ಶಾಸ್ತ್ರೀಜಿ ದೇಶ ಕಂಡ ಅಪರೂಪದ ಜನನಾಯಕ

ಕಲಬುರಗಿ: ಜ.11:ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮತ್ತು ಸ್ವಾತಂತ್ರ್ಯದ ನಂತರ ಅದರ ಮೌಲ್ಯಗಳನ್ನು ತಮ್ಮ ಆಡಳಿತದಲ್ಲಿ ಅನುಷ್ಠಾನಕ್ಕೆ ಜಾರಿಗೆ ತರುವ ಮೂಲಕ ಶಾಸ್ತ್ರೀಜಿಯವರು ಭಾರತೀಯರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರು ಅತ್ಯಂತ ಕಾಳಜಿವುಳ್ಳ, ದೇಶಕಂಡ ಅಪರೂಪದ ಮತ್ತು ಮಾದರಿಯ ಜನನಾಯಕರಾಗಿದ್ದಾರೆ. ಅವರು ಆಧುನಿಕ ಭಾರತದ ಅತ್ಯಂತ ಆಕರ್ಷಿಕ ನಾಯಕರಾಗಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ನಲ್ಲಿರುವ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಅವರ 58ನೇ ಪುಣ್ಯಸ್ಮರಣೆ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.
ಸಂಸ್ಥೆಯ ಮುಖ್ಯಸ್ಥ ಅಸ್ಲಾಂ ಶೇಖ್ ಮಾತನಾಡಿ, ಶಾಸ್ತ್ರೀಜಿಯವರು ದಕ್ಷ ಆಡಳಿತಗಾರರಾಗಿದ್ದರು. ಉತ್ತರ ಪ್ರದೇಶದ ಗೃಹ ಸಚಿವರಾಗಿ ಅನೇಕ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನರ ಹೃದಯವನ್ನುಗೆದ್ದರು. ರೇಲ್ವೆ ಸಚಿವರಾಗಿ ಎಲ್ಲೆಡೆ ರೇಲ್ವೆ ಸಂಪರ್ಕ ವಿಸ್ತರಿಸಲು ಶ್ರಮಿಸಿದರು. ದೀನ, ದಲಿತ, ಶೋಷಿತ, ಬಡವ ಮತ್ತು ಮದ್ಯಮ ವರ್ಗದವರಿಗೆ ಸಾಕಷ್ಟು ಯೋಜನೆಗಳು ಜಾರಿಗೆಗೊಳಿಸುವ ಮೂಲಕ, ಅವರ ಎಲ್ಲರ ಬಾಳಿನ ಆಶಾಕಿರಣವಾಗಿ ಕೆಲಸ ಮಾಡಿದರು.
ಕಾರ್ಯಕ್ರಮದಲ್ಲಿ ಶಿವಯೋಗೆಪ್ಪಾ ಎಸ್.ಬಿರಾದಾರ, ಮಹಾದೇವಪ್ಪ ಎಚ್.ಬಿರಾದಾರ, ಸೋಹೆಲ್ ಶೇಖ್, ನಾಹೀದ್ದಿನಿಶಾ ಬೇಗಂ ಸೇರಿದಂತೆ ಇನ್ನಿತರರಿದ್ದರು.