
ಅಥಣಿ : ಮೇ.6:ಶಾಹೀನ್ ಗ್ರುಪ್ ಆಫ್ ಇನ್ಸ್ಟಿಟ್ಯೂಟ್ ಬೀದರ, ಶಾಖೆ ವಿಜಯಪುರ, ಹಾಗೂ ಅಥಣಿ ತಾಲೂಕಾ ಮೈನಾರಿಟಿ ಸೋಷಿಯಲ್ ಮತ್ತು ವೆಲ್ಫೇರ್ ಕಮೀಟಿಯ ಸಹಯೋಗದಲ್ಲಿ ಪಟ್ಟಣದ
ಅಲ್ಲಾಮಾ ಇಕ್ಬಾಲ ಉರ್ದು ಶಾಲೆಯಲ್ಲಿ ಉಚಿತ ಪಿಯುಸಿ ಪ್ರವೇಶ ಪರೀಕ್ಷೆ ನಡೆಸಲಾಯಿತು.
ಸುಮಾರು 25 ಕ್ಕೊ ಹೆಚ್ಚು ವಿದ್ಯಾರ್ಥಿ/ ವಿಧ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು.
ಈ ವೇಳೆ ಮಾತಮಾಡಿದ ಅಥಣಿ ತಾಲೂಕ ಮೈನಾರಿಟಿ ಸೋಷಿಯಲ್ ಮತ್ತು ವೆಲ್ಫೇರ್ ಕಮೀಟಿ ಅಧ್ಯಕ್ಷ ಆಯಾಜ್ ಮಾಸ್ಟರ ಬೀದರ್ ಜಿಲ್ಲೆಯಲ್ಲಿ ಇರುವ ಶಾಹೀನ್ ಕಾಲೇಜ ಒಂದು ಅತ್ಯುತ್ತಮ ವಿದ್ಯಾಸಂಸ್ಥೆಯಾಗಿದೆ ಈ ಸಂಸ್ಥೆಯಿಂದ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಉಚಿತ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ ಪ್ರತಿ ವರ್ಷ ವಿದ್ಯಾರ್ಥಿಗಳು ಪರೀಕ್ಷೆ ಕೊಡಬೇಕಾದರೆ ಪಕ್ಕದ ಜಿಲ್ಲೆಗೆ ಹೋಗಿ ಪರೀಕ್ಷೆ ಬರೆಯಬೇಕಾಗುತ್ತಿತ್ತು ಆದರೆ ಈ ಬಾರಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಯಾವದೇ ರೀತಿಯ ತೊಂದರೆ ಆಗಬಾರದು ಎಂದು ನಾವು ಶಾಹೀನ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಿಗೆ ನಮ್ಮ ತಾಲೂಕಿನಲ್ಲಿಯೆ ಪರೀಕ್ಷೆ ನಡೆಸಿ ಕೊಡುವಂತೆ ಮನವಿ ಮಾಡಿದ್ದೆವು ನಮ್ಮ ಮನವಿಗೆ ಸ್ಪಂದಿಸಿದ ಅವರು ಅಥಣಿ ತಾಲೂಕಿನಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡಿದರು ನಾನು ವಿದ್ಯಾರ್ಥಿಗಳು ಮತ್ತು ಪಾಲಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಪರೀಕ್ಷೆಯಲ್ಲಿ ಟಾಪ್ 5 ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸಂಪೂರ್ಣ ಉಚಿತ ಪ್ರವೇಶ ನೀಡಲಾಗುವದು ಹಾಗೂ ಮೊದಲ ಟಾಪ್ 10 ವಿದ್ಯಾರ್ಥಿಗಳಿಗೆ ಪ್ರವೇಶ ಫೀ ಯಲ್ಲಿ ಶೇ, 50% ರಷ್ಟು ಕಡಿತ 2ನೇ ಟಾಪ್ ಟೆನ್ ವಿದ್ಯಾರ್ಥಿಗಳಿಗೆ ನಲ್ಲಿ ಶೇ 30 /ಫೀ ರಿಯಾಯತಿ ನೀಡಲಾಗುವದು ಅಥಣಿ ತಾಲೂಕಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಅಲ್ಲಾಮಾ ಇಕ್ಬಾಲ್ ಉರ್ದು ಶಾಲೆಯ ಅಧ್ಯಕ್ಷ ನ್ಯಾಯವಾದಿ ಮೋಹಸಿನ್ ಮುಜಾಹೀದ, ಯುಸೂಫ್ ಮುಲ್ಲಾ, ಶಾಹೀನ್ ಇನ್ಸ್ಟಿಟ್ಯೂಟ್ ನ ಜೇಶಾನ್ ಖತೀಬ್, ಮಹ್ಮದ್ ಪುರಖಾನ್, ಯಾಸೀನ್ ಚೌದರಿ, ಅಜರ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು,