ಶಾಸನಗಳು ಇತಿಹಾಸದ ಜೀವನಾಡಿಗಳು – ಡಾ.ಸತೀಶಕುಮಾರ ಎಸ್.ಹೊಸಮನಿ

ಕೊಪ್ಪಳ ಏ 17 : ನಗರದ ಸರಕಾರಿ ನೌಕರರ ಭವನದಲ್ಲಿ ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರ ಕೊಪ್ಪಳ ಜಿಲ್ಲೆಯ ಶಾಸನಗಳು ಮತ್ತು ಸಾಂಸ್ಕøತಿಕ ಇತಿಹಾಸ ( ಪರಿಷ್ಕøತ ದ್ವಿತೀಯ ಮುದ್ರಣ) ಹಾಗೂ ಸಂಸಾರ ಸಗ್ಗ (ಪರಿಷೃತ ತೃತಿಯ ಮುದ್ರಣ) ಎರಡು ಕೃತಿಗಳ ಬಿಡುಗಡೆ ಸಮಾರಂಭ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರ ಸಸಿಗೆ ನೀರೆರೆಯುವುದರ ಮೂಲಕ ಚಾಲನೆ ನೀಡಿದ ಬಳಿಕ ಕೊಪ್ಪಳದ ಸಾಂಸ್ಕøತಿಕ ಹಿರೆಮೆಯನ್ನು ಮೆಲಕು ಹಾಕುವುದರ ಮೂಲಕ ಉದ್ಘಾಟನಾ ನುಡಿಗಳನ್ನು ನುಡಿದರು.
ಮುಖ್ಯ ಅತಿಥಿಗಳಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಸತೀಶಕುಮಾರ ಎಸ್. ಹೊಸಮನಿ ಅವರು ಶಾಸನಗಳು ಇತಿಹಾಸದ ಜೀವನಾಡಿಗಳು, ಅವು ಚರಿತ್ರೆಯ ಮೇಲೆ ಬೆಳಕನ್ನು ಚೆಲ್ಲುತ್ತವೆ. ಇಂತಹ ಸ್ಥಳೀಯ ಶಾಸನಗಳ ಆಧ್ಯಯನ ಮಾಡಿದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರ ಶ್ರಮ ಸಾರ್ಥಕವೆಂದರು. ಕೊಪ್ಪಳದ ಗವಿಮಠ, ಶ್ರೀಮಳೆಮಲ್ಲೇಶ್ವರ ದೇವಾಲಯ ಅಲ್ಲದೇ ಸ್ಥಳೀಯ ಕೋಟೆಕೊತ್ತಲಗಳ ಚಾರಿತ್ರಿಕ ಹಾಗೂ ಪ್ರಾಕೃತಿಕ ಸೊಬಗನ್ನು ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ಇಷ್ಟೊಂದು ಚಾರಿತ್ರಿಕ ಇತಿಹಾಸವನ್ನು ಹೊಂದಿದ ಕೊಪ್ಪಳವು ಮುಂಬರುವ ದಿನಗಳಲ್ಲಿ ವಿಶ್ವಮಾನ್ಯತೆಯ ಪ್ರವಾಸಿ ತಾಣವಾಗಬೇಕೆಂದು ಅಭಿಲಾಷೆ ವ್ಯಕ್ತಪಡಿಸಿದರು. ಅಲ್ಲದೇ ಇವರ ಮತ್ತೊಂದು ಕೃತಿ ಸಂಸಾರ ಸಗ್ಗವು ಬದುಕಿನ ಒತ್ತಡಗಳನ್ನು ದೂರ ಮಾಡಬಲ್ಲ ಒಂದು ಉತ್ತಮ ಕೃತಿಯೆಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಹಾಗೂ ಸಹೃದಯರಿಗೆ ಡಿಜಿಟಲ್ ಗ್ರಂಥಾಲಯದ ಸದಸ್ಯತ್ವ ನೋಂದಣಿಯ ಕುರಿತು ಮಾಹಿತಿ ನೀಡುವುದರ ಮೂಲಕ, ಸ್ಥಳದಲ್ಲಿಯೇ ಸದಸ್ಯರನ್ನು ನೋಂದಾಯಿಸಿಕೊಳ್ಳಲು ಕರೆ ನೀಡಿದರು. ಬೆರಳ ತುದಿಯಲ್ಲೇ ಜಗತ್ತು ಎನ್ನುವ ಆಧುನಿಕ ಯುಗದ ಈ ದಿನಗಳಲ್ಲಿ ಡಿಜಿಟಲ್ ಗ್ರಂಥಾಲಯದ ಮಹತ್ವವನ್ನು ಪರಿಚಯಿಸಿದರು.
ಸಾಹಿತಿಗಳಾದ ಎಚ್.ಎಸ್ ಪಾಟೀಲರು ಕೃತಿಗಳನ್ನು ಕುರಿತು ಮಾತನಾಡುತ್ತಾ ಕೊಪ್ಪಳವು ಸಾಹಿತ್ಯಿಕ, ಸಾಂಸ್ಕøತಿಕ, ಧಾರ್ಮಿಕ ಹಾಗೂ ಐತಿಹಾಸಿಕವಾಗಿಯೂ ಬಹಳ ಹೆಸರನ್ನು ಮಾಡಿದೆ. ಕೊಪ್ಪಳ ತಾಲೂಕಿನ ಹತ್ತು ಹಲವು ಶಾಸನಗಳು ಚರಿತ್ರೆಯ ಮೇಲೆ ಬೆಳಕನ್ನು ಚೆಲ್ಲುವುದರ ಮೂಲಕ ಅವುಗಳು ಇಂದಿಗೂ ಪ್ರಸ್ತುತವಾಗಿವೆಯೆಂದರು.
ಪ್ರಾಧ್ಯಾಪಕ ಶರಣಬಸಪ್ಪ ಬಿಳೆಯಲಿ ಅವರು ಅಭಿನಂಧನಾ ಭಾಷಣವನ್ನು ಮಾಡುತ್ತಾ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಒಬ್ಬ ಸಂಶೋಧಕನಾಗಿ ಈಗಾಗಲೇ ಗಮನಾರ್ಹ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಇವರಿಂದ ಇನ್ನೂ ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸಂಶೋಧನಾ ಕಾರ್ಯಗಳು ಜರುಗುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಎಲ್ಲಾ ಬರಹಗಾರರಿಗೂ, ಸಂಶೋಧಕರಿಗೂ ಎಲ್ಲರ ಪ್ರೋತ್ಸಾಹ ಅಗತ್ಯವೆಂದರು.
ಇದೇ ಸಂದರ್ಭದಲ್ಲಿ ವಿ.ಎಸ್.ಕೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ್ ಪೂಜಾರ್, ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ್,ಪತ್ರಕರ್ತ ಹಾಗೂ ಪ್ರಕಾಶಕರಾದ ಜಿ.ಎಸ್.ಗೋನಾಳ್ ಮಾತನಾಡಿದರು.ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳಾದ ಎಂ.ಎಸ್ ರೆಬಿನಾಳ ಹಾಗೂ ಬಳ್ಳಾರಿಯ ನಗರ ಮತ್ತು ಜಿಲ್ಲಾ ಕೇಂದ್ರಗ್ರಂಥಾಲಯದ ಮುಖ್ಯಾಧಿಕಾರಿಗಳಾದ ಶ್ರೀಮತಿ ಲಕ್ಷ್ಮಿ ಕಿರಣ್‍ಕುಮಾರ್ ಉಪಸ್ಥಿತರಿದ್ದರು.
ಸಮಾರಂಭದ ಆಧ್ಯಕ್ಷತೆಯನ್ನು ಸಾಹಿತಿ ವಿಠ್ಠಪ್ಪ ಗೋರಂಟ್ಲಿಇವರು ವಹಿಸಿ ಮಾತನಾಡುತ್ತಾ ಕೊಪ್ಪಳವು ಚಾರಿತ್ರಿಕವಾಗಿ ಬಹುದೊಡ್ಡ ಹೆಸರು ಮಾಡಿದೆ. ಸಾಹಿತ್ಯಕವಾಗಿಯೂ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಇಂತಹ ನೆಲದಲ್ಲಿ ಅನೇಕ ಪ್ರತಿಭೆಗಳು ಹೊರಹೊಮ್ಮುತ್ತಿರುವುದು ಸಂತಸವೆಂದರು.
ಪÁ್ರರ್ಥನೆ ಕು.ಮೇಘಾ ಗುತ್ತಿ, ಸ್ವಾಗತ ಮಾರುತಿ ಗುರಿಕಾರ, ಪ್ರಾಸ್ತಾವಿಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್, ವಂದನಾರ್ಪಣೆ ನಾಗರಾಜ ಡೊಳ್ಳಿನ, ನಿರೂಪಣೆ ಮಹಾಲಕ್ಷ್ಮಿ ಕಂದಾರಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಕೊಪ್ಪಳದ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.