಬಂದಿದೆ , ಇಂತಹ ಸಂದರ್ಭದಲ್ಲಿ ಜನಪರ ಸರಕಾರಗಳು ನಾಗರೀಕರ ನೆರವಿಗೆ
ಬರಬೇಕೆಂದು ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ. ರಝಾಕ್ ಉಸ್ತಾದ್ ಒತ್ತಾಯಿಸಿದರು.
ಇತ್ತೀಚಿಗೆ ಸರಕಾರ ಹಲವು ವೃತ್ತಿಗಳಲ್ಲಿ ಇರುವ ನಾಗರೀಕರಿಗೆ ಆರ್ಥಿಕ ಸಹಾಯ ಘೋಷಿಸಿರುವದು ಒಳ್ಳೆಯ ಬೆಳವಣಿಗೆ , ಆದರೆ ಕಳೆದ ಒಂದುವರೆ ವರ್ಷದಿಂದ ಯಾವುದೇ ಕೆಲಸವಿಲ್ಲದೇ ಬೇರೆ ಕೆಲಸ ಮಾಡಲು ಸಾದ್ಯವಾಗದೇ ಪರದಾಡಿರುವದು ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಅತಿಥಿ ಶಿಕ್ಷಕರು , ಅತಿಥಿ ಉಪನ್ಯಾಸಕರು ತಮ್ಮ ದೈನಂದಿನ ಜೀವನವನ್ನು ನಡೆಸುವದು ಅತೀ ಕಷ್ಟಕರ ಸ್ಥಿತಿಯನ್ನು ಏದುರಿಸುತ್ತಿದ್ದಾರೆ ಕರ್ನಾಟಕ ರಾಜ್ಯದ ಶೇ ೭೦ ರಷ್ಟು ಶಿಕ್ಷಣ ವ್ಯವಸ್ಥೆ ಇಂತಹ ಶಿಕ್ಷಕರ ಮೇಲೆಯೇ ಅವಲಂಬಿಸಿದೆ , ರಾಜ್ಯದ ಆಡಳಿತ ವರ್ಗ , ಜನಪ್ರತಿನಿಧಿಗಳು , ಶ್ರೀಮಂತರ ಮಕ್ಕಳು ಶಿಕ್ಷಣ ಪಡೆಯುವದು ಇಂತಹ ಖಾಸಗಿ ಶಾಲಾ ಕಾಲೇಜುಗಳಲ್ಲಿಯೇ ಎನ್ನುವದು ಎಲ್ಲರಿಗೂ ತಿಳಿದ ವಿಷಯ.ಆದರೆ ಅಲ್ಲಿ ಶಿಕ್ಷಣ ನೀಡುವ ಶಿಕ್ಷಕರ ಪಾಡು ಕೇಳುವವರಿಲ್ಲದ ಹಾಗಾಗಿದೆ . ಕೆಲವು ಶಿಕ್ಷಕರು ಉಪನ್ಯಾಸಕರು ಕುಟುಂಬ ನಿರ್ವಹಣೆ ಮಾಡಲು ಸಾದ್ಯವಾಗದೇ ನರೇಗಾ ಕೂಲಿಕಾರರಾಗಿ , ದಿ ನಗೂಅಗಾಗಿ , ತರಕಾರಿ , ಹಣ್ಣು ಮಾರುವ ಕೆಲಸ ಕೂಡ ಮಾಡುತ್ತ ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ . ಕಳೆದ ಒಂದು ವರ್ಷದಿಂದ ಹಲವಾರು ಸಂಘಟನೆಗಳು ಪ್ರತಿಭಟನೆ , ಧರಣಿ ಮೂಲಕ ಸರಕಾರಕ್ಕೆ ಒತ್ತಾಯ ಮಾಡಲಾಗಿದ್ದರೂ ಯಾವುದೇ ಪ್ರಯೋಜನೆಯಾಗಿರುವದಿಲ್ಲ . ಇದರಿಂದ ಸಮಾಜದಲ್ಲಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಒಂದು ವಿದ್ಯಾವಂತ ಸಮುದಾಯ ವ್ಯವಸ್ಥೆಯ ಬಗ್ಗೆ ಜಿಗುಪ್ಪೆ ಹೊಂದುವ ಸಾಧ್ಯತೆಯಿದೆ . ಅನುದಾನರಹಿ ತ ಶಾಲಾ ಕಾಲೇಜುಗಳನ್ನೇ ನಂಬಿ ತಮ್ಮ ಬದುಕನ್ನು ಇತಿಮಿತಿಯಲ್ಲಿ ಕಟ್ಟಿಕೊಂಡಿದ್ದು , ಈಗ ಬಂದಿರುವ ಈ ಮಹಾಮಾರಿ ಕಾರಣ ಅವರ ಬದುಕು ಮೂರಾಬಟ್ಟಯಾಗಿದೆ . ಕಾರಣ , ಖಾಸಗಿ ಅನುದಾನರಹಿತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಸರಕಾರಿ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಶಿಕ್ಷಕರು , ಅತಿಥಿ ಉಪನ್ಯಾಸಕರಿಗೆ ಕೇವಲ ಲಾಕ್ ಡೌನ್ ಅವಧಿ ಮಾತ್ರ ಪರಿಗಣಿಸದೇ ಶಾಲೆಗಳು ಬಂದ ಆದ ದಿನದ ಹಿಡಿದು ಮುಂದೆ ಪ್ರಾರಂಭವಾಗುವ ದಿನದವರೆಗೆ ಒಂದು ಉತ್ತಮವಾದ ಜೀವನ ನಿರ್ವಹಣೆಗೆ ಅವಶ್ಯಕತೆ ಇರುವ ಆರ್ಥಿಕ ಸಹಾಯವನ್ನು ನೀಡಬೇಕಿದೆ.ಆದ್ದರಿಂದ , ಇವರ ತಾಳ್ಮೆಯನ್ನು ಪರೀಕ್ಷಿಸದೇ ತಕ್ಷಣ ಆರ್ಥಿಕ ಸಹಾಯವನ್ನು ಮಾಡುವ ಒಂದು ನಿರ್ಣಯವನ್ನು ಸರಕಾರ ಮಾಡಬೇಕೆಂದು ಒತ್ತಾಯಿಸಿದರು.