ಭಾಲ್ಕಿ:ಜು.7: ಶಿಕ್ಷಕರಲ್ಲಿ ಅಧ್ಯಾತ್ಮಿಕ ಮನೋಭಾವವಿರಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ವಿಷಯ ತುಂಬಲು ಸಾಧ್ಯ ಎಂದು ಶ್ರೀ ರಾಮಚಂದ್ರಮಿಷನ್ ಹರ್ಟಫುಲ್‍ನೆಸ್ ಕೇಂದ್ರದ ಪ್ರಶಿಕ್ಷಕ ಕಿಶನರಾವ ಜಾಧವ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ರಾಮಚಂದ್ರಮಿಷನ್ ಅಧ್ಯಾತ್ಮಿಕ ಕೇಂದ್ರದಲ್ಲಿ ನಡೆದ ವಯೋನಿವೃತ್ತ ಶಿಕ್ಷಕ ಜಯರಾಜ ದಾಬಶೆಟ್ಟಿ ದಂಪತಿಗಳಿಗೆ ಎಸ್‍ಆರ್‍ಸಿಎಮ್ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷರಮೇಲೆ ತುಂಬಾ ಭರವಸೆ ಇಟ್ಟಿರುತ್ತಾರೆ. ಶಿಕ್ಷಕರ ಮಾತುಗಳು ವಿದ್ಯಾರ್ಥಿಗಳಿಗೆ ವೇದವಾಕ್ಯವಾಗಿವೆ. ಹೀಗಾಗಿ ಶಿಕ್ಷಕರು ಅಧ್ಯಾತ್ಮಿಕ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಿದಲ್ಲಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಶಿವಕುಮಾರ ಘಂಟೆ ಮಾತನಾಡಿ, ಜಯರಾಜ ದಾಬಶೆಟ್ಟಿಯವರು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದರು. ತಮ್ಮ 36 ವರ್ಷಗಳ ವೃತ್ತಿ ಜೀವನದಲ್ಲಿ ಯಾವುದೇ ಕಳಂಕವಿಲ್ಲದೇ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್‍ಆರ್‍ಸಿಎಮ್ ಅಭ್ಯಾಸಿ ಡಿ.ಡಿ.ಸಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಓಂಕಾರ ನುಚ್ಚಾ, ಮಲ್ಲಿಕಾರ್ಜುನ ಜಗದೇವ, ಪ್ರಜ್ಞಾರಾಜ ಸಿಂಧೆ, ಕಲ್ಪನಾ ಜಾಧವ, ಪದ್ಮಾವತಿ ಸಿಂಧೆ, ವಿಜಯಲಕ್ಷ್ಮಿ ನುಚ್ಚಾ, ಅರುಣಾ ಘಂಟೆ ಉಪಸ್ಥಿತರಿದ್ದರು.
ಬಸವರಾಜ ಹಡಪದ ಸ್ವಾಗತಿಸಿದರು. ಸೋಮಶೇಖರ ವಡ್ಡೆ ಸ್ವಾಮಿ ನಿರೂಪಿಸಿದರು. ಅತುಲ ಜಾಧವ ವಂದಿಸಿದರು.