ಶಿಕ್ಷಕರಿಂದ ಸಮಾಜಕ್ಕೆ ಅಭಿವೃದ್ಧಿ ಪೂರಕ ಆಯ್ಕೆ

ಕೋಲಾರ,ಜೂ.ಜೂ೩:ಒಂದು ಕಲ್ಲಿಗೆ ರೂಪ ಕೊಟ್ಟು ಶಕ್ತಿಯಾಗಿ ಪರಿವರ್ತಿಸುವಂತ ಶಿಲ್ಪಿಗಳಂತೆ ಶಿಕ್ಷಕರು ಸಮಾಜಕ್ಕೆ ಪೂರಕವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತ ಪ್ರಜ್ಞಾವಂತರಾಗಿದ್ದಾರೆ. ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಆಯ್ಕೆ ಮಾಡಿದಂತೆ ಶಿಕ್ಷಕರು ಸಹ ವಿಧಾನಪರಿಷತ್‌ಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಶಿಕ್ಷಕರ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ಮುಂದಾಗಲಿದ್ದಾರೆ ಎಂಬ ವಿಶ್ವಾಸವನ್ನು ಶಾಸಕ ಕೊತ್ತೂರು ಮಂಜುನಾಥ್ ವ್ಯಕ್ತ ಪಡೆಸಿದರು,
ನಗರದ ಪತ್ರಿಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೇಸ್ ಪಕ್ಷದಿಂದ ಡಿ.ಟಿ.ಶ್ರೀನಿವಾಸ್ ಅವರು ಸ್ವರ್ಧಿಸಿದ್ದಾರೆ ಅವರ ಕ್ರಮ ಸಂಖ್ಯೆ ೨ ಅಗಿದೆ. ೨೦ ಸಾವಿರ ವಿದ್ಯಾರ್ಥಿಗಳಿರುವ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿರುವ ಅವರಿಗೆ ಶಿಕ್ಷಕರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಅವರಿಗೆ ಅಪಾರ ಅನುಭವದ ಜೊತೆಗೆ ಸಮಸ್ಯೆಗಳ ಬಗ್ಗೆ ಅರಿವು ಇದೆ.ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಬೇಕಾದಲ್ಲಿ ಡಿ.ಟಿ.ಶ್ರೀನಿವಾಸ್ ಬಹುಮತದಿಂದ ಆಯ್ಕೆ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷವೇ ಅಧಿಕಾರದಲ್ಲಿದ್ದು, ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದು ಪರಿಹರಿಸಲು ಪೂರಕವಾಗಲಿದೆ ಹಾಗಾಗಿ ಡಿ.ಟಿ.ಶ್ರೀನಿವಾಸ್ ಆಯ್ಕೆ ಮಾಡುವುದು ಸೂಕ್ತವಾಗಿದೆ ಎಂದು ಅಭಿಪ್ರಾಯ ಪಟ್ಟರು,
ಕಳೆದ ಮೂರು ಅವಧಿಯಿಂದ ನೀವುಗಳು ಆಯ್ಕೆ ಮಾಡಿ ವಿಧಾನ ಪರಿಷತ್‌ಗೆ ಕಳುಹಿಸುತ್ತಿದ್ದ ಅಭ್ಯರ್ಥಿಯಿಂದ ಶಿಕ್ಷಕರ ಯಾವೂದೇ ಸಮಸ್ಯೆಗಳು ಬಗೆ ಹರಿಯದೆ ಜೀವಂತವಾಗಿ ಉಳಿದಿದೆ. ಖಾಸಗಿ ಶಿಕ್ಷಕರು ನಿವೃತ್ತರಾದ ಸಂದರ್ಭದಲ್ಲಿ ಬರಿಗೈಯಲ್ಲಿ ಹೋಗ ಬೇಕಾಗಿದೆ, ಹೊಸ ಪಿಂಚಣಿಯಿಂದ ಖಾಸಗಿ ಶಿಕ್ಷಕರಿಗೆ ಅನಾನುಕುಲ ಯಾವೂದೇ ಪ್ರಯೋಜನವಿಲ್ಲ. ವಿಮೆ ಇಲ್ಲ, ಕಾಲ್ಪನಿಕ ವೇತನ ಇಲ್ಲ. ೬ನೇ ವೇತನ ಕಾಂಗ್ರೇಸ್ ಆಡಳಿತದಲ್ಲಿ ಅಗಿದ್ದು ೭ನೇ ವೇತನ ಈವರೆಗೆ ಜಾರಿ ಇಲ್ಲ. ನೇಮಕಾತಿ ಇಲ್ಲ. ವೇತನ ಏರಿಕೆ ಇಲ್ಲ. ಎಂದು ಅನೇಕ ಸಮಸ್ಯೆಗಳು ಬಗೆ ಹರಿಸಿಲ್ಲ . ಇವೆಲ್ಲಾ ಬಗೆಹರಿಯ ಬೇಕಾದರೆ ಕಾಂಗ್ರೇಸ್ ಬೆಂಬಲಿ ಅಭ್ಯರ್ಥಿಯನ್ನು ನೀವು ಆಯ್ಕೆ ಮಾಡ ಬೇಕೆಂದು ಕಿವಿ ಮಾತು ತಿಳಿಸಿದರು,
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ಮತ್ತು ನಸ್ಸೀರ್ ಆಹಮ್ಮದ್ ಸೇರಿದಂತೆ ಜಿಲ್ಲೆಯ ಎಲ್ಲಾ ಕಾಂಗ್ರೇಸ್ ಶಾಸಕರು ಒಕ್ಕೂರಲಿನಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿಯಾಗಿ ಸ್ವರ್ಧಿಸಿರುವ ಡಿ.ಟಿ.ಶ್ರೀನಿವಾಸ ಅವರನ್ನು ಗೆಲ್ಲಿಸಲು ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದೀವೆ. ಕೋಲಾರ ಕ್ಷೇತ್ರದಲ್ಲಿ ಈಗಾಗಲೇ ೩೫ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿದ್ದು ಉಳಿದ ಶಾಲಾ ಕಾಲೇಜುಗಳಿಗೆ ಭೇಟಿ ನೀಡಲು ಸಮಯಾವಕಾಶ ಕಡಿಮೆ ಇರುವುದರಿಂದ ಎಲ್ಲಾ ಶಿಕ್ಷಕರಿಗೆ ಪತ್ರಿಕಾ ಗೋಷ್ಠಿ ಮೂಲಕ ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದರು,
ಪ್ರಶ್ನೆಯೊಂದಕ್ಕೆ ಆಗ್ನೇಯ ಕ್ಷೇತ್ರದ ೫ ಜಿಲ್ಲೆಗಳಲ್ಲಿ ೩೩ ವಿಧಾನಸಭಾ ಕ್ಷೇತ್ರದ ಶಾಸಕರು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಪರ ಕಾರ್ಯನಿರ್ವಹಿಸುತ್ತಿದ್ದು ಅವರ ಗೆಲುವು ಬಹುತೇಕ ಖಚಿತ ಎಂದ ಅವರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ೨೯ ಸಾವಿರ ಬಹುಮತಗಳಿಂದ ಗೆಲುವು ಪಡೆಯುವುದು ಖಚಿತ ಎಂದು ಭವಿಷ್ಯ ನುಡಿದರು,
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ ವಿಧಾನ ಪರಿಷತ್ ಚುನಾವಣೆಯ ಮತದಾರರ ಕ್ಷೇತ್ರದ ವ್ಯಾಪ್ತಿ ಬಹಳ ವಿಶಾಲವಾಗಿದ್ದು ಪ್ರಚಾರದ ಕೆಲಸವು ಸುಲಭವಾಗಿಲ್ಲ. ಕೋಲಾರ ಕ್ಷೇತ್ರದಲ್ಲಿ ೧೫೩೩ ಶಿಕ್ಷಕ ಮತದಾರರು ಇದ್ದಾರೆ. ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿದೆ. ಶೇ ೬೦ ರಷ್ಟು ಮತದಾರರನ್ನು ಈಗಾಗಲೇ ಭೇಟಿ ಮಾಡಲಾಗಿದೆ ಉಳಿದ ಶಿಕ್ಷಕರನ್ನು ಭೇಟಿ ಮಾಡುವ ಪ್ರಯತ್ನದ ಜೂತೆಗೆ ಪ್ರತಿಕಾಗೋಷ್ಠಿಯ ಮೂಲಕ ಮನವಿ ಮಾಡಲು ನಿರ್ಧರಿಸಿದೇವು ಎಂದು ಹೇಳಿದರು
ರಾಜ್ಯದಲ್ಲಿನ ಜನತೆ ಬಿಜೆಪಿ ಆಡಳಿತ ಬೇಸತ್ತು ಬದಲಾವಣೆ ಬಯಸಿ ರಾಜ್ಯದಲ್ಲಿ ೧೩೬ ಶಾಸಕರನ್ನು ಆಯ್ಕೆ ಬಹುಮತ ನೀಡಿ ಅಧಿಕಾರದ ಆದೇಶ ನೀಡಿದ್ದಾರೆ. ಅದೇ ರೀತಿ ವಿಧಾನ ಪರಿಷತ್‌ನಲ್ಲೂ ಬಿಜೆಪಿ ಆಡಳಿತದಲ್ಲಿ ಜಲ್ವಂತ ಸಮಸ್ಯೆಗಳಿದ್ದರೂ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ಕಾಂಗ್ರೇಸ್ ಪಕ್ಷವೂ ತನ್ನ ಪ್ರಣಾಳಿಕೆ ಪ್ರಕಾರ ನುಡಿದಂತೆ ನಡೆವ ಜನರ ವಿಶ್ವಾಸ ಪಡೆದ ಪಕ್ಷವಾಗಿದೆ. ಅಧಿಕಾರ ಹಿಡಿದ ಕ್ಷಣದಿಂದ ೫ ಗ್ಯಾರೆಂಟಿಗಳಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಹಂತ ಹಂತವಾಗಿ ೬ ತಿಂಗಳಲ್ಲಿ ಅನುಷ್ಠನಕ್ಕೆ ತಂದ ವಿಶ್ವಾಸಾರ್ಹ ಪಕ್ಷವಾಗಿದೆ ಇದನೆಲ್ಲಾ ಗಮನಿಸಿರುವ ಶಿಕ್ಷಕರು ವಿಧಾನ ಪರಿಷತ್‌ನಲ್ಲಿಯೂ ಬದಲಾವಣೆ ಬಯಸಿದ್ದು ಕಾಂಗ್ರೇಸ್ ಬೆಂಬಲಿತರಿಗೆ ಆಡಳಿತ ಚುಕ್ಕಾಣಿ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯ ಬಾಲಕಿಯರ ಕಾಲೇಜಿಗೆ ಮತ್ತು ಬಾಲಕರ ಕಾಲೇಜಿನ ಅಭಿವೃದ್ದಿಗಾಗಿ ೩೦ ಕೋಟಿ ರೂಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಚುನಾವಣೆ ಮುಗಿದ ಬಳಿಕ ಎಲ್ಲಾ ಶಾಲಾ ಕಾಲೇಜುಗಳಿಗೆ ಬೇಟಿ ಮಾಡಿ ಸಮಸ್ಯೆಗಳನ್ನು ಬಗೆ ಹರಿಸುವಂತಾಗ ಬೇಕು. ಕೈಗಾರಿಕೆಗಳ ಸಿ.ಎಸ್.ಆರ್ ಅನುದಾನವನ್ನು ಕ್ರೋಡೀಕರಿಸಿ ಕೊಂಡು ಸಮಿತಿ ರಚಿಸಿ ಶಿಕ್ಷಣಕ್ಕೆ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಸದ್ಬಳಿಸಿ ಕೊಳ್ಳುವಂತಾಗ ಬೇಕು, ಈ ಸಂಬಂಧವಾಗಿ ಹಿಂದೆ ಕೆ.ಡಿ.ಪಿ.ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು,
ಸುದ್ದಿಗೋಷ್ಠಿಯಲ್ಲಿ ಹಾಲು ಒಕ್ಕೂಟದ ಮಾಜೆ ನಿರ್ದೇಶಕ ರಾಮಕೃಷ್ಣೆಗೌಡ, ನಗರಸಭೆ ಮಾಜಿ ಸದಸ್ಯ ಜಾಫರ್, ಸಿ.ಸೋಮಶೇಖರ್, ಹಾಲಿ ಸದಸ್ಯ ರಫೀಕ್ ಉಪಸ್ಥಿತರಿದ್ದು,ವೈ ಶಿವಕುಮಾರ್, ಮುರಳಿ, ನವೀನ್, ಮಣಿಯಾದವ್ ಮುಂತಾದವರು ಹಾಜರಿದ್ದರು,