ಶಾಸ್ತ್ರೀ ಮಾರ್ಕೆಟ್‍ನಲ್ಲಿ ಬೆಂಕಿ :ಬೆಚ್ಚಿ ಬಿದ್ದ ಜನ

ವಿಜಯಪುರ: ಗುಮ್ಮಟನಗರಿಯ ಸದಾ ಜನ ನಿಬಿಡವಾಗಿರುವ ನಗರದ ಲಾಲ್ ಬಹಾದ್ದೂರ್ ಶಾಸ್ತ್ರೀ ಮಾರುಕಟ್ಟೆ ಪ್ರಾಂಗಣದಲ್ಲಿ ಅಗ್ನಿ ಆಕಸ್ಮಿಕ ಅವಘಡದಿಂದಾಗಿ ಕೆಲಕಾಲ ಜನತೆ ಬೆಚ್ಚಿ ಬಿದ್ದರು.
ನಗರದ ಹೃದಯ ಭಾಗದಲ್ಲಿರುವ ಮಾರ್ಕೆಟ್ ನಲ್ಲಿ ಏಕಾಏಕಿ ಇಡೀ ಮಾರುಕಟ್ಟೆ ಪ್ರಾಂಗಣದಿಂದ ದಟ್ಟವಾದ ಬೆಂಕಿ ಹಾಗೂ ಹೊಗೆ ಎದ್ದಿದೆ. ಇದರಿಂದ ಅಕ್ಕಪಕ್ಕದ ಅಂಗಡಿಯ ಮಾಲೀಕರು ಗಾಬಯಾದರು.
ಇನ್ನೂ ಈ ಅಗ್ನಿ ಅವಘಡಕ್ಕೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಅವಘಡ ಗಾಂಧಿಚೌಕ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.