ಶಿಂಧೆ ಬಣ ತೊರೆಯಲು ಶಾಸಕರು, ಸಂಸದರ ಒಲವು

ಮುಂಬೈ,ಮೇ. ೩೦- ಶಿವಸೇನೆಯ ಏಕನಾಥ್ ಶಿಂದೆ ಬಣದಲ್ಲಿ ಗುರುತಿಸಿಕೊಂಡಿರುವ ೨೨ ಶಾಸಕರು ಮತ್ತು ೯ ಸಂಸದರು ಶಿಂಧೆ ಸೇನೆ ತೊರೆಯಲು ಬಯಸಿದ್ದಾರೆ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣ ತಿಳಿಸಿದೆ.
ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕಾರ್ಯವೈಖರಿ ಬಗ್ಗೆ ಶಿವಸೇನೆಯ ೨೨ ಶಾಸಕರು,೯ ಸಂಸದರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಶಿವಸೇನೆ ಶಿಂಧೆ ತೊರೆಯಲು ತಯಾರಿ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಶಿಂಧೆ ಬಣದಲ್ಲಿ ಗುರುತಿಸಿಕೊಂಡಿರುವ ೧೩ ಸಂಸದರಲ್ಲಿ ೯ ಮಂದಿ ಉದ್ದವ್ ಠಾಕ್ರೆ ಶಿವಸೇನೆ ಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಸಂಸದರು ಮುಖ್ಯಮಂತ್ರಿ ಏಕನಾಥ ಶಿಂಧೆ ವಿರುದ್ಧವೂ ಅಸಮಾಧಾನಗೊಂಡಿದ್ದು, ಅವರ ಕೆಲಸಗಳು ನಡೆಯುತ್ತಿಲ್ಲ ಮತ್ತು ಅವರನ್ನು ತಿರಸ್ಕಾರದಿಂದ ನಡೆಸಿಕೊಳ್ಳಲಾಗುತ್ತಿದೆ ಎಂದು ಇದು ಶಿಂದೆ ಬಣ ತೊರೆಯಲು ಕಾರಣ ಎಂದಿದ್ದಾರೆ.
ಎನ್‌ಡಿಎ ಸರ್ಕಾರದ ಭಾಗವಾಗಿದ್ದರೂ ಶಿವಸೇನೆಗೆ ಬಿಜೆಪಿ ಮಲತಾಯಿ ಧೋರಣೆ ನೀಡುತ್ತಿದೆ ಎಂದು ಗುಂಪಿನ ಸಂಸದ ಗಜಾನನ ಕೀರ್ತಿಕರ್ ಹೇಳಿದ್ದಾರೆ.
ರಾಜ್ಯ ಸಚಿವ ಶಂಭುರಾಜೇ ದೇಸಾಯಿ ಅವರು ೧೫ ದಿನಗಳ ಹಿಂದೆ ಉದ್ಧವ್ ಠಾಕ್ರೆ ಅವರಿಗೆ ಹೇಗೆ ಉಸಿರುಗಟ್ಟಿಸುತ್ತಿದ್ದಾರೆ ಎಂಬ ಸಂದೇಶವನ್ನು ಕಳುಹಿಸಿದ್ದರು ಎಂದು ರಾವತ್ ಹೇಳಿದ್ದಾರೆ.
ದೇಸಾಯಿ ಅವರು ಉದ್ಧವ್ ಅವರಿಗೆ ಸಂದೇಶ ಕಳುಹಿಸುವುದನ್ನು ನಿರಾಕರಿಸಿದರು ಮತ್ತು ರಾವುತ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ”ಎರಡು ದಿನಗಳ ಮುನ್ನವೇ ಸೂಚನೆ ನೀಡುತ್ತಿದ್ದೇನೆ ಎಂದಿದ್ದಾರೆ.
ಸಂಜಯ್ ರಾವತ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಳ್ಳದಿದ್ದರೆ, ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ, ”ಎಂದು ದೇಸಾಯಿ ಎಚ್ಚರಿಕೆ ನೀಡಿದ್ದಾರೆ.