
ಸಿಂಧನೂರು,ಜು.೨೬-
ಸರ್ಕಾರಿ ಶಾಲೆ ಮುಖ್ಯ ಗುರುಗಳ ಮೇಲೆ ಎಸ್‌ಡಿಎಂಸಿ ಅಧ್ಯಕ್ಷ ಹಲ್ಲೆ ನಡೆಸಿದ ಘಟನೆ ಬೂದಿವಾಳ ಕ್ಯಾಂಪ್‌ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಶಿಕ್ಷಕ ಗ್ರಾಮೀಣ ಪೋಲೀಸ್ ಠಾಣೆಗೆ ದೂರು ನೀಡಿದ್ದಾನೆ.
ತಾಲೂಕಿನ ಬೂದಿವಾಳ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ ಬೇರೆ ಕಡೆ ವರ್ಗಾವಣೆಯಾಗಿದ್ದು ಚಾರ್ಜ ಕೊಡುವಾಗ ಶಿಕ್ಷಕನ ಮೇಲೆ ಅಧ್ಯಕ್ಷ ಹಲ್ಲೆ ಮಾಡಿದ್ದಾನೆ. ಈ ಸಂದರ್ಭದಲ್ಲಿ ಸಿಆರ್‌ಸಿ ಸೇರಿದಂತೆ ಶಾಲೆಯ ಇತರ ಶಿಕ್ಷಕರು ಹಾಜರಿದ್ದರು ಎನ್ನಲಾಗಿದೆ.
ಶರಣಪ್ಪ ಬೂದಿವಾಳ ಶಾಲೆಯಿಂದ ಯಲಬುರ್ಗಾ ತಾಲೂಕಿನ ಕುಕನೂರು ಶಾಲೆಗೆ ವರ್ಗಾ ವಣೆಯಾಗಿದ್ದು ಶಾಲೆಗೆ ಮುಖ್ಯೋಪಾಧ್ಯಾರಾಗಿ. ಬಂದ ಭಾರತಿಯವರಿಗೆ ಚಾರ್ಜ ಕೊಡುವಾಗ ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಶಾಲೆಗೆ ಬಂದು ಶಾಲೆ ಕಟ್ಟಡ ಕಟ್ಟಿದು ಉಳಿದ ಕಬ್ಬಿಣದ ರಾಡುಗಳು ಎಲ್ಲಿ ಎಂದು ಕೇಳಿದಾಗ ನನಗೆ ಗೊತ್ತಿಲ್ಲ ಹಿಂದಿನ ಮುಖ್ಯ ಗುರುಗಳನ್ನು ಕೇಳಿ ಎಂದಾಗ ಶಿಕ್ಷಕನ ಅಂಗಿ ಇಡಿದು ಎಳೆದಾಡಿ ಅಧ್ಯಕ್ಷ ಪರಶುರಾಮ ಹಲ್ಲೆ ಮಾಡಿದ್ದಾನೆ.
ಹಲ್ಲೆಗೊಳಗಾದ ಶಿಕ್ಷಕ ಶರಣಪ್ಪ ಅಧ್ಯಕ್ಷ ಪರಶುರಾಮನ ವಿರುದ್ಧ ಗ್ರಾಮೀಣ ಪೋಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಹಲ್ಲೆ ನಡೆಸಿದ ಅಧ್ಯಕ್ಷ ಪರಶುರಾಮನ್ನು ಬಂದಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಶಾಲೆ ಕೆಡವಿ ಹೊಸ ಕಟ್ಟಡ ಕಟ್ಟಿಸಲಾಗಿದೆ ಆಗ ಮುಖ್ಯಗುರುಗಳು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಬೇರೆಯವರು ಇದ್ದರು ನಾನು ಚಾರ್ಜ ತೆಗೆದುಕೊಂಡು ಒಂದು ತಿಂಗಳಾಗಿದೆ ಹಿಂದೆ ಉಳಿದ ಕಬ್ಬಿಣದ ರಾಡ್‌ಗಳ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸಮಜಾಯಿಷಿ ನೀಡಿದರೂ, ಕೇಳದೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಅಂಗಿ ಹಿಡಿದು ಎಳೆದಾಡಿ ಅಧ್ಯಕ್ಷ ಪರಶುರಾಮ ಹಲ್ಲೆ ಮಾಡಿದ್ದು, ಈ ಕುರಿತು ಗ್ರಾಮೀಣ ಪೋಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಹಲ್ಲೆಗೊಳಗಾದ ಶಿಕ್ಷಕ ಶಂಕರಪ್ಪ ಪತ್ರಿಕೆಗೆ ಸ್ಪಷ್ಟನೆ ನೀಡಿದರು.