ಶಿಕ್ಷಕರಿಗರೆ ಫುಡ್ ಕಿಟ್ ವಿತರಣೆ

ಚಿತ್ರದುರ್ಗ,ಮೇ.26: ಕೊರೊನಾ ಎಂಬ ಮಹಾಮಾರಿ ಜಗತ್ತಿನಲ್ಲಿರುವ ಅದೇಷ್ಟೋ ಸಾಮಾನ್ಯ ಜನರ ಬದುಕನ್ನು ಕಿತ್ತುಕೊಂಡು , ಜೀವನ ನಿರ್ವಹಣೆಯ ಕಷ್ಟಕರ ಪರಿಸ್ಥಿತಿಗೆ ಸಿಲುಕಿಸಿದೆ. ಇದರಲ್ಲಿ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಗೋಳು ಸಹ ಹೇಳತೀರದಾಗಿದೆ. ಇಂತಹ ಶಿಕ್ಷಕರಿಗೆ ನಗರದ ವೆಲ್ ಫೇರ್ ಟ್ರಸ್ಟ್ ಶಾಲೆಯ ನಿರ್ವಾಹಕರಾದ ಶ್ರೀಮತಿ ಮೀನಾ ಅವರು ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.ಕೊರೊನಾ ಹೆಮ್ಮಾರಿ ತಡೆಗೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸ್ತಿದ್ದ ಶಿಕ್ಷಕ, ಶಿಕ್ಷಕಿಯರ ಪಾಡು ಹೇಳತೀರದಾಗಿದೆ. ಈ ಕಡೆ ಶಾಲೆಯೂ ಇಲ್ಲ ಸಂಬಳವೂ ಎಂಬಂತಾಗಿರೋ ಖಾಸಗಿ ಶಿಕ್ಷಕ, ಶಿಕ್ಷಕಿಯರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಚಿತ್ರದುರ್ಗ ನಗರದ ಜೆ.ಸಿ ಆರ್ ಬಡಾವಣೆಯಲ್ಲಿರುವ  ವೆಲ್ ಫೇರ್ ಟ್ರಸ್ಟ್ ಶಾಲೆಯ ನಿರ್ವಾಹಕರಾದ ಶ್ರೀಮತಿ ಮೀನಾ  ಅವರು ಇಂದು ತಮ್ಮ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಾಗೂ ಕಾರ್ಯ ನಿರ್ವಹಿಸಿ ಬೇರೆಡೆ ಕೆಲಸ ಮಾಡ್ತಿರುವ ಶಿಕ್ಷಕಿಯರ ಸಂಕಷ್ಟಕ್ಕೆ ಸ್ಪಂದಿಸಿ ಶಿಕ್ಷಕಿಯರಿಗೆ ತಮ್ಮ ಕೈಲಾದ ಧನ ಸಹಾಯ ಹಾಗೂ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ. ಇಂತಹ ಕಾರ್ಯವನ್ನು ಶಿಕ್ಷಕರ ಮಂಡಳಿ ಶ್ಲಾಘಿಸಿದ್ದು, ಶ್ರೀಮತಿ ಮೀನಾ ಅವರಂತೇಯೇ ಧಾನಿಗಳು  ಸಂಕಷ್ಟದಲ್ಲಿರುವ  ಶಿಕ್ಷಕ, ಶಿಕ್ಷಕಿಯರ ನೆರವಿಗೆ ಧಾವಿಸಬೇಕೆಂಬ ಆಶಯವಾಗಿದೆ.