(ಸಂಜೆವಾಣಿ ವಾರ್ತೆ)
ಬಳ್ಳಾರಿ: ಮಹಾನಗರದ 36ನೇ ವಾರ್ಡಿನ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಯುವಕ ಸಂಘ ಹಾಗೂ ನಿಮಗಾಗಿ ನಾವು ಸಂಸ್ಥೆಯ ಸಹಯೋಗದೊಂದಿಗೆ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾದ ನಿಮಗಾಗಿ ನಾವು ಸಂಸ್ಥೆಯ ಅಧ್ಯಕ್ಷ ವಿನಯ್ ಕುಮಾರ್ ಕಾರ್ಯದರ್ಶಿ ಪ್ರಶಾಂತ್, ಲಾಲ್ ಬಹದ್ದೂರ್ ಶಾಸ್ತ್ರಿ ಯುವಕ ಸಂಘದ ಅಧ್ಯಕ್ಷ ಜೆ.ಬಿ. ಮಂಜುನಾಥ್ ಹಾಗೂ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆಯ ಕುರಿತು ಸಾಲುಮರದ ತಿಮ್ಮಕ್ಕ ರವರನ್ನು ನೆನಪಿಸಿಕೊಂಡು ಅವರು ಪರಿಸರದ ಬಗ್ಗೆ ಆಸಕ್ತಿ ವಹಿಸಿರುವುದನ್ನು ಹಾಗೂ ಪ್ರತಿಯೊಬ್ಬರೂ ಸಹ ಗಿಡಮರಗಳನ್ನು ಬೆಳೆಸುವುದರ ಮೂಲಕ ಪರಿಸರವನ್ನು ಕಾಪಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಯುವಕ ಸಂಘದ ಉಪಾಧ್ಯಕ್ಷರಾದ ಕೆವಿ ಶೇಕ್ ಮಲ್ಲಿಕಾರ್ಜುನ್ ಗೌಡ ಬಿ ಸುರೇಶ್ ಮತ್ತು ಶಾಲೆಯ ಶಿಕ್ಷಕರಾದ ಚಂದ್ರಲೇಖ ರಾಜಶೇಖರ್ ಇಂದಿರಾ ಛಾಯಾ ದುರ್ಗಮ್ಮ ಸುಜಾತ ಮತ್ತು ಸೋನಿಯಾ ಗಾಂಧಿ ವಿದ್ಯಾ ಸಂಸ್ಥೆಯ ಬಿ ಎಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.