(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜೂ.10: ನಗರದ 36ನೇ ವಾರ್ಡಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಪ್ರೇಮಿ ಹಾಗೂ ಉದ್ಯಮಿ ಮಂಜುನಾಥ ಎಲೆಕ್ಟ್ರಿಕಲ್ಸ್ ಮಾಲೀಕ ನಾಗರಾಜ ಅವರು
9 ಸಾವಿರ ರೂ ಮೌಲ್ಯದ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜೆ. ವಿ. ಮಂಜುನಾಥ, ಶಿಕ್ಷಕರಾದ ರಾಜಶೇಖರ, ಬಸವರಾಜ, ಜಿ. ಮಾರುತಿ, ಮತ್ತು ಮೆಡಿಕಲ್ ಸ್ಟೋರ್ ಪ್ರಕಾಶ್ ಅವರು ಸಾಮಾಗ್ರಿಗಳನ್ನು ಸ್ವೀಕರಿಸಿದ್ದಾರೆ.
ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಉಚಿತವಾಗಿ ಎಲೆಕ್ಟ್ರಿಕ್ ಸಾಮಾಗ್ರಿ ನೀಡಿದ್ದು, ನಮಗೆಲ್ಲ ತುಂಬಾ ಸಂತೋಷದ ವಿಷಯವಾಗಿದೆ. ಇವರ ಸೇವೆ ನಮ್ಮ ಶಾಲೆಗೆ ಮೂರನೇ ಬಾರಿ ವಿವಿಧ ರೂಪದಲ್ಲಿ ದೊರೆತಿದೆ, ಇಂತಹ ಉದಾರ ಮನಸ್ಸಿನ ದಾನಿಗಳಿಗೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಸ್ಮರಿಸಿದ್ದಾರೆ.
ನಗರದ ಅನೇಕ ಉದ್ಯಮಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿ ತಮ್ಮ ಕೈಲಾದಷ್ಟು ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೊಡುಗೆ ನೀಡಿದಲ್ಲಿ ಶಾಲೆಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದಿದ್ದಾರೆ.