ಶಿಕ್ಷಕನಿಗೆ ಸಮಾಜದಲ್ಲಿ ಶ್ರೇಷ್ಠಸ್ಥಾನವಿದೆ :ಸೂಗುರೇಶ ವಾರದ

ಶಹಾಪುರ ;ಜು.4: ಶಿಸ್ತು, ಕ್ಷಮೆ, ಕರುಣೆ ಗುಣವನ್ನು ಮಕ್ಕಳಲ್ಲಿ ಬೆಳೆಸುವ ಶಿಕ್ಷಕರು, ಸ್ವಸ್ಥ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗಾಗಿ ವೃತ್ತಿಯಿಂದ ನಿವೃತ್ತಿ ಆದ ಬಳಿಕವೂ ಗೌರವ ಸಿಗುವ ಹುದ್ದೆ ಶಿಕ್ಷಕ ವೃತ್ತಿ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಸೂಗುರೇಶ ವಾರದ ಹೇಳಿದರು.
ಇಲ್ಲಿಯ ಜನನಿ ಮಹಿಳಾ ಪದವಿ ಕಾಲೇಜಿನಲ್ಲಿ ಜಾಲವಾದಿ ಫೌಂಡೇಶನ್ ಹಾಗೂ ಜಾಗೃತಿ ಸಮಾಜ ಸೇವಾದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸಕಿ ಶಕುಂತಲಾ ಜಾಲವಾದಿ ಅವರ ವಯೋ ನಿವೃತ್ತಿಯ ಅಭಿನಂದನಾ, ಸಾಧಕರಿಗೆ ಸನ್ಮಾನ ಮತ್ತು ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನದ ಎರಡನೇ ಗುರು ಶಿಕ್ಷಕ. ಬದುಕಿನ ದಾರಿ ತೋರುವ ಶಿಕ್ಷಕನಿಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವಿದೆ. ಯಾರಿಗೂ ಭೇದಭಾವ ಮಾಡದೆ ಸರಿ ಸಮಾನವಾಗಿ ಶಿಕ್ಷಣ ನೀಡುತ್ತಾನೆ. ಉಪನ್ಯಾಸಕಿ ಶಕುಂತಲಾ ಜಾಲವಾದಿ 37 ವರ್ಷದ ಸೇವೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಧಾರೆ ಎರೆದು ಆದರ್ಶ ಶಿಕ್ಷಕಿ, ಉಪನ್ಯಾಸಕಿ ಎಂದು ಕರೆಯಿಸಿಕೊಂಡಿದ್ದಾರೆ. ಅವರ
ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಸೂಗುರೇಶ ವಾರದ ತಿಳಿಸಿದರು.
ಉಪನ್ಯಾಸಕಿ ಶಕುಂತಲಾ ಜಾಲವಾದಿ ಅವರು ತಾಲೂಕಿನ ಶೈಕ್ಷಣಿಕ ಕ್ಷೇತ್ರದಲ್ಲಿ ಸುದೀರ್ಘವಾಗಿ ಸೇವೆ ಸಲ್ಲಿಸಿ, ಒಂದು ತಲೆಮಾರಿನ ವಿದ್ಯಾರ್ಥಿಗಳಲ್ಲಿ ಅಕ್ಷರದ ಬೀಜ ಬಿತ್ತಿದ್ದಾರೆ. ಆ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ಉತ್ತಮ ಹುದ್ದೆಗಳಲ್ಲಿದ್ದಾರೆ. ಶಿಕ್ಷಕರು, ಉಪನ್ಯಾಸಕರು ಹೇಗಿರಬೇಕು ಎಂಬುದನ್ನು ತೋರಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬರಿಗೂ ಸದಾ ನಗು ನಗುತ್ತಲೆ ಮಾತನಾಡಿಸುವ ಅವರೊಬ್ಬ ಹಸನ್ಮುಖಿ, ಮಾದರಿ ಶಿಕ್ಷಕಿಯಾಗಿದ್ದರು ಎಂದರು.
ಹಿರಿಯ ಪತ್ರಕರ್ತ ಸುಭಾಷ್ ಬಣಗಾರ ಮಾತನಾಡಿ, ಶಿಕ್ಷಕ ವೃತ್ತಿ ಮತ್ತು ಪತ್ರಕರ್ತರು ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಎರಡು ವೃತ್ತಿಗಳಿಗೂ ಅಪಾರ ಗೌರವವಿದ್ದು ಬಹಳಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸ ಬೇಕಾಗುತ್ತದೆ ಎಂದರು. ಪತ್ರಕರ್ತ ಅಶೋಕ ಸಾಲವಾಡಗಿ ಹೇಳಿದರು.
ಉಪನ್ಯಾಸಕ ಡಾ.ಸಂಗಣ್ಣ ರಾಂಪುರೆ, ಕಸಾಪ ಅಧ್ಯಕ್ಷ ಶರಣಬಸಪ್ಪ ಯಾಳವಾರ, ನ್ಯಾಯವಾದಿ ಜಯಲಲಿತಾ ಪಾಟೀಲ್, ಸಾಹಿತಿ ಶಾಂತಪ್ಪ ಬೂದಿಹಾಳ , ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಶ್ರೀ ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ನಿವೃತ್ತ ಉಪನ್ಯಾಸಕಿ ಶಕುಂತಲಾ ಜಾಲವಾದಿ, ಸುರಪುರ ಕಸಾಸಂ ಅಧ್ಯಕ್ಷರಾದ
ಬಸವರಾಜ ಜಮದಖಾನ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಧಕರಾದ ಹಿರಿಯ ಪತ್ರಕರ್ತ ಸ್ಥಾಪಿಸಲಾಗುತ್ತಿದೆ ಸುಭಾಷ್ ಬಣಗಾರ, ಪತ್ರಕರ್ತರ ಸಂಘದ ರಾಜ್ಯ ಪ್ರಶಸ್ತಿ ಪುರಸ್ಕøತ ಅಶೋಕ ಸಾಲವಾಡಗಿ, ಸುಭಾಷ್ ಬಣಗಾರ .
ಉಪನ್ಯಾಸಕ ಡಾ.ಸಂಗಣ್ಣ ರಾಂಪುರೆ ಅವರಿಗೆ ಸನ್ಮಾನಿಸಲಾಯಿತು.
ಡಾ.ಸತ್ಯನಾರಾಯಣ ಆಲದರ್ತಿ, ಗಣೇಶ ಚಿನ್ನಾಕಾರ, ಜಾಗೃತಿ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಕಾಂತ ಮಾರ್ಗೇಲ್ ವೇದಿಕೆಯಲ್ಲಿದ್ದರು. ಹುಣಸಗಿ ಕಸಾಪ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಆಶಯ ನುಡಿಗೈದರು. ಶ್ರೀನಿವಾಸ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಬಣಗಾರ, ಶ್ರುತಿ ಹಿರೇಮಠ ನಿವೃತ್ತಿ ಹೊಂದಿದ ಶ್ರೀಮತಿ ಶಂಕುತಲಾ ಜಾಲವಾದಿ ಅವರನ್ನು ಪರಿಚಯಿಸಿದರು. ದೇವು ಹೆಬ್ಬಾಳ ನಿರೂಪಿಸಿದರು.