ಶಿಕ್ಷಕರಿಂದಲೆ ಸಧೃಢ ದೇಶ ನಿರ್ಮಾಣ : ಸುಹಾಸಿನಿ ಬೇಹನ್

(ಸಂಜೆವಾಣಿ ವಾರ್ತೆ)
ಔರಾದ್ :ಸೆ.13: ಮನುಷ್ಯ ಯಾಂತ್ರಿಕ ಬದುಕಿನಲ್ಲಿ ಒತ್ತಡದ ನಡುವೆ ಕೆಲಸ ನಿರ್ವಹಿಸುವುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದು ಹೇಗೆ ಎಂಬುದರ ಬಗ್ಗೆ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯದ ಬಿಕೆ ಸುಹಾಸಿನಿ ಬಹೇನ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರಿಂದಲೇ ಸದೃಢ ದೇಶ ನಿರ್ಮಾಣ ಸಾಧ್ಯ ಹಾಗಾಗಿ ನಾವು ಮಾನಸಿಕ ನೆಮ್ಮದಿ ಕಳೆದುಕೊಂಡಲ್ಲಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಮಾನಸಿಕ ಒತ್ತಡ ಹಾಗೂ ಅಶಾಂತಿಯಿಂದಾಗಿ ನೆಮ್ಮದಿ ದೂರವಾಗುತ್ತದೆ. ಸಹಜ ರಾಜಯೋಗದಿಂದ ಸ್ವಾಸ್ಥ ಹಾಗೂ ಆರೋಗ್ಯಕರ ಮಕ್ಕಳ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಔರಾದ್ ಮತ್ತು ಕಮಲನಗರ ತಾಲೂಕಿನ 200ಕ್ಕೂ ಹೆಚ್ಚಿನ ಶಿಕ್ಷಕರಿಗೆ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಬಿಕೆ ಶಾಂತಾ ಬಹೇನ್, ಬಿಕೆ ಛಾಯಾ ಬಹೇನ್, ಜಯಶ್ರೀ ದ್ಯಾಡೆ, ವನೀತಾ ರಾಗಾ, ಅರ್ಚನಾ, ಕಲ್ಯಾಣರಾವ ಶೆಂಬೆಳ್ಳೆ, ಡಿ.ಡಿ ಬೊಳೆಗಾವೆ, ಗಂಗಾರೆಡ್ಡಿ ಇಂದೂರೆ, ಸಂಗಪ್ಪ ಘಾಟೆ, ಗೋವಿಂದರಾವ ಪಾಟೀಲ್, ಚಂದ್ರಕಾಂತ ನಿರ್ಮಳೆ, ಮಲ್ಲಿಕಾರ್ಜುನ ರಾಗಾ, ಮಹಾದೇವ ಲಕ್ಕಾ ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ ಸೇರಿದಂತೆ ಇನ್ನಿತರರಿದ್ದರು.