ಶಿಕ್ಷಕರರು ಸಮಾಜ ಪರಿವರ್ತನೆ ಶಿಲ್ಪಿಗಳು -ಕಾಶೀನಾಥ ಮಡಿವಾಳ

ಚಿಂಚೋಳಿ,ಸೆ.6- ತಾಲೂಕಿನ ಗಡಿಭಾಗದ ಮಿರಿಯಾಣ ಗ್ರಾಮದ ಪೂಜ್ಯ ಶ್ರೀ ಬಸವ ಮಾಚಿದೇವ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ನಿಡಗುಂದಾ ಸಂಚಾಲಿತ ಶ್ರೀಪಾಪನಾಶ ವಿದ್ಯಾಮಂದಿರ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪಬ್ಲಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಗೆ ಶಾಲೆ ಕಾರ್ಯದರ್ಶಿ ಕಾಶೀನಾಥ ಮಡಿವಾಳ ಚಾಲನೆ ನೀಡಿದರು.
ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಕೇವಲ ತರಗತಿಯ ಕೋಣೆಯಲ್ಲಿ ಕಲಿಕೆ ಸಾಲುವದಿಲ್ಲ. ಸಮಾಜದ ಮುಖ್ಯ ವಾಹಿನಿಯಲ್ಲಿ ಕಲಿಕೆ ಕಲಿಸುವ ಮೂಲಕ ಜ್ಞಾನದ ವಿಸ್ತರಣೆ ಆಗಬೇಕು. ಶಿಕ್ಷಕ ಆದುನಿಕ ಯುಗಾದ ಪರಿವರ್ತಕ ನಡೆ – ನುಡಿ ಆದರ್ಶವಾಗಿರಬೇಕು ಮಾನವೀಯ ಮೌಲ್ಯಗಳೇ ಆತನಿಗೆ ನಿಜವಾದ ಆಭರಣಗಳು ಎಂದು ಹೇಳಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕರು ಪಂಚಾಕ್ಷರಯ್ಯ ಸ್ವಾಮಿ ಮದಕಲ್ ಉದ್ಘಾಟಿಸಿದರು. ನಾಗರೀಕ ಗಣ್ಯರಾದ ಜಗನ್ನಾಥ ಸೋಮನೋರ್, ಬಸಯ್ಯ ಸ್ವಾಮಿ ರಾಮತೀರ್ಥ, ಶಾಲೆ ಪ್ರಧಾನ ಅಧ್ಯಾಪಕಿ ಶ್ರವಂತಿ ನರೇಂದ್ರ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮಕ್ಕಳಿಗೆ ಶಿಕ್ಷಕರ ವೇಷ ಭೂಷಣ ತೊಡಿಸಿದ ಅಂದಿನ ಸಂಪೂರ್ಣ ಶಾಲೆ ಜವಾಬ್ದಾರಿ ನೀಡಲಾಯಿತು. ಶಾಲೆ ಶಿಕ್ಷಕಿಯರಾದ ಸಪ್ನಾ, ದೇವಕಿ ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು. ಜಗದೀಶ್ವರಿ ನಿರೂಪಿಸಿ ನೀಲಮ್ಮ ಸ್ವಾಗತಿಸಿ ವೀಣಾ ವಂದಿಸಿದರು. ಹಿರಿಯ ಶಿಕ್ಷಕಿಯರಾದ ಸಂಪೂರ್ಣ, ಅಂಬಿಕಾ, ಶಿವಲೀಲಾ ಮತ್ತು ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಉಪಸತ್ತಿದ್ದರು.