ಶಿಕ್ಷಕನಿಗೆ ಜೀವ ಬೆದರಿಕೆ: ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯ


ದಾವಣಗೆರೆ,ಅ.31: ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ಕೋಶಾಧ್ಯಕ್ಷರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ವ್ಯಕ್ತಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಬೇಕೆAದು ಸಂಘದ ರಾಜ್ಯಾಧ್ಯಕ್ಷ ಎಂ.ಪಿ.ಎA.ಷಣ್ಮುಖಯ್ಯ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಹುಬ್ಬಳ್ಳಿಯ ವಿಜಯ ನಗರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಕಳೆದ 30 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ನಮ್ಮ ಸಂಘಧ ಕೋಶಾಧ್ಯಕ್ಷರಾಗೊರುವ ಆರ್.ಎಚ್.ಪಾಟೀಲ್ ಅವರ ಮನೆಗೆ ನುಗ್ಗಿದ್ದ ಜೆಡಿಎಸ್ ಮುಖಂಡ ಗಜಾನನ ಅಣ್ವೇಕರ್ ಮತ್ತು ಆತನ ಇಬ್ಬರು ಸಹಚರರು ಪಾಟೀಲ್ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.
ಹಲ್ಲೆ ನಡೆಸಿದ ಸಂದರ್ಭದಲ್ಲಿ ಬರುವ ವಿಧಾನ ಪರಿಷತ್ ಚುನಾವಣೆ ನಡೆಯುವ ವರೆಗೂ ಸಂಘದ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಅಲ್ಲದೆ, ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಹೇಳುವಂತೆ ಕೇಳಬೇಕು. ಇಲ್ಲದಿದ್ದರೆ, ನಿಮ್ಮನ್ನು ನೇತು ಹಾಕುತ್ತೇವೆಂದು ಜೀವ ಬೆದರಿಕೆ ಹಾಕಿದ್ದಾರೆ. ಇದು ನಿಜ£ಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ನಮ್ಮ ಸಂಘವು ರಾಜಕೀಯೇತರ ಸಂಘವಾಗಿದೆ. ನಾವು ಯಾವುದೇ ಪಕ್ಷದ ಪರವಾಗಿಲ್ಲ. ಆದರೂ, ನಮ್ಮ ಸಂಘದ ಕೋಶಾಧ್ಯಕ್ಷರ ಮೇಲೆ ಹಲ್ಲೆ ನಡೆಸಿರುವ ಗಜಾನನ ಅಣ್ವೇಕರ್ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಹಲ್ಲೆ ನಡೆಸಿದ ಮೂವರನ್ನು ಬಂದಿಸಬೇಕು ಹಾಗೂ ಈ ಘಟನೆಯಲ್ಲಿ ಬಸವರಾಜ ಹೊರಟ್ಟಿ ಅವರ ಹೆಸರನ್ನು ಎಳೆದು ತರಲಾಗಿದ್ದು, ಈ ದುಷ್ಕರ್ಮಿಗಳನ್ನು ಅವರು ಕಳಿಸಿದ್ದರೋ, ಇಲ್ಲವೋ ಎಂಬುದನ್ನು ಹೊರಟ್ಟಿ ಅವರು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕೋಶಾಧ್ಯಕ್ಷ ಆರ್.ಎಚ್.ಪಾಟೀಲ್, ರಾಜು ನೇತ್ರಾಣಿ ಹಾಜರಿದ್ದರು.