ಶಿಕಾರಿಪುರ ಮಾದರಿಯಲ್ಲಿ ಶಿರಾ ಅಭಿವೃದ್ಧಿ ಬಿಎಸ್ ವೈ ಭರವಸೆ

ತುಮಕೂರು, ಅ.30- ತಮ್ಮ ತವರು ಕ್ಷೇತ್ರ ಶಿಕಾರಿಪುರದ ಮಾದರಿಯಲ್ಲಿ ಶಿರಾವನ್ನು ಮಾದರಿ ತಾಲೂಕಾಗಿ ಅಭಿವೃದ್ಧಿ ಮಾಡಲು ಹಣಕಾಸು ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದ್ದಾರೆ.
ತಾವು ಪಕ್ಚದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಆಗಮಿಸಿದ ವೇಳೆ ಸಿಕ್ಜ ಸ್ವಾಗತಕ್ಕೆ ಪ್ರತಿಕ್ರಿಯಿಸಿದ ಅವರು, ಈ ಅಭೂತಪೂರ್ವ ಮೆರವಣಿಗೆ ನೋಡಿ ನಾನು ಶಿಕಾರಿಪುರದಲ್ಲಿ ಇರುವಂತೆ ಭಾಸವಾಗುತ್ತಿದೆ ಎಂದು ಹೇಳಿದರು.
ದೇಶದಲ್ಲೇ ಮೊದಲ ಬಾರಿಗೆ ಭಾಗ್ಯಲಕ್ಷ್ಮಿ ಯೋಜನೆಯನ್ನು ತಂದವನು ನಾನು. ಬೈಸಿಕಲ್ ಯೋಜನೆ ಸೇರಿದಂತೆ ಹತ್ತು ಹಲವು ಯೋಜನೆ ತಂದಿದ್ದೇನೆ. ಈಗಾಗಲೇ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಶಿರಾದಲ್ಲಿ ಅಭಿವೃದ್ಧಿಗೆ ಆಗಬೇಕಿರುವ ಕೆಲಸವನ್ನು ಮಾಡಿಕೊಡುತ್ತೇವೆ. ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಲು ಕ್ರಮವಹಿಸುತ್ತೇವೆ ಎಂದು ಭರವಸೆಗಳ ಮಹಾಪೂರವನ್ನೇ ಹರಿಸಿದರು.
ನವೆಂಬರ್ ಮೂರರಂದು ನಡೆಯಲಿರುಬ ಮತದಾನದಲ್ಲಿ ಪಕ್ಷದ ಅಭ್ಯರ್ಥಿಗೆ ಮತಹಾಕಿ 25 ಸಾವಿರಕ್ಕೂ ಹೆಚ್ವು ಮತಗಳಿಂದ ಗೆಲ್ಕಿಸಬೇಕೆಂದು ಮನವಿ ಮಾಡಿದರು.