`ಶಾಸನಗಳಲ್ಲಿ ಗ್ರಂಥಾಲಯಗಳು’ ಉಪನ್ಯಾಸ

ಧಾರವಾಡ,ಆ14: ಶಾಸನ ಎಂದರೆ ನಿಯಮ, ವಿಧಿ, ಆಜ್ಞೆಇತ್ಯಾದಿ ಅರ್ಥಗಳು ಇವೆ. ಶಾಸನಗಳಲ್ಲಿ ದತ್ತಿದಾನ ಶಾಸನ, ವೀರಮರಣ ಶಾಸನ, ಮುನಿಗಳು ಸಲ್ಲೇಖನಾ ವೃತತೆಗೆದುಕೊಂಡು ಮರಣ ಹೊಂದಿದ ಶಾಸನಗಳು ಇರುವುದನ್ನಕಾಣುತ್ತೇವೆ. ಇವುಗಳಲ್ಲಿ ಶಿಲಾಶಾಸನ ಮತ್ತು ತಾಮ್ರಶಾಸನಗಳು ಪ್ರಮುಖವಾದವುಗಳಾಗಿವೆ ಎಂದು ಹುಬ್ಬಳ್ಳಿಯ ವಿಶ್ರಾಂತ ಪ್ರಾಧ್ಯಾಪಕಡಾ.ಜೆ. ಎಂ.ನಾಗಯ್ಯಾ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ದಿ.ಪಾರ್ವತೆಮ್ಮ ಬ. ಹೊಂಬಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಗ್ರಂಥಪಾಲಕರ ದಿನಾಚರಣೆ’ ಹಾಗೂ ‘ಶಾಸನಗಳಲ್ಲಿ ಗ್ರಂಥಾಲಯಗಳು’ ಉಪನ್ಯಾಸಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರೆದು ಮಾತನಾಡಿದಅವರು, ಶಾಸನಗಳನ್ನ ಬಿಟ್ಟರೆ ತಾಳೆಗರಿ, ಬೂರ್ಜ ಪತ್ರ, ಕೋರಿ ಕಾಗದಗಳ ಬಳಕೆಯನ್ನು ಮಾಡಿಕೊಂಡು ಗ್ರಂಥಗಳನ್ನು ಬರೆದದ್ದುಉಂಟು, ಕೈಯಿಂದ ಬರೆದದ್ದು ಹಸ್ತಪ್ರತಿ ಅನಿಸಿಕೊಂಡಿತು.ಇವುಗಳನ್ನ ಬರೆಯವುದಕ್ಕಾಗಿ, ಹವ್ಯಾಸಿ ಲಿಪಿಕಾರರು, ವೃತ್ತಿ ಲಿಪಿಕಾರರುಇದ್ದರು.ಆ ಕಾಲದಲ್ಲಿ ಗ್ರಂಥಗಳನ್ನು ಹೊತ್ತುಗೆ, ಕಟ್ಟು, ವಹಿ, ಪುಸ್ತಕ ಇತ್ಯಾದಿ ಹೆಸರುಗಳಿಂದ ಕರೆಯುತ್ತಿದ್ದರು.ಶಾಸನಗಳು ನಮಗೆ ಒಂದೇ ಪ್ರತಿಯಲ್ಲಿ ಸಿಕ್ಕರೆ, ಗ್ರಂಥಗಳು ನಮಗೆ ಹಲವು ಪ್ರತಿಗಳಲ್ಲಿ ಸಿಗುತ್ತವೆ. ಅಧಿಕೃತವಾದ ದಾಖಲೆಗಳನ್ನು ಒದಗಿಸುವಂಥವುಗಳೇ ಶಾಸನಗಳಾಗಿವೆ.
ಗ್ರಂಥಾಲಯಕ್ಕೆರಾಜರು, ಅಧಿಕಾರಿಗಳು ಬೆಂಬಲವನ್ನುಕೊಡುತ್ತಿದ್ದರು.ಜೈನ ಕವಿಗಳಂತು ರಾಜಾಶ್ರಯದಲ್ಲಿದ್ದುಕೊಂಡೇ ಗ್ರಂಥಗಳನ್ನು ರಚಿಸಿದ್ದು ಉಂಟು. ಗ್ರಂಥಗಳ ಬರವಣಿಗೆಗಾಗಿ ಲಕ್ಷಗಟ್ಟಲೇ ಹಣವನ್ನು ವಿನಿಯೋಗಿಸುತ್ತಿದ್ದರು.ಗ್ರಂಥಾಲಯಗಳನ್ನು ಗ್ರಂಥ ಭಂಡಾರ, ಸರಸ್ವತಿ ಭಂಡಾರ, ಸರಸ್ವತಿ ಮಹಲ್‍ಇತ್ಯಾದಿ ಹೆಸರುಗಳಿಂದ ಕರೆಯುತ್ತಿದ್ದರು.ಗುರುಮನೆ ಪುಸ್ತಕ ಭಂಡಾರಗಳು ಇರುತ್ತಿದ್ದವು.ಬೌದ್ಧವಿಹಾರಗಳಲ್ಲಿ ಗ್ರಂಥಾಲಯಗಳು ಇರುತ್ತಿದ್ದವು.
ಕನ್ನೇರಿ ಬೌದ್ಧ ವಿಹಾರದಲ್ಲಿಗ್ರಂಥಾಲಯಇದ್ದ ಬಗ್ಗೆ ರಾಷ್ಟ್ರಕೂಟರ ಶಾಸನದಲ್ಲಿಆಧಾರ ಸಿಗುತ್ತದೆ.ಜಿನಾಲಯಗಳು ಗ್ರಂಥ ಭಂಡಾರವನ್ನು ಹೊಂದಿದ್ದವು. ಅಲ್ಲಿಕಾವ್ಯ, ಶಾಸ್ತ್ರ, ಸಿದ್ಧಾಂತ ಗ್ರಂಥಗಳು ಇದ್ದವು.ನಲಂದಾ ವಿಶ್ವವಿದ್ಯಾಲಯದಲ್ಲಿರತ್ನೋದದಿ ರತ್ನಸಾಗರಗ್ರಂಥ ಭಂಡಾರಗಳು ಇದ್ದವು.ಮಾನ್ಯಖೇಟಾದ ಹದಿನಾಲ್ಕು ಬಸದಿಗಳಲ್ಲಿ ಹದಿನಾಲ್ಕು ಗ್ರಂಥಾಲಯಗಳಿದ್ದ ಬಗ್ಗೆ ತಿಳಿದು ಬರುತ್ತದೆ.ತಾಳಗುಂದ, ಬ್ರಹ್ಮಪುರಿ, ವಿಕ್ರಮಪುರ, ಮೂಡಬಿದಿರೆ, ವರಾಂಗಾ, ಹೊಂಬುಜ ಮೊದಲಾದ ಕಡೆಗಳಲ್ಲಿ ಗ್ರಂಥಾಲಯಗಳು ಇದ್ದು ಲೋಕಕಲ್ಯಾಣಕ್ಕಾಗಿ ಗ್ರಂಥಗಳನ್ನು ಓದುವವರಿಗೆಕೊಡುತ್ತಿದ್ದರು.ಶಿವಾಲಯಗಳು, ಕೋಡಿಮಠ, ಘಟಕ ಸ್ಥಾನಗಳಲ್ಲಿ ಗ್ರಂಥಗಳು ಇದ್ದವುಎಂದರು.
ಅಧ್ಯಕ್ಷತೆ ವಹಿಸಿ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಸಂಘವು ಪ್ರತಿಭಾವಂತರನ್ನು, ಕಲಾವಿದರನ್ನು, ಸಾಧಕರನ್ನು, ಗುರುತಿಸಿ ಸನ್ಮಾನಿಸುವ ಮೂಲಕ ಅನೇಕ ಕಾರ್ಯಕ್ರಮಗಳ ಮೂಲಕ ಪ್ರೋತ್ಸಾಹಿಸುತ್ತಾ ಬರುತ್ತಿದೆ.ಶ್ರೀಮತಿ ಪಾರ್ವತೆವ್ವ ಹೊಂಬಳ ದತ್ತಿ ಮೂಲಕ ಅತ್ಯುತ್ತಮಗ್ರಂಥಪಾಲಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಸಂಘದಕಾರ್ಯ ಶ್ಲಾಘನೀಯಎಂದರು.
ಧಾರವಾಡ ಕ.ವಿ.ವಿಯ ಪ್ರೊ.ಎಸ್.ಎಸ್. ಬಸವನಾಳ ಗ್ರಂಥಾಲಯ ಮುಖ್ಯಸ್ಥರಾದಡಾ.ಅನುಪಮಾಎನ್. ಜೋಶಿ ಅವರನ್ನುಗ್ರಂಥಪಾಲರ ದಿನಾಚರಣೆ ನಿಮಿತ್ತ ಸಂಘದಿಂದ ಗೌರವಿಸಿ ಸನ್ಮಾನಿಸಿದರು.ಸನ್ಮಾನಕ್ಕೆ ಪ್ರತಿಕ್ರಿಯಿಸಿ ನಾಡಿನ ಪ್ರತಿಷ್ಠಿತ ಸಂಸ್ಥೆಯಾದಕರ್ನಾಟಕ ವಿದ್ಯಾವರ್ಧಕ ಸಂಘವು ಹೊಂಬಳ ದತ್ತಿ ಮೂಲಕ ನನ್ನನ್ನು ಸನ್ಮಾನಿಸಿದ್ದು ನನಗೆ ನನ್ನಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ಸಂಘಕ್ಕೆ ಕೃತಜ್ಞತೆ ತಿಳಿಸಿದರು.
ಶಿವ ಬಿದರಕಟ್ಟಿಇವರು ಹೊಂಬಳ ದಂಪತಿಗಳನ್ನು ಸನ್ಮಾನಿಸಿದರು. ವೇದಿಕೆ ಮೇಲೆ ಜಿ.ಬಿ.ಹೊಂಬಳ ಉಪಸ್ಥಿತರಿದ್ದರು.
ಯಾದವರಾವ ಜೋಶಿ ಪ್ರಾರ್ಥಿಸಿದರು.ಶಂಕರ ಕುಂಬಿ ಸ್ವಾಗತಿಸಿದರು.ಗುರು ಹಿರೇಮಠ, ಡಾ.ಸಂಜೀವಕುಲಕರ್ಣಿ, ಡಾ.ಶೈಲಜಾಅಮರಶೆಟ್ಟಿ, ಬಸವಪ್ರಭು ಹೊಸಕೇರಿ ಅತಿಥಿಗಳಿಗೆ ಪುಷ್ಟ ನೀಡಿದರು.ಡಾ. ಮಹೇಶ ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ವೀರಣ್ಣಒಡ್ಡೀನ ವಂದಿಸಿದರು.