ಶಿಕ್ಷಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ

ಕಲಬುರಗಿ,ಜು.31-ವ್ಯಕ್ತಿತ್ವ ವಿಕಾಸ ಎಜ್ಯುಕೇಶನ್À ಸೂಸೈಟಿ ಅಡಿಯಲ್ಲಿ ಪ್ರತಿವರ್ಷದಂತೆ ಈ ವರ್ಷವು (2022) ಕೂಡ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ “ಶೈಕ್ಷಣಿಕ ಕಾರ್ಯಗಾರ”ವನ್ನು ಸಂಸ್ಥೆಯ ಗೌರವ ಆಡಳಿತಾಧಿಕಾರಿ ಕೆ.ವಿಶ್ವನಾಥ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದಂತ ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಪಿ.ವಾಸುದೇವ್ ಸೇಡಂ ಅವರು ತಮ್ಮ ಸ್ಪೂರ್ತಿದಾಯಕ ಮಾತುಗಳಿಂದ ಎಲ್ಲರನ್ನು
ಹುರಿದುಂಬಿಸಿ ಹೊಸ ಶಿಕ್ಷಣ ನೀತಿಯ ಬಗ್ಗೆ ವಿಸ್ತಾರವಾಗಿ ವಿಶ್ಲೇಷಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈರಾಜ.ಬಿ.ಪಾಟೀಲ್ ಓಕಳಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಆಡಳಿತಾಧಿಕಾರಿಗಳಾದ ಶಶೀಕಲಾ.ಜೆ.ಪಾಟೀಲ್, ಭಾರತಿ ಹುಡ್ಗಕರ್ ಅವರು ಕಾರ್ಯಕ್ರದಲ್ಲಿ ಪಾಲ್ಗೊಂಡರು. ಭಾವನಾ ಅವರು (ಕಿಂಡರಗಾರ್ಟನ್) ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಹೇಗೆ ಪ್ರಾಯೋಗಿಕವಾಗಿ ಮಾಡಿ-ಕಲಿ ಎಂಬುದನ್ನು ಮಾಡಿ ತೋರಿಸಿದರು.
ತಾಜಸುಲ್ತಾನಪುರದ ಸಹ ಶಿಕ್ಷಕಿ ಜಾಧÀವ್ ಶಿಥಲ್ ಅವರು “ಕಲಿಕಾ ಚೆತರಿಕೆ” ಬಗ್ಗೆ ಸವಿಸ್ತಾರವಾಗಿ ಮಾತನ್ನಾಡಿದರು. ಶಿಕ್ಷಕಿ ಸುವರ್ಣಾ ಅವರು ಮೂಲ ಶಿಕ್ಷಣದ ಬಗ್ಗೆ ಮನಮುಟ್ಟುವಂತೆ ಮಾತನಾಡಿ ಶಿಕ್ಷಕರು ಯಾವ ರೀತಿ ಪೂರ್ವಸಿದ್ಧತೆಯನ್ನು ಯಾವರೀತಿ ಮಾಡಿಕೊಂಡು ಬರಕೆಂಬುವದರ ಬಗ್ಗೆ ಬಹಳ ಸೋಗಸಾಗಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ವರ್ಗದವರು ಬಹಳ ಉಸ್ತುಕತೆಯಿಂದ ಪಾಲ್ಗೊಂಡರು.